Thursday, May 16, 2013

ಸತೀಶನ ಮ್ಯಾರೆಜ್ ಸ್ಟೊರಿ


 ಮರೆಯಾಯಿತು ಮೌನ ಪಿಸುಮಾತನಾಡದೆ,
ನಿನ್ನ ನೆನಪಿನಾ ಅಲೆಗಳು ಹೊರಟಿದೆ ದಿಕ್ಕು ಕಾಣದೆ ಮೆರವಣಿಗೆ,
ಇ ಮುತ್ತಿನಾ ಮಳೆಹನಿಗಳಾ ರಾಶಿ, ಬೀಳುತಿದೆ ನನಗೆ ಸ್ಪರ್ಶವಾಗದೆ,
ನನ್ನೊಡಲ ಕೊರೆತ, ಸೋಲಿನಾ ಮೊರೆತ, ನನ್ನುಸಿರಿನಾ ನಿನ್ನ ಹೆಸರಲ್ಲಿ ದಹಿಸುತಿದೆ ಕೊನೆಯಿಲ್ಲದೆ.

"ಇ ಸಲವಾದರು ಐ.ಎ.ಏಸ್ ಕ್ಲಿಯರ್ ಮಾಡಲೆಬೇÉಕು, ಇನ್ನು ಉಳದಿರೋದು ಎರಡೆ ಚಾನ್ಸಗಳು" ಅಂತ ಸತೀಶ ಮನದಲ್ಲಿ ಗೊಣಗುತ್ತಾ ಬಸ್ಸನಲ್ಲಿ ಕುಳಿತು ಯಾವ ಪುಸ್ತಕ ತಗೆಯಲಿ ಎಂದು ಚಿಂತೆಯ ಕಾಂತಿಯನ್ನು ಹೆಚ್ಚಿಸುತ್ತಾ ತನ್ನ ಬ್ಯಾಗಿನ ಬಾಗಿಲಿಗೆ ತೆರೆ ಎಳೆದಾ, ಸ್ಪರ್ಧಾಚೈತ್ರ ಎನ್ನುವ ಪುಸ್ತಕ ಅವನ ಕೈಯಲ್ಲಿ ಹರಡಿತು, ಅವನ ಪ್ರತಿ ಉಸಿರಲ್ಲು ಐ.ಎ.ಏಸ್ ಅನ್ನುವ ಹೆಸರು ದಹಿಸುತಿತ್ತು. ಇ ಧಗೆಯನ್ನು ತಾಳಲಾರದೆ ನಿಸರ್ಗಕ್ಕು ಕರುಣೆ ಉಕ್ಕಿತು ಅಂತ ಕಾಣುತ್ತೆ, ಸೂರ್ಯನ ಮರೆಮಾಡಿದ ಕಪ್ಪು ಮೋಡಗಳು ಕರಗಲು ಭಾವೊಕ್ತಿಯಿಂದ ನುಸಳಾಡಿದವು. ಗುಡುಗು ಸಿಡಿಲುಗಳಾ ಮೊರೆತಾ ಶಂಖನಾಧದಂತೆ ಝೆಂಕರಿಸಿದವು. ಮುತ್ತಿನಾ ಮಳೆಹನಿ ಬಿಸಿಲಿನಾ ಮತ್ತನ್ನಿಳಿಸಲು ಧುಮುಕಿದವು. ಸತೀಶ ತನ್ನ ಪಕ್ಕದಲ್ಲಿರುವ ಗಾಜಿನ ಕಿಟಕಿ ಎಳೆದು ಮಳೆಯ ಪ್ರಹಾರಕ್ಕೆ ವಿರಾಮವಿಟ್ಟ. ಪುಸ್ತಕದ ಪುಟಗಳು ಒಂದೊಂದಾಗಿ ನನ್ನ ಕಡೆ ನನ್ನ ಕಡೆ ನೊಡು ಎಂದು ಕೂಗಿದವು, ಮಾಡೆಲ್ ಕೊಶ್ಚನ್ಗಳಿರುವಾ ಪುಟ ಅವನ ಕಣ್ಣುಗಳನ್ನಾ ಸೆಳೆದವು. ಒಂದು ಕೊಶ್ಚನ್ ನೊಡಿದ, ಉತ್ತರವನ್ನು ಮನದಲ್ಲಿಟ್ಟುಕೊಂಡು ಕೊನೆಯ ಪುಟದಲ್ಲಿ ಅದು ಸರಿ ಇದೆಯೋ ಇಲ್ಲವೋ ಎಂದು ಪರಿಕ್ಷಿಸಿದಾ. "ಓ ಏಸ್" ಎಂದು ತನ್ನ ಕೈಯಿಂದಾ ಕಾಲಿಗೆ ಹೊಡೆದಾ, ಹಾಗೆ ಇ ಪ್ರಹಾರ ಇನ್ನೊಮ್ಮೆ ಮರುಕಳಿಸಿತು.
"ತಮ್ಮಾ, ಯಾವೂರ್ ನಿಂದ್?" ಎಂದು ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಅರೆಬರೆ ಕೋಪದಿಂದಾ ಕೇಳಿದ. ಸತೀಶನಿಗೆ ಸ್ವಲ್ಪ ದಂಗು ಬಡಿಯಿತು
"ಬೈಲಹೊಂಗಲ್ ರೀ"
"ಈ ಹೊಂಗಲದಾವರ್ ಹಿಂಗ ಅನ್ಹ್, ಯಾವಾಗಲು ಅಡ್ಡ ಇರತಾರು, ಏನ್ ಮಾಡತಿ ಕೆಲಸಾ?"
"ಪ್ರೈಮರಿ ಸ್ಕೂಲ್ ಟೀಚರ್ ಅದೆನ್ರಿ,... ಏನಾತ್ರಿ" ಸತೀಶನ ಮನಸ್ಸಿನ ಗೊಂದಲ ಭೂಮಿಗೆ ಬರದಾಯ್ತು.
"ಕುಡ್ಡ್ ಕುಲಕರ್ಣಿ ಹೆಡ್ಡ ಮಾಸ್ತರಗತೆ, ಹೆಂಗ ಸಾಲಿ ಕಲಸ್ತಿ ಹುಡಗೊರ್ಗಿ"
"ಯಾಕ್ರಿ ಸರ್.... ಏನಾತ್ರಿ...."
"ನೀ ಏಸ್, ಏಸ್ ಅಂತ ಬಡ್ಯಾಕತಿಲಾ, ಅದು ನಿನ್ನ ಕಾಲ ಅಲ್ಲ ನನ್ನ ಕಾಲ ಪಾ, ಬರೀ ಪುಸ್ತಕದ ವಾಸನಿ ಕುಡದ್ರ ಆಗುಲ್ಲಾ, ಭೂಮಿ ವಾಸನಿನು ಕುಡಿಬೇಕು, ಏನ್ ಮಾಸ್ತರೋ ಏನ್" ಅಂತ ಪಕ್ಕದಲ್ಲಿರುವ ವ್ಯಕ್ತಿ ತನ್ನ ಕೋಪವೆಂಬ ಬೆಂಕಿಯನ್ನು ಮಾತುಗಳಾ ನೀರಿನಿಂದ ನೊಂದಿಸಿದ.

.................................................................................................................

"ಊರ ಮಂದಿಗೆ ಪುಸ್ತಕದಾಂದ ಓದಿ ಹೇಳಿ, ಮುಲ್ಲಾ ಸೊರಗಿದ್ದ ಅಂತ"
"ಒಂದ ನಿಮಿಷ" ಅಂತ ಸತೀಶ ಓದುತ್ತಾ ಮನೆಯಲ್ಲಿ ಕುಳಿತಿರುವಾಗ ತನ್ನ ತಾಯಿ ಮಾತಿಗೆ ಪುಲ್ಲ ಸ್ಟಾಪ್ ಹಾಕಿದ, ತನ್ನ ಓದುವ ಪುಟ ಮುಗಿದ ಮೇಲೆ
"ಹಾ ಮುಲ್ಲಾ ಸೊರಗಿದರ ನಾನೇನ್ ಮಾಡಲಿ"
"ನೀ ಹಿಂಗ ಕುಂಡಿ ಸವಿಸ್ಕೊಂತ ಕುರ್ಚಿಮ್ಯಾಲ ಕುಂತ ಓದಾಕತ್ರ ಹೆಂಗ್, ಇರಾವ ನನಗ ಒಬ್ಬ ಮಗಾ, ನನ್ನ ವಂಶದ ಗತಿ ಏನ್"
"ನಿನ್ನವನ್, ನಿನಗೇನ್ ಕಮ್ಮಿ ಆಗೇತಿ, ನಾಳಿ ನಾ ದೊಡ್ಡ್ ಡಿ.ಸಿ ಆಫಿಸರ್ ಆದನಿ ಅಂದ್ರ, ದೊರೆಸಾನಿಗತೇ ಬಾಳತಿ, ಇದಕಿಂತ ನಿನಗ ಏನ್ ಬೇಕ್"
"ನನಗ ನೀನು, ಡಿ.ಸಿ ಅರ ಆಗು, ಕನ್ನಡಾ ಸಾಲಿ ಮಾಸ್ತರರ ಇರು, ಎಲ್ಲಾ ಅಷ್ಟ, ದೊರೆಸಾನಿ ದರ್ಬಾರತಗೊಂಡ ಏನ್ ಮಾಡಲಿ, ನನ್ನ ಮೊಮ್ಮಗನ್ ಉಚ್ಚಿ ಹೊದ ಪುಂಡಿಪಲ್ಲೆ ತಿಂದ ಸಾಯಿಕಿನಾ, ಅಷ್ಟ ಸಾಕ ನನಗ"
"ಮೊಮ್ಮಗನ್ ಉಚ್ಚಿ..... ಅಂದ್ರ ನನಗ ಮದವಿ ಆಗ ಅನ್ನಾಕತಿ, ಆಗುನು ಹೊಗಬೇ, ಇನ್ನೂ ಟೈಮ್  ಐತಿ.."
"ನಾ ಹಿಂಗ ಹೇಳಿ, ಕುಂಡಿ ಮ್ಯಾಲಿನ ಧೂಳ್ ಹೊಡಕೊಂಡ ಹೋಗಾಕ ಬಂದಿಲ್ಲಾ, ಇವತ್ತ ಎರಡರಾಗ ಒಂದ ಆಗಬೇಕ್, ಮೊದಲ್ ಮದುವಿ ಆಗು ಆಮ್ಯಾಲ ನೀ ಡಿ.ಸಿ ಅರ ಆಗು ಪ್ರಸಿಡೆಂಟರ ಆಗು, ಇಲ್ಲಾ ಅಂದ್ರ್ ನನ್ನ ಹೆಣದ ಮ್ಯಾಲ ಅಕ್ಕಿಕಾಳ ಹಾಕಿ ಏನರ್ ಮಾಡ್ಕೊ"
"ನಿಂದ ಬರೇ ಇದ ಆತಿ ನೊಡು, ಮಾವಿನ ಟೊಂಗ್ಯಾಗ ಹಲಸಿನ ಹಣ್ಣ ಸಿಕ್ಕಾಂಗ ಮಾಡ್ತಿ, ನೀ ಸಾಯುಲ್ಲಾ, ನನಗ ದಿನಾ ಹಿಂತಾ ಮಾತ ಕೇಳುದು ತಪ್ಪುಲ್ಲಾ, ಮೊದ್ಲ ನನಗ ಓದಾಕ ಟೈಮ ಸಿಗವಾಲ್ತು, ಅಂತದರಾಗ ನೀ, ಚಪಾತಿ ಹಿಟ್ಟ ತಗೊಂಡ ಕೈ ಲೆ ರೊಟ್ಟಿ ಬಡಿ ಅಂತ ಹೇಳಾಕತಿ, ಬಾಣಂತಿ ಹೆಣಾ ಕಾಯು ಕಿಡಬುಡಕ್ಯಾನ ಗತೆ ನೀನಂತೂ ನನ್ನ ಬಿಡುಲ್ಲಾ, ಆತಿ ತಗೋ ರಾತ್ರಿ ವಿಚಾರ ಮಾಡಿ ಹೆಳ್ತೇನಿ..."
ಸತೀಶನಿಗೆ ಈಗ 32 ವರ್ಷ ವಯಸ್ಸು. ಎಮ್.ಏಸ್.ಸಿ ಮಾಡಿದ್ದಾನೆ, ಐ.ಎ.ಏಸ್ ಓದಲು ಶುರು ಮಾಡಿ 5 ವರ್ಷವಾಯಿತು. ಇ ವರ್ಷ ದೆಲ್ಲಿಗೆ ಕೋಚಿಂಗ ಸೇರಲು ಪ್ಲ್ಯಾನ್ ಮಾಡಿದ್ದಾ. ಅವನ ಐ.ಏ.ಏಸ್ ಆಗಬೆಕೆಂಬ ಛಲದ ಪ್ರೇಮದಲ್ಲಿ, ಮೋಹ ಕಾಮನೆಗಳ ಗೂಡು ಕತ್ತಲೆಯಲ್ಲಿ ಅವಿತಿತ್ತು, ಆಗಾಗ ಸ್ವಲ್ಪ ಬೆಳಕು ಬಂದು ಐ.ಏ.ಏಸ್ ಆಕಾಂಕ್ಷೆ ಜೊತೆ ಯುದ್ದ ಮಾಡಿ ಸೊಲುತಿತ್ತು.
"ನಿಮ್ಮ ಕಾಕಾ(ಚಿಕ್ಕಪ್ಪ) ಒಂದು ಹೆಣ್ಣ ನೋಡ್ಯಾನ ಅಂತ್, ಇಲ್ಲೆ ಬೆಳಗಾವಿದಾಗ, ಪೊಷ್ಟ ಆಫಿಸ್‍ನ್ಯಾಗ ಕೆಲಸಾ ಮಾಡ್ತಾಳಂತ, ನಿನ್ನೆ ಪೋನ್ ಮಾಡಿದ್ದಾ, ಯಾವ್ಯಾವ ವಯಸ್ಸನ್ಯಾಗ ಏನೇನ ಆಗ್ಬೆಕೊ, ಅವ ಆದ್ರ ಚೆಂದ ಇಲ್ಲಾ ಅಂದರ ಜೀವನಾ ಹೊಳ್ಯಾಗ ಹುಂಚಿ ಹಣ್ಣ ತೊಳದಾಂಗ ಅಂತ ನಿನಗ ಹೇಳು ಅಂತ ಹೇಳಿದ, ನೋಡ್ ನೀನು ತಿಳಿದಾವ ಅದಿ, ವಿಚಾರಮಾಡ..."
ರಾತ್ರಿಯಲ್ಲಾ ತಾಯಿಯ ಇ ಮಾತುಗಳು ಮನದ ಅಲೆಗಳÀನ್ನು ತಟ್ಟುತ್ತಾ, ಸತೀಶನ ನಿದ್ದೆಯನ್ನು ನಿರಾಯುಧÀಗೊಳಿಸಿದವು.

...............................................................................................................

"ಹೂಂ ಜಲ್ದಿ(ಬೇಗ) ಜಲ್ದೀ, ಅಡಗಿ ಮಾಡಿ ಊಟಾ ಕಟ್ಟ ಇನ್ನ, ಸಾಲಿಗಿ ಹೋಗ್ಬೆಕ್, ಲೇಟ್ ಆಕ್ಕೇತಿ"
"ಕಟ್ಟತೇನಿ ತಡಿ ಅಟ್, ಹಂದಿ ಹಿಡ್ಯು ಗೊಲ್ಲರಾವರಗತೇ, ಅಷ್ಟ್ಯಾಕ ಅವಸರಾ ಮಾಡತೀ", ಸತೀಶ ಪೆಪರನಾ ಮುಕಪುಟತಿರುವಿ ಹಾಕುತಾ ಒಮ್ಮೆ ತನ್ನ ತಾಯಿ ಕಡೆ ನೋಡಿ ಸುಮ್ಮನಾದ.
"ಹುಡಗಿ ನೋಡುದರ ಬಗ್ಗೆ ಏನ್ ವಿಚಾರ ಮಾಡಿದಿ, ನನಗೂ ವಯಸ್ಸ ಆತಿ, ಹಿಂಗ ಜಲ್ದಿ ಜಲ್ದಿ ಮಾಡು ಅಂದ್ರ ನನ್ನ ಕೈಲೆ ಆಗುಲ್ಲಾ, ಇ ಅವಾಜಲ್ಲಾ ಬರತಾಳಲಾ ಅವಳ ಮುಂದ ಇಟಗೋ"
"ಎಮ್ಮಿ ಕೆರಿಗಿಳದ್ರ, ಕ್ವಾಣಾ ಬಯಲಕ್ಕಿಳಿತಂತ, ಏನರ್ ಮಾತಾಡಿದರು, ನೀ ಬರೆ ಅದಕ ಹೋಗ್, ಹೂಂ ಆತಿ ತಗೊ, ಕಾಕಾಗ ಹೇಳ್ ಅನ್ನು, ನೋಡಾಕ ಬರ್ತಾರು ಅಂತ, ನಾಳಿ ಆಯ್ತಾರ್(ರವಿವಾರ) ನೋಡಿ ಬರುನು" ಸತೀಶನ ತಾಯಿಗೆ ಸಂತೆಯಲ್ಲಿ ಹುಗ್ಗಿ ಉಂಡಸ್ಟು ಖುಷಿ ಆಯಿತು, ಬೇಗ ಬೇಗ ಅಡುಗೆ ಮಾಡಿ, ಊಟದ ಡಬ್ಬಿ ರೆಡಿ ಮಾಡಿದಳು.
"ಸುಮ್ನ ಅಷ್ಟುರು ಗಾಡಿ ಮಾಡಕೊಂಡ ನೋಡಾಕ ಹೋಗುದು ಕರ್ಚ ಆಕ್ಕೇತಿ, ನಿಂಗ ಬಿಡವ ಇದ್ದಾಗ, ಅಲ್ಲೆ ಪೊಸ್ಟ ಆಫಿಸ್ ಗೆ ಹೋಗಿ ನೀನ ನೋಡ್ಕೊಂಡ್ ಬಾ, ಹುಡಗಿ ಚೆಂದ ಇದ್ಳಂದ್ರ ಬೇಕಾರ್ ಅಷ್ಡುರು ಗಾಡಿ ಮಾಡಕೊಂಡ ಹೋಗಿ, ಹಣ್ಣ ಹಾಕೊಂಡ ಬರುನು"
"ಹೂಂ ಆಯ್ತ ಬೇ, ನಾ ನಡಿತೆನ್ ಇನ್ನ ಸಾಲಿಗೆ" ಅಂತ ಸತೀಶ ತನ್ನ ಬ್ಯಾಗಿನಲ್ಲಿ ಊಟದ ಡಬ್ಬಿ ಇಟ್ಟುಕೊಂಡು ಹೋಗಲು ರೆÀಡಿ ಆದ.
"ಹಂಗ್ ಹೋಗಾಕತ್ತಿಲಾ ಆರರಾಗ ಹುಟ್ಟಿದಾವ್ರಗತೆ, ಆಕಿ ಹೆಸರ್ ಗಿಸರ್ ಏನು ಕೇಳುಲ್ಲಾ"
"ಹಾ ಮರತ್ನೊಡು, ಏನ್ ಅಕಿ ಹೆಸರಾ"
"ವೈಶಾಲಿ ಬಾಣಸವಾಡಿ ಅಂತ್, ಅಲ್ಲೇ ಬೆಳಗಾವಿದಾಗ ಇರತಾರಂತ, ಅವರ ಅಪ್ಪಾ ಹತ್ತಿ ಮಿಲ್ಲನ್ಯಾಗ ಕೆಲಸಾ ಮಾಡತಾನಂತ ನೋಡ್"
"ಹು ಆತಿ, ಬಿಟ್ರ ಹಳಬರ್ಗತೆ ಅವರ್ದ ವಂಶದ್ದು ಹೇಳಿಗಿದ್ದಿ, ನಡಿತೇನಿ ನಾ ಇನ್ನ" ಅಂತ ಹೇಳಿ ಸತೀಶ ತನ್ನ ಕಾಲಿಗೆ ಬುದ್ದಿ ಹೇಳಿದ

...................................................................................................................

ಸತೀಶನಿಗೆ ಮದ್ಹ್ಯಾನ್ ಊಟವಾದಮೇಲೆ ಅವನ ತಾಯಿ ಹೇಳಿದಾ ಮಾತು ನೆನಪಾಗಿ, ಪೊಷ್ಟ ಆಫಿಸ್‍ಗೆ ಬಂದ. ಅದು 3 ಮಹಡಿಯ ಕಟ್ಟಡ, ಮೊದಲನೆ ಮಹಡಿಗೆ ಬಂದು ನೋಡಿದ, ಎಲ್ಲರು ಕಾಯಕವೇ ಕೈಲಾಸ ಎನ್ನುವ ತತ್ವಕ್ಕೆ ನಾಂದಿ ಹಾಡುತ್ತಿದ್ದರು, ತನ್ನ ಮನಸ್ಸಿನ ಭಾವನೆಗಳ ರೂಪ ತಂದು ಅದರ ಪ್ರತಿಬಿಂಬಕ್ಕಾಗಿ ತಡಕಾಡಿದ, ವಯಸ್ಸಾದವರು, ಯುವಕ ಯುವತಿಯರು ಇದ್ದರು. ಒಳಗೆ ಪ್ರವೇಶವಿಲ್ಲದ ಕಾರಣ, ಆ ಪ್ರತಿಬಿಂಬಕ್ಕಾಗಿ ಗೂಗಲ್ ಸರ್ಚ ಮಾಡಿದ, ಅವರಿರಬಹುದಾ ಇವರಿರಬಹುದಾ ಅಂತ ನೋಡಿದ, ಮಂಗಳ ಸೂತ್ರ, ಕಾಲುಂಗರದ ಜೊತೆಗೆ ಹೋಲಿಸಿ ಒಂದಾಂದಾಗಿ ನೋಡಿದ, ಕೊನೆಗೆ ಅವನ ರಿಸಲ್ಟ ನಾಟ್ ಫೌಂಡ ಅಂತ ಬಂತು. ಕೊನೆಗೆ ಯಾರನ್ನಾದರು ಕೇಳೊನ್ವಾ ಅಂತ ಅಂದುಕೊಂಡ, ಇನ್ನೂ ಎರಡು ಮಹಡಿ ಹುಡಕಿದಮೇಲೆ ಕೇಳಿದರಾಯ್ತು ಅಂತ ಸುಮ್ಮನಾದ, ಮೇಲಿರುವಾ ಎರಡು ಮಹಡಿಗಳಲ್ಲು ಗೂಗಲ್ ಸರ್ಚ ಆಯಿತು ಮತ್ತದೇ ಉತ್ತರ, ಕೊನೆಗೆ ಮತ್ತೆ ಕೆಳಗಡೆ ಮಹಡಿಗೆ ಬಂದು ಯಾರನ್ನಾದರು ಕೇಳಿದರಾಯ್ತು ಅಂತ ಲೆಕ್ಕಹಾಕಿದ,
ನಮ್ಮ ಅವ್ವ ನೋಡಿದರ, ದೂರಿಂದಾ ನೊಡಕೊಂಡು ಬಾ ಅಂದಾಳು, ನಾ ಯಾರ್ನಾದ್ರು ಕೇಳಿ, ಅವಳ ಹತ್ರಾ ಹೋಗಿ ಹೀಗೆ ಹೀಗೆ ಅಂತ ಹೇಳೂದು ಸರಿ ಇರುಲ್ಲಾ, ಸುಮ್ನ ಯಾರ್ನಾದರು ಕೇಳಿದರು ಅವರು ಯಾಕೆ ಬೇಕು ಅಂತ ಕೇಳಿದರೆ ಏನ್ ಹೇಳುದು ಅಂತ ಸತೀಶ ಗೊಂದಲಮಯ ಲೊಕಕ್ಕೆ ಪಾದರ್ಪಣೆ ಇಟ್ಟ, ಏನ್ ಮಾಡಬೇಕಂತಾ ತಿಳಿಯಲಿಲ್ಲಾ, ಅಷ್ಟರಲ್ಲಿ ಒಬ್ಬ ಪೊಷ್ಟಮನ್ ಹಲವು ಪತ್ರಗಳನ್ನಾ ಹೊಂದಿಸಿಕೊಂಡು ಹೊರಗೆ ಹೋಗ್ತಾ ಇದ್ದಾ, ಹೆಂಗು ರವಿವಾರವಾದ ಆದಮೇಲೆ ಸೊಮವಾರ ಬರಲೆ ಬೇಕು ಅಂತ
"ಸರ್, ಇಲ್ಲಿ ವೈಶಾಲಿ ಅನ್ನೊವರು, ಎಲ್ಲಿ ಇರತಾರ್ ರಿ" ಅಂತ ಕೇಳಿದಾ, ಅವನು ಸ್ವಲ್ಪ ಇವನನ್ನು ಮೆಲಿಂದ ಕೆಳಗಡೆ ನೋಡಿದಾ, ಅವನ ನೋಟವನ್ನು ನೋಡಿ ಇವನಿಗೂ ಹೆದರಿಕೆಯಾಯಿತು.
"ಹಾ ಅವರಾ, ಇಲ್ಲೆ ಕೆಲಸಾ ಮಾಡ್ತಾರು, ನೀವೇನ್ ಆಗ್ಬೇಕು ಅವರಿಗೆ" ಸತೀಶನಂತು ಪುಸ್ತಕದ ಬದನೆಕಾಯಿ, ಅವನ ತಾಯಿ ದೂರಿಂದಾ ನೋಡ್ಕೊಂಡು ಬಾ ಅನ್ನೊದೊಂದೆ ತಲೇಲಿ ಇತ್ತು, ಏನೆ ಆಗಲಿ ಅಂತ ಕೇಳಿ ಬಿಟ್ಟ, ಈಗ ಏನು ಹೇಳಬೇಕಂತಾ ತಿಳಿಲಿಲ್ಲಾ, ಬೆವರಿನಾ ಮೊಳೆತಾ ಚಿಗುರೊಡೆದು ಗಿಡವಾಗಿ ಮೈಯಲ್ಲಾ ನಿಂತಿತು.
"ಏನು ಇಲ್ಲಾ ರೀ, ನಾನು.... ನಾನು..." ಅನ್ನೊ ರಾಗಕ್ಕೆ ಸಡನ್ನಾಗಿ "ಅವರ ರಿಲೆಟಿವ್ ಆಗ್ಬೆಕ್ರಿ " ಅಂತ ಟ್ಯೂನ್ ಕೊಟ್ಟ, ಪೊಸ್ಟಮನ್ ಇವನನ್ನಾ ಒಮ್ಮೆ ಡೌಟ್ ಬಂದವರ ತರಾ ನೋಡಿದ, ಸತೀಶನಿಗೆ ಕಾಲ್ನಡುಗು ಶುರುವಾಯಿತು..
"ಮಲ್ನಾಡ್ ಕಡೆದಾವ್ರ ಏನ್ರೀ, ನಿಮಗ ಬಿಸಲ್ ಬಾಳ್ ಆಗುಲ್ಲ ಕಾಂತೆತ್ರೀ, ಗಳೆ ಹೊಡದ ಎತ್ತಿನಗತೇ ಬೆವರಾಕತೆರ್ರೀ" ಎಂಬ ಪೊಸ್ಟಮನ್ ಮಾತಿಗೆ ಸತೀಶನಿಗೆ ಏನ್ ಹೇಳ್ಬೇಕು ತಿಳಿಲಿಲ್ಲಾ.
"ಹುನ್ರೀ... ಹುನ್ರೀ..." ಅಂತ ಮುಗಳ್ನಕ್ಕಾ.
"ಬರ್ರೀ, ತೊರಿಸ್ತಿನಿ, ಒಳಗಡೆ ಅದಾರು"
"ಇರ್ಲಿ, ಬಿಡ್ರಿ, ಮತ್ತ ನಿಮಗ್ಯಾಕ ತ್ರಾಸು, ನೀವ್ ದೂರಿಂದ ತೊರಿಸಿದ್ರ್ ಸಾಕ್"
"ನೆನಗಡ್ಲಿ ಕೊಟ್ಟ, ಬೆಲ್ಲಾ ಕೊಡಲಿಲ್ಲಾ ಅಂದರ ಹೆಂಗ, ಹತ್ತ ಹಡದಾಕಿಗಿ ಇನ್ನೊಂದ ಹಡ್ಯುದ ತ್ರಾಸ್ ಅಲ್ಲ ಬರ್ರಿ" ಸತೀಶನಿಗೆ ಹೆಜ್ಜೆ ಕೀಳಲು ಆಗ್ತಾ ಇಲ್ಲಾ, ಮನದಲ್ಲೆ ಇದೊಳ್ಳೆ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡೆನಲ್ಲಾ, ಅವಳು ಇವರಾರು ನನಗೆ ಗೊತ್ತೇ ಇಲ್ಲಾ ಅಂದರೆ ಏನು ಗತಿ, ಸುಳ್ಳು ಹೇಳಿ ಹುಡಗಿನಾ ಕಾಡಿಸಲಿಕ್ಕೆ ಬರ್ತಿಯಾ ಅಂತ ಧರ್ಮದೇಟು ಬಿದ್ದರೆ ಏನು ಗತಿ ಅಂತ ತನ್ನ ದ್ವಂದಗಳಿಗೆ ಒಗ್ಗರಣೆ ಹಾಕಿದ, ಅದರ ಜೊತೆ ನಿರಾಸಾದಾಯಕ ನಡಿಗೆಗಳನ್ನಾ ಹಾಕಿದ, ಇರ್ಲಿ ಬಿಡು ಏನಾದರು ಆದರೆ ಹುಡಗಿನ ನೋಡು ಅಂತ ಮನೆಯವರು ಹೇಳಿ ಕಳಿಸಿದ್ರು, ಅದಕ್ಕೆ ಬಂದೆ ಎಂದು ಅಂದರಾಯಿತು ಅಂತ ಮನಸ್ಸಿಗೆ ಸಮಾದಾನ ಮಾಡಿಕೊಂಡ.
"ಅವರ ನೋಡ್ರಿ" ಅಂತ ಪೊಸ್ಟಮನ್ 10 ಅಡಿ ದೂರಿಂದಾ ತೊರಿಸಿದ, ಸತೀಶ ಹಿಂದಿನಿಂದಾ ಹುನ್ರಿ ಅಂತ ಅಂದಾ, ಇವನಿಗೆ ಇನ್ನೂ ಭಯ ಜಾಸ್ತಿ ಆಯಿತು.
"ವೈಶಾಲಿ ಮೆಡಮ್, ನಿಮ್ನ ನೋಡಾಕ್ ಯಾರೋ ನಿಮ್ಮ ರಿಲೆಶನ್ ದಾವರು ಬಂದಾರ ನೋಡ್ರಿ" ಅಂತ ಪೊಸ್ಟಮನ್ ಹಿಂದೆ ಕೈ ಮಾಡಿ ಹೇಳಿದ.
"ಯಾರ್ರಿ...... ಯಾಕ್ರಿ ಸರ್, ನೆತ್ತಿ(ತಲೆ) ಸುಡು ಹೊತ್ತಿನಾಗ, ಬಳ್ಳ್ ಹಾಕಿ ಫ್ಯಾನ್ ತಿರಗಸ್ತೇರಿ..., ಅಲ್ಲಿ ಯಾರು ಇಲ್ಲ...." ಪೊಸ್ಟಮನ್ ಹಿಂದೆ ತಿರುಗಿ ನೋಡಿದ, ಸತೀಶನ ನೆರಳಿನ ಸದ್ದು ಕೂಡ ಇರಲಿಲ್ಲ.

.........................................................................................................................

"ಏನಪಾ, ಎಂತಾ ಹೆಣ್ಣ ನೋಡಿ ನನ್ನ ಮಗಗ್ಗ, ನನ್ನ ಮಗಗ್ಗ ಏನ್ ಕಮ್ಮಿ ಆಗೇತಿ ಅಂತ ಹಂತಾ ಹೆಣ್ಣ ಹುಡಕಿ, ಕನ್ನಡಾ ಸಾಲಿ ಮಾಸ್ತರ್ ಅದಾನು, ಗೊವರ್ನಮೆಂಟ್ ನೌಕರಿ... ಐ.ಏ.ಏಸ್ ಒದಾಕತಾನು, ಹುಡಗಿ ಸೊಡಾ ಬುಡ್ಡಿ ಅದಾಳಂತಾ, ವಯಸ್ಸಾಗ್ಯವಂತಾ, ಹಿಂತಾ ಹೆಣ್ಣ ನೋಡುದಾದ್ರ, ನಮ್ಮ ಓಣಿ ಕಡೆ ಹನಿಕಿ(ಇನುಕಿ) ಹಾಕಾಕ ಹೋಗ್ಯಾಡ ನೊಡ್" ಅಂತ ಸತೀಶನ ತಾಯಿ ದೊರೆಸಾನಿ ತರಾ ಸತೀಶನ ಚಿಕ್ಕಪ್ಪನಿಗೆ ಪೊನಿನಲ್ಲಿ ಬೆಯ್ದಳು.
"ನನಗೆನ ಗೊತ್ತವಾ, ಹುಡಗಿ ಕೆಸರಾಗ ಬೆಳದ್ರು ಕಮಲದ ಹೂ ಅಂತ ಹೇಳಿದ್ರು, ಮಕಮಲ್ ಅರವಿ(ಬಟ್ಟೆ)ಯಾಂಗ, ತೊಳದ ಮುಟ್ಟಬೆಕ ಅಂತ ಹೆಳಿದ್ದಕ್ಕ, ತಕ್ಕ ವರಾ ಅಂತ ಹೇಳಿನ್ನಿ, ನಾ ನಡಕ ಇರಾವ್ರಿಗೆ ಪೊನ್ ಮಾಡಿ ಬೆಯ್ತೆನಿ ಬಿಡ, ಅದಕ್ಯಾಕ ಸುಡು ಎನ್ಯಾಗ ಕರಿಬೆವ ಹಾಕಿದಾವ್ರಗತೆ ಮಾತಾಡಾಕತಿ, ನನಗೂ ಮಗಾ ಅಗ್ಬೇಕ್ ಅವ, ಹಂಗ್ಯಾಕ ಮಾತಾಡ್ತಿ" ಅಂತ ಸೌಮ್ಯದ ಮರು ಉತ್ತರ ಹೇಳಿದ ಸತೀಶನ ಚಿಕ್ಕಪ್ಪಾ.
"ಆಯ್ತು, ಇನ್ನೊಮ್ಮೆ ಹಿಂತಾ ಸಂಬಂದಾ ತರಾಕ ಹೋಗಬ್ಯಾಡ್ ನಮಗ, ನಡಕಿನಾವ್ರಿಗು ಹೇಳ್ ಅಟ" ಅಂತ ಸತೀಶನ ತಾಯಿ ಪೊನ್ ಕಟ್ ಮಾಡಿದಳು.
"ನನಗ ಇ ಮದ್ವಿ ಗಿದ್ವಿ ಬ್ಯಾಡಬೇ, ನಾವ ಅವರನ್ನ ನೋಡಾಕ ಹೋಗುದು, ನಮ್ಮನ್ನ ನೋಡ್ಕೊಂಡ ಹೋಗಾಕ ಅವ್ರ ಬರುದು, ಹಣ್ಣ ಹಾಕುದು, ಶ್ಯಾವಿಗಿ ಉಣ್ಣುದು, ಇ ಜಾತಕ ಗಿತಕಾ ಹೊಂದುದು, ಇ ಬಸ್ಟಗಿ, ಇ ಲಘ್ನಾ, ನನ್ನ ಟೈಮ್ ಬಾಳ್ ವೆಸ್ಟ ಆಕ್ಕೆತಿ, ನಿನಗ ಮದವಿನ ಬೇಕಲೊ ಸುಮ್ನ ಹೊಗಿ ರೆಜಿಸ್ಟರ್ ಮ್ಯಾರೆಜ ಮಾಡ್ಕೊಂಡ ಬಂದಬಿಡ್ತೇನಿ, ಟೈಮ್ ಮತ್ತ ರೊಕ್ಕಾ(ದುಡ್ಡು) ಎಲ್ಲಾ ಉಳಿತಾವ್"
"ನಿನಗ್ ಹೇಳುದು, ಆ ದ್ಯಾಮವ್ವನ ಗುಡ್ಯಾಗ ಇರು ಬಿದರ್ ಗೊಂಬಿಗಿ ಹೇಳುದು ಎರಡು ಒಂದ್, ಮದವಿ ಅಂದ್ರ ಎನ್ ಅನಕೊಂಡಿ, ಅದೆನ್ ಪುಸ್ತಕ್ ಒದಿದಾಂಗ ಅಂತ ತಿಳಕೊಂಡಿ ಎನ್, ನೀ ಸಾಯುತನಾ ಅಕಿ ಜೊತೆ ಚಲೊತಗ ಬಾಳಬೇಕಂದ್ರ ಇವನ್ನೆಲ್ಲಾ ನೊಡ್ಬೇಕ್, ಜೊಡಿ ಎತಗೊಳ್ ಬರೊಬ್ಬರ ಹೆಜ್ಜಿ ಹಾಕಿದರ ಚಕಡಿ ಅರಾಮಾಗಿ ಹೊಕ್ಕೆತಿ ಇಲ್ಲಾ ಅಂದ್ರ ಮುರಕೊಂಡ ಬಿಳ್ತೆತಿ, ಮಂದ್ಯಾಗ ಬಾಳು ಅಟ, ಎನು ಅಂತ ಗೊತ್ತಾಕ್ಕೆತಿ, ರೆಜಿಸ್ಟರ್ ಮ್ಯಾರೆಜ ಆಗಾವಂತ... ಇಲ್ಲಿ ಸಲ್ಲದವನು ಎಲ್ಲಿಯು ಸಲ್ಲುದಿಲ್ಲಾ ಅಂತ ಬಸವಣ್ಣ ಹೇಳಿದ್ದ ಗೊತ್ತೈತೊ ಇಲ್ಲೊ, ಇಗ ಟೈಮ ಸಿಗವಾಲ್ತಂದ್ರ ನಾಳಿ ಡಿ.ಸಿ ಆದ ಮ್ಯಾಲ ಟೈಮ್ ಆಕಾಶದಿಂದ ಬಂದ ಬಿಳತೇತಿ ನಿನಗ"
"ಇದೆಲ್ಲಾ ಗೊತ್ತಿಲ್ಲ ನನಗ್, ನೀ ಎನರ್ ಮಾಡ್ಕೊ, ನನ್ನ ತಲಿ ಮ್ಯಾಲ ತರಾಕ ಹೋಗಬ್ಯಾಡಾ,.... ಆತಿ ಹೋಗ ಇನ್ನ, ನಿನ್ನ ಪುರಾಣ ಕೇಳಿ ಸಾಕಾತಿ, ನಾ ಒದಬೆಕ್" ಅಂತ ತಾಯಿ ಮಗನಾ ವಾಗ್ದಾನ ಮುಗಿಯುವದರಲ್ಲಿ, ಮೊಬೈಲನ ರಿಂಗ ರಂಗೇರಿಸಿತು.
"ಹಾ ನಾನ್À, ಏನ್ ಆತಿ ಹೇಳು"
"ಎನವಾ ಹುಡಗಿನಾ ಯಾರು ನೊಡ್ಕೊಂಡು ಬಂದಾರು"
"ಸತ್ಯಾ ನೋಡ್ಕೊಂಡ ಬಂದಾನು... ನಾನ್ ಹೋಗಿ ಅವಂಗ ನೊಡಕೊಂಡ ಬಾ ಅಂತ ಹೇಳಿನ್ನಿ"
"ನಾ ನಡಕಿನಾವರಿಗೆ ಪೊನ ಹಚ್ಚಿನ್ನಿ ಬೆಯ್ಬೆಕಂತಾ, ಅವ್ರ ನನ್ನ ಮಕಕ್ಕ್ ಅರಿಶಿನಾ ಹಚ್ಚಿರ್ರು, ನಮ್ಮ ಹುಡಗಿಗೇ ಹೆಸರ್ ಇಡತೇರಿ, ತಿಳ್ಯುದಿಲ್ಲಾ ನಿಮಗ್, ನಿಮ್ಮನ್ಯಾಗ ಹೆಣ್ಣಮಕ್ಕಳು ಅದಾರೋ ಇಲ್ಲೋ, ಮಲ್ಲಗಿ ಹೂ ನಾಚುವಾಂಗ ನಮ್ಮ ಹುಡಗಿ ಅದಾಳು, ಅಕಿಗಿ ಹೆಸರ ಇಡುದು ನಿಮಗ ಯೊಗ್ಯ ಅಲ್ಲ ನೋಡು, ಅಂತ ಬೆಯ್ದು ಪೊನ್ ಇಟ್ಟರು"
"ಓ.... ಹಂಗ್, ಮತ್ತ ಇವಾ ನೊಡಿರ್ರ ಹಿಂಗ ಅಂತಾನು"
"ಹೋಗಿ ಹೋಗಿ, ನಿನ್ನ ಮಗಗ್ಗ ಹೇಳಿಲಾ ನೊಡ್ಕೊಂಡ ಬರಾಕ, ಅವಂಗ ವ್ಯವಹಾರ ಜ್ಞಾನ ಇಲ್ಲಾ, ಅವಾ ಯಾರನ್ನ ನೊಡ್ಕೊಂಡ ಬಂದಾನೊ ಏನೋ, ಒಟ್ಟ ಅವ್ವಾ ಮಗಾ ಕೂಡಿ, ನನ್ನ ಮಕದ ಮ್ಯಾಲ ಮದರಂಗಿ ಬಿಡಿಸಿದ್ರಿ"
"ಯಾಕಪಾ ನನ್ನ ಮಗನ್ನ ಬಗ್ಗೆ ಬಾಳ ಹಗರಗ ಮಾತಾಡಕತಿ, ಐ.ಏ.ಏಸ್ ಒದಾಕತಾನು, ಜಗತ್ತಿನ್ಯಾಗ ಮೂಲಿ ಮೂಲ್ಯಾಗಿಂದ ಆಗುದೆಲ್ಲಾ ಹೇಳ್ತಾನ ಅವಾ, ಅವಂಗ ಅಷ್ಟು ಗೊತ್ತಾಗುಲ್ಲ ಅಂತ ತಿಳದ್ದಿ..."
"ನನಗು ಗೊತ್ತ, ಹೆತ್ತಾಕಿಗಿ ತಾ ಹೆತ್ತ ಹೆಗ್ಗನಾನು ಮುದ್ದು ಅಂತ, ಬಾಯಿ ಐತಿ ಅಂತ ಮನಸ್ಸಿಗೆ ಬಂದಿದ್ದೆಲ್ಲಾ ಹೇಳಾಕ ಹೋಗಬ್ಯಾಡಾ, ನನಗು ಎಲ್ಲಾ ಗೊತ್ತ, ಒಂದ ಮಾತ ವಿಚಾರಸ್ಲಾ ಬರೊಬ್ಬರ್ ನಿನ್ನ ಮಗನ್ನ, ಎಲ್ಲಾ ಗೊತ್ತಾಕ್ಕೇತಿ" ಸತೀಶನ ಚಿಕ್ಕಪ್ಪಾ ಪೊನ್ ಇಟ್ಟ.
"ಸತ್ಯಾ... ನೀ ನೋಡ್ಕೊಂಡ ಬಂದಿರೊದ ಅದ ಹುಡಗಿ ಪಕ್ಕಾ ಅಲೋ, ಏನ್ ಅಂತ ವಿಚಾರ್ಸಿದಿ, ಪೊಸ್ಟ ಆಫಿಸ್ನ್ಯಾಗ್"
"ಹಾ ಅದ ಹುಡಗಿ ಬೇ, ಒಬ್ಬ ಪೊಸ್ಟಮನ್ ಹೊಂಟಿದ್ದಾ, ಇಲ್ಲಿ ವೈಶಾಲಿ ಯಾರ ಅಂತ ಕೆಳಿನ್ನಿ, ಅವಾ ತೊರ್ಸಿದಾ..... ಹೂಂ... ನಡಿ ಇನ್ನ, ಅನ್ನದಾನ ಹಳ್ಳ ಗತೇ ಹೊಳ್ಳಿ ಹೊಳ್ಳಿ ಬರಾಕಹೋಗ್ಬ್ಯಾಡಾ" ಸತೀಶನ ತಾಯಿಗೆ ಸತೀಶ ಹೆಳುವುದು ಸರಿ ಎನಿಸಿತು, ಆದರು ಇನ್ನು ಕನ್ಪರ್ಮ್ ಆಗಿರಲಿಲ್ಲಾ.
"ವೈಶಾಲಿ ಭಾಣಸವಾಡಿ, ಅವರ ಅಪ್ಪಾ ಮಿಲ್ಲಿನ್ಯಾಗ ಕೆಲಸಾ ಮಾಡುದು, ಎಲ್ಲಾ ಕೇಳಿದೊ ಇಲ್ಲೋ..."
"ಅದನ್ಯಾಕ ನಾ ಎಲ್ಲಾ ಕೇಳಲಿ, ಇರುದ ಒಂದ ಪೊಸ್ಟ ಆಫಿಸ್, ಅಲ್ಲೆನ ಹತ್ತ ಮಂದಿ ವೈಶಾಲಿ ಅನ್ನಾವ್ರು ಇರತಾರ ಏನ್..."
"ಹತ್ತ ಮಂದೆನ ಇರ್ಲಿ, ನೊರ ಮಂದಿನ ಇರ್ಲಿ, ನಮ್ಮ ಕೆಲಸಾ ನಾವ ಬರೊಬ್ಬರ್ ಮಾಡಬೆಕ್, ಹಿಂಗ ಎಲ್ಲಾದುಕು ಅವಸರ ಅವಸರ್ ಅಂದ್ರ ಹೆಂಗಲಾ ನಿನ್ನ ಜೀವನಾ, ಹೋಗುದು ಹೋಗಿರ್ತಿ, ಅರಾಮಾಗಿ ಎಲ್ಲಾ ತರಾ ಕೆಳಿ, ಅವರ ಹೆಂಗ, ಅವರ ನಡತಿ ಹೆಂಗ, ಅವರ ಮನ್ಯಾನ್ನವರ ಹೆಂಗ ಅಂತ ವಿಚಾರಿಸಿಕೊಂಡ ಬರಬೇಕ"
"ಹಂಗ ಕೇಳಿದ್ರ ಹೆಳಿ ಬಿಡ್ತಾರ್ ನಿಂಗ.... ನೀನ ದೂರಿಂದಾ ನೊಡ್ಕೊಂಡ ಬಾ ಅಂತ ಹೇಳಿದ್ದೀ".
"ಎಮ್ಮಿಗಿ ನೀರ ತೊರಸು ಅಂದ್ರ, ಅದರ್ ಮುಕಕ್ಕ ನೀರ ತೊರಸುದು ಅಲ್ಲಾ, ಅದರ್ ಮುಕಕ್ಕ ನೀರ ತೊರಿಸಿ ನೀರ ಕುಡಸುದು. ದೂರಿಂದಾ ನೊಡ್ಕೊಂಡ ಬಾ ಅಂದ್ರ, ಅವಳನ್ನಾ ನೊಡಿ ಅವಳ ಬಗ್ಗೆ ವಿಚಾರಿಸಿಕೊಂಡ ಬರಬೇಕ, ಅಲ್ಲಿ ಕೆಲಸಾ ಮಾಡಾವ್ರಿಗು ಹೆಂಡತಿ ಮಕ್ಕಳು ಅದಾರು, ಅವರ್ಗು ಗೊತ್ತಿರ್ತೆತಿ ಇ ಹುಡಗಿ ಮನ್ಯಾಗ ಹುಡಗಿನಾ ತೊರಸಾಕತಾರು ಅಂತ, ಕೆಳಿದ್ರ ಹೆಳ್ತಾರ ಪಾ"
"ನಾ ಮೊದಲ ಹೇಳಿನ್ನಿ ನನಗ ಮದುವಿ ಗಿದವಿ ಈಗ ಬ್ಯಾಡ ಅಂತ, ನನಗ ಇದೆಲ್ಲಾ ಆಗುಲ್ಲಾ, ನೀನ ಮಾಡ್ಕೊ"
"ಹಿಂಗ ಅಂದ್ರ ಹೆಂಗಪಾ, ಇವನ್ನೆಲ್ಲಾ ಎಂದ ಕಲ್ಯಾವ ನೀ, ನಾಳಿ ಹೋಗಿ ಬಾ ಪಾ.... "

...........................................................................................................................

"ಬಂಗಾರದಂತಾ ಕೆಲಸಾ ಮಾಡಿ ನೋಡಪಾ, ಹುಡಗಿ ನಮ್ಮ ಹುಡಗಗ್ಗ ಪಸಂದ ಬಂದಾಳಂತ. ಮೊದಲ ಬ್ಯಾರೆ ಹುಡಗಿ ನೋಡಿ ಹಂಗ ಹೆಳಿದ್ದಾ, ಅಮ್ಯಾಲ ಗೊತ್ತಾತಿ ಒಂದ ಹೆಸರಿನ್ಯಾವ್ರ ಇಬ್ಬರ ಅದಾರಂತಾ, ನಮ್ಮ ಹುಡಗಿ ಎರಡ್ನೆ ಅಂತಾಸಿನ್ಯಾಗ ಕೆಲಸಾ ಮಾಡತಾಳು ಅಂತ್, ನಾಲ್ಕ ಮಂದಿ ನಮ್ಮ ಹಿರ್ಯಾರ್ನ ಹೊಂದಸ್, ನಾನು ಮನಿ ಆಜು ಬಾಜು ದಾವರ್ನ ಕರಿತೇನಿ, ಇ ಆಯ್ತಾರ್(ರವಿವಾರ) ಎಲ್ಲಾರು ಹೋಗಿ ಹುಡಗಿ ನೋಡಿ, ಹಣ್ಣ ಹಾಕಿ ಬರುನು" ಅಂತ ಮುಗಳ್ನಗುತ್ತಾ ಹೇಳಿದಳು ಸತೀಶನ ತಾಯಿ. ಅವಳ ಖುಷಿಗೆ ಮನೆಯ ಮುಂದಿನಾ ರಂಗವಲ್ಲಿಯು ಮಿನುಗುತ್ತಿತ್ತು.
ಸತೀಶ, ಅವನ ತಾಯಿ, ಚಿಕ್ಕಪ್ಪಾ, ಮನೆ ಹಿರಿಯರು, ಮನೆ ಮಂದಿ, ಅಜು ಬಾಜು ಮನೆಯವರೆಲ್ಲಾ, ಒಂದು ಕ್ರುಜರ್ ಗಾಡಿ ಮಾಡಿ, ಹುಡಗಿ ಮನೆಗೆ ಹೋದರು. ಸತೀಶನು ದೂರಿಂದಾ ಹುಡಗಿಯನ್ನು ನೊಡಿದ್ದನು, ಈಗ ಹತ್ತಿರದಿಂದ ಮೊದಲ ಬಾರಿಗೆ ನೋಡಲು ಪುಳಕಿತನಾಗಿದ್ದನು, ಎಲ್ಲರು ಹುಡಗಿ ಮನೆಯಲ್ಲಿ ಕುಳಿತಿದ್ದರು, ಅವರವರ ಭಾವಕ್ಕನುಸಾರವಾಗಿ ಅವರು ಮನೆಯನ್ನು ಮನೆಯವರನ್ನಾ ವಿಕ್ಷಿಸುತಿದ್ದರು, ಸತೀಶ ಬಾಗಿಲಿನಲ್ಲಿ ಅವಳ ಬರುವಿಕೆಗಾಗಿ ಹೊಸ್ತಿಲನ್ನು ಪದೆ ಪದೆ ದಿಟ್ಟಿಸಿ ನೋಡುತ್ತಿದ್ದನು.
ಕಾತುರಗೊಂಡಿದೆ ಇ ಮನವು,
ಆತುರ ಕಾಣದೆ ಮೂಡಿದೆ ಸಿಹಿ ಒಲವು,
ನಿನ್ನಾಗಮನದಿ ಬೆಳಗಲಿ ನಮ್ಮ ಮನೆ ದೀಪವು.
ಎಂದು ಕಣ್ಣ ಪಿಳುಕಿಸುತ್ತಾ ಕೂತಿದ್ದಾ ಸತೀಶಾ, ಬಲಗಾಲನ್ನಾ ಎತ್ತಿ ಹೊಸ್ತಿಲ ದಾಟಿ ಹುಡಗಿ ಬಂದಳು, ಇವನಿಗೆ ಐ,ಆರ್.ಸಿ.ಟಿ.ಸಿ ನಲ್ಲಿ ತತ್ಕಾಲ್ ಟಿಕೆಟ್ ಸಿಕ್ಕಸ್ಟು ಖುಷಿ ಆಯಿತು, ಅವನು ತನ್ನ ಕೈಗಳನ್ನು ಎರಡು ಕಾಲ್ಗಳ ಮೇಲೆ ಹೊಸೆಯುತ್ತಾ, ಓರೆ ನೋಟದಿಂದಾ ಅವಳ ಆಗಮನವನ್ನು ಕೆಳಗಡೆ ಇಂದಾ ಮೆಲ್ಗಡೆಗೆವರೆಗು ನೋಡಿದ, ಆವಾಗ ನೋಡಿದಾಗ ಚುಡಿದಾರದಲ್ಲಿ ಇದ್ದಳು ಇಗಾ ನೊಡಿದರೆ ಸೀರೆಯಲ್ಲಿ ಇದ್ದಾಳೆ. ಸ್ವಲ್ಪ ಎತ್ತರವಾಗಿ ಕಂಡಳು, ಅಕ್ಕಸಾಲಿಗ ಬಂಗಾರವನ್ನು ಪರಿಕ್ಷಿಸುವ ಹಾಗೆ ಮತ್ತೊಮ್ಮೆ ನೋಡಿದ, ಸ್ವಲ್ಪ ದಪ್ಪ ಎನಿಸಿದಳು, ಮುಕದಲ್ಲಿ ಮೊಡವೆ, ಅವಳೊ ಹೌದೊ ಅಲ್ಲವೊ ಅಂತ ದಿಟ್ಟಿಸಿ ನೊಡಿದ. ಅಷ್ಟರಲ್ಲಿ ಅವಳು ಬಂದು, ಅವನ ಮುಂದೆ ಇಟ್ಟಿರುವ ಕುರ್ಚಿಯಲ್ಲಿ ಕೂತಳು. ಅವನ ಮೈಯಲ್ಲಾ ಬೆವರಲು ಶುರು ಆಯಿತು, ಅದು ಮೊದಲ ಬಾರಿ ಹುಡಗಿ ನೋಡಲು ಬಂದಿರುದಕ್ಕೊ ಅಥವಾ ಹುಡಗಿಯ ರೂಪರೆಶೆಯ ಬದಲಾವಣೆ ಅನಿಸುವದಕ್ಕೊ ತಿಳಿಯಲಿಲ್ಲಾ, ಈಗ ಮತ್ತೊಮ್ಮೆ ತಾನು ನೋಡಿದ ಹುಡಗಿ ಇವಳೆನಾ ಅಥವಾ ಬೆರೆಯವಳಾ ಅಂತ ಅನುಮಾನ ಹುಟ್ಟಿತು.

...........................................................................................................................

"ಸರ್ ಎಷ್ಟ ವರ್ಷ ಆತಿರಿ ಹುಡಗಿ ಕೆಲಸಕ್ಕ ಹತ್ತಿ" ಅಂತ ಸತೀಶನ ಚಿಕ್ಕಪ್ಪ ಹುಡಗಿ ತಂದೆನಾ ಕೇಳಿದ.
"4 ವರ್ಷ ಆತಿ ನೊಡ್ರಿ, ಪಿ.ಯು.ಸಿ ಮೆರಿಟ್ನ್ಯಾಗ ಪಾಸ ಆದಳ್ರಿ, ಪರಿಕ್ಷೆ ಬರದ್ಲು, ಡೈರೆಕ್ಟ ಅಪಾಯಂಟಮೆಂಟ ನೋಡ್ರಿ" ಅಂತ ಅವರು ಹೇಳಿದರು. ಅಷ್ಟರಲ್ಲಿ
"ಸರ್, ನೀವ್ ಏನ್ ಕೆಲಸಾ ಮಾಡ್ತಿರೀ..." ಅಂತ ಸತೀಶನ ಮನಸ್ಸಿನ ದ್ವಂದಗಳು ಕೊಡುವ ತೊಂದರೆ ತಾಳಲಾರದೆ ಕೇಳಿದಾ, ಸತೀಶ ನ ಮನೆಯವರು ಒಮ್ಮೆಲೆ ನೊಡಿದರು, ಸತೀಶನ ತಾಯಿ ಹಿಂಗೆಲ್ಲಾ ಕೇಳಬಾರದು ಅನ್ನೋ ತರಾ ಸನ್ನೆ ಮಾಡಿದಳು. ಸತೀಶನ ಚಿಕ್ಕಪ್ಪ ಮುಗಳ್ನಕ್ಕನು.
"ನಾನ್ರಿ ನನಗ ತಿಳಿದಾಗಿಂದಾ ಹತ್ತಿ ಮಿಲ್ಲನ್ಯಾಗ ಕೆಲಸಾ ಮಾಡತೆನ್ರಿ, ವಿದ್ಯಾ ತೆಲಿಗಿ ಹತ್ತಲಿಲ್ರಿ, ಬೆನ್ನ ಕೈಕೊಡಲಿಲ್ಲಾ, ಹತ್ತಿಮಿಲ್ಲನ್ಯಾಗ ಹಮಾಲಿ ಕೆಲಸಾ ಮಾಡತೆನ್ರಿ" ಅಂತ ನಮ್ರತೆಯಿಂದ ಯಾವುದೆ ಅಂಕುಡೊಂಕುಗಳಿಲ್ಲದೆ ಹೇಳಿದ ಹುಡಗಿ ತಂದೆ. ಇ ಮಾತು ಕೇಳಿ ಸತೀಶನಗೆ ಒಂದಂತು ಕನ್ಪರ್ಮ ಆಯಿತು ಇದೆ ಹುಡಗಿ ಅಂತ. ದೂರದ ಬೆಟ್ಟಾ ಕಣ್ಣಿಗೆ ನುಣ್ಣಗೆ ಅನ್ನೊ ಮಾತು ನಿಜಾ ಅಂತ ಅನಿಸಿತು. ತನ್ನ ತಾಯಿ ಎಷ್ಟು ಸಲಾ ಹೇಳಿದ್ರು ಅವಸರಾ ಮಾಡ್ಬೇಡಾ, ಆರಾಮಾಗಿ ನೋಡಿ ವಿಚಾರಿಸಿಕೊಂಡು ಬಾ ಅಂತ, ದೂರಿಂದಾ ನೊಡಿ, ಟೈಮ್ ವೇಷ್ಟ ಆಗುತ್ತೆ ಅಂತ ಬಂದು ಬಿಟ್ಟೆ, ನಾನಂತು ಹು ಅಂತ ಹೇಳಿದಿನಿ, ಇನ್ನು ಮನೆಯವರಿಗೆ ಹಿಡಿಸಿ, ಎಲ್ಲರು ಹು ಅಂದರೆ, ನನ್ನ ಗತಿ ಏನು ಅಂತ ಮನದಲ್ಲಿ ತನ್ನ ತಾನೆ ಗಾಯ ಮಾಡಿಕೊಳ್ಳುತ್ತಾ ಕುಳಿತ, ಅಷ್ಟರಲ್ಲಿ ಎಲ್ಲ ಹೇಳುವಾ ಕೇಳುವಾ ಕಥೆಗಳೆಲ್ಲಾ ಮುಗಿದವು. ಸತೀಶ ಮಾತ್ರ ಬಾಯಿ ಬಿಡಲಿಲ್ಲಾ, ಅವನಿಗೆ ಏನು ಹೇಳಬೇಕೊ, ಎನು ಮಾಡಬೇಕು ಅನ್ನುವದು ತಿಳಿಯಲಿಲ್ಲ,
"ಆಯ್ತಲಾ ಸತ್ಯಾ, ನನಗಂತು ಹುಡಗಿ ಮನಸ್ಸಿಗೆ ಬಂದಾಳು, ನಿನಗು ಪಸಂದ ಐತಿ ಅಂತ ಮೊದಲ ಹೇಳಿ, ಹಣ್ಣ ಹಾಕಿ ಹೋಗಿ ಬಿಡುನು. ಆಮ್ಯಾಲ ಅವ್ರು, ನಮ್ಮ ಮನಿ ಪನಿ ನೋಡಿ, ವಿಚಾರಿಕೊಂಡ ಪಸಂದ ಬಂದರ ಶ್ಯಾವಗಿ ಉಂಡ ಹೋಗಲಿ, ಆಮ್ಯಾಲ ಎಲ್ಲಾ ಕೊಡೊದು ತಗೊದು ಮಾತಾಡಿದ್ರಾಯ್ತು" ಅಂತ ಸತಿಶನ ತಾಯಿ ಎಲ್ಲರೆದರು ಕೇಳಿದ ತಕ್ಷಣ ಸತೀಶನಿಗೆ ಎನು ಹೇಳಬೇಕೊ ತಿಳಿಯಲಿಲ್ಲಾ,
"ಹಾ ಆಯ್ತು, ನಾ ಮನಿ ಅದು ನೋಡಿ ಬರತೆನಿ ನಮ್ಮ ಹಿರ್ಯಾರ ಜೊತೆ" ಅಂತ ಅವನ ಜೊತೆ ಬಂದಿರೊ, ನಾಲ್ಕು ಜನಾ ಹಿರಿಯರನ್ನಾ ಕರೆದು, ಒಳಗಡೆಯಿಂದಾ ಮನೆ ನೋಡಿ, ಹೊರಗಡೆ ನೋಡಲು ಎಲ್ಲರನ್ನು ಕರೆದುಕೊಂಡು ಹೋದನು.
"ಹಿರ್ಯಾರ, ನನಗ ಎನ್ ಹೆಳ್ಬೇಕೊ ತಿಳಿವಾಲ್ತು, ನಾ ಹುಡಗಿನ್ನ ದೂರಿಂದಾ ನೊಡಿನ್ನಿ, ಆವಾಗ ಚೆಂದ ಅನಿಸಿದ್ಲು, ಇಗ ನೋಡಿದ್ರ್, ನನಗ ಯಾಕೊ ಹುಡಗಿ ಮನಸ್ಸಿಗೆ ಬರವಾಳ್ಳರಿ, ಯಾಕೊ ಸರಿ ಅನಸವಾಳ್ಳರಿ" ಅಂತ ತನ್ನ ದುಗುಡದುಮ್ಮಾನಗಳನ್ನಾ ಒಂದೆ ಉಸಿರಿನಲ್ಲಿ ಗಾಳಿಗೆ ತೂರಿ ನಿರಾಯಾಸಗೊಂಡನು, ಎಲ್ಲ ಹಿರಿಯರು ಇವನ ಮಾತು ಕೇಳಿ ಚಿಂತಾಕ್ರಾಂತರಾದರು. ದೇವರು ಇಲ್ಲದೆ ಮಾಡೊ ಜಾತ್ರೆ ತರಾ ಎಲ್ಲರ ಮುಕಕಮಲಗಳು ಮುದಡಿದವು.
"ಏನೊಲೆ, ಹುಚ್ಚಸುಳಿಮಗನಾ, ತಿಳ್ಯುಲ್ಲಾ ನಿನಗ... ಹೆಂಗ ಕಲಸ್ತಿ ಸಾಲಿ, ಏಲ್ಲಾ ಹೂಂ ಅಂತ ಹೇಳಿ ಇನ್ನೆನ ಹಣ್ಣ ಹಾಕಾಕ ಬಂದೆವಿ, ಇಗ ಸರಿ ಇಲ್ಲಾ ಅಂತ ಹೇಳ್ತಿ, ನಾವ ಅವ್ರಿಗೆ ಯಾವ ಮಕಾ ತಗೊಂಡ ಇದನ್ನ ಹೆಳ್ಬೆಕ್", ಸತೀಶನಿಗೆ ಎನ್ ಹೇಳ್ಬೇಕು ಅಂತ ತಿಳಿದೆ, ಸ್ವಲ್ಪಾ ತೆಲೆ ಕೆರೆದು, ತಲೆ ಬಾಗಿಸಿ ನಿಂತ.
"ಬರಿ ಪುಸ್ತಕಾ ಓದಿರ್ರ ಆಗುಲ್ಲಾ, ಹಿಂಗ ಆಗಿದ್ರ, ಗಾಂದಿ ಮಹತ್ಮಾ ಆಗ್ತಿರಲಿಲ್ಲಾ, ನರೇಂದ್ರ ವಿವೆಕಾನಂದ ಆಗ್ತಿರಲಿಲ್ಲಾ, ಪುಸ್ತಕಾ ಓದುದು ತಪ್ಪಲ್ಲಾ, ಅದರ ಜೊತೆ 7 ಕೆರಿ ನೀರ ಕುಡಿಬೇಕು, ನಮ್ಮ ಸಮಾಜದ ಜೊತಿ ಬೆರಿಬೆಕ, ಅವಾಗ ಗೊತ್ತ ಆಕ್ಕೆತಿ, ಇಲ್ಲಾ ಅಂದ್ರ ಹಿಂಗ ಮಂಗ್ಯಾನಗತೆ ಆಕ್ಕೆತಿ ನೋಡ್" ಅಂತ ಮತ್ತೊಬ್ಬ ಹಿರಿಯ ಸತೀಶನಿಗೆ ಮಾಸ್ತರ್ ಆದ.
"ಅವಸರಾ ಮಾಡುದರಿಂದ ಯಾವ ಕೆಲಸಾನು ಸುದ್ದುಳ್ಳ ಆಗುಲ್ಲಾ ತಮ್ಮಾ, ನನ್ನ ಅನುಭವದಿಂದಾ ಹೇಳಾಕತೆನಿ ಕೇಳ್, ಈಗೆನೊ ನಾವ ಎನಾದ್ರು ಸುಳ್ಳ ಹೇಳಿ, ಇ ಮದುವಿ ತಪ್ಪಿಸತೆವಿ, ಹಿಂಗ ಮಾಡಿದಿ ಅಂದ್ರ ಮುಂದಿನ ಜೀವನಾ ಕಷ್ಟ ಐತಿ ನೊಡ್, ವರುಷಾನಗಂಟ್ಲೆ ಒದಿದ್ನ ಒಂದ ತಾಸಿನ್ಯಾಗ ಪರಿಕ್ಷೆ ಬರಿಬೇಕು, ಅಲ್ಲಿಯು ಅವಸರಾ ಮಾಡಿದಿ ಅಂದ್ರ ಪರಿಕ್ಷೆ ಸರಿ ಆಗುಲ್ಲಾ, ಹಂಗ ಇ ಜೀವನಾ.. ತಿಳಕೊ..."
"ಹೂಂ ನಡಿ ಇನ್ನ, ಹೋಗುನು...."

..................................................................................................................................

No comments:

Post a Comment