Friday, September 7, 2012

ಹಾವಿನಾ ದ್ವೇಷಾ ಹನ್ನೆರಡು ವರುಷಾ(ಒಂದು ಸಣ್ಣ ಕಥೆ)




ಪ್ರೀಂiÀi  ಓದುಗರೇ,

ನಿಮಗೆ ವಿಶ್ವ ಮಹಿಳಾದಿನದಾ ಶುಬಾಶಯಗಳು, ಇ ಕಥೆಯನ್ನು ನಾನು ನೊಡಿದಾ ನನ್ನ ಮೊದಲ ಮಹಿಳೆ, ನನ್ನ ತಾಯಿಯಾದ ಶ್ರೀಮತಿ. ಶಾರದಾ ಗಂಗಪ್ಪಾ ಹಿಟ್ಟಣಗಿ, ಅವರಿಗೆ ಅರ್ಪಿಸುತ್ತಿದ್ದೇನೆ, ಪ್ರೀತಿಸಿದಾ ಹುಡಗಿಗಾಗಿ ತಾಜಮಹಲ್‍ನಂತಾ ಎನೆನೋ ಮಹಾನ್ ಕಟ್ಟಡಗಳನ್ನು ಕಟ್ಟಿಸಿದಾರಂತೆ, ಹಾಗೆ ಲೈಲಾ-ಮಜನು, ರೊಮಿಯೊ-ಜೂಲಿಯಟ್ ನೂರಾರು ಹೆಸರುಗಳು ಅಮರವಾದುವಂತೆ, ಅದನ್ನಾ ಹೆಮ್ಮೆಯಿಂದಾ ಹೆಳ್ಕೊತೀವಿ, ಆದರೆ ತಾಯಿ ಪ್ರೀತಿಗಾಗಿ ಮಾಡಿದಾ ಹೆಸರು ಹೇಳಿ ನೋಡೊನಾ? ಪ್ರೀತಿಸಿದಾ ಹುಡಗಿಗಾಗಿ ನೋಂದ ತಾಯಿಯಾ ರೋಧನ ಕೇಳಸದೆ ಒಡಿ ಹೊಗಿ, ಮದುವೆಯಾಗಿ, ತಮ್ಮದು ಗ್ರೆಟೆಸ್ಟ ಲವ್ ಸ್ಟೋರಿ ಅಂತಾ ಹೇಳ್ತಾರೇ, ಅದನ್ನಾ ಕೇಳಿ ನಾವು, ಪ್ರೀತಿಯಲ್ಲಿ ಗೆದ್ದೇ ಅಂತಾ ಹೆಳ್ತೇವೆ, ನಿಜವಾಗಿಯು ಅವರು ಗೆದ್ದರೇ? ಒಮ್ಮೆ ನಿಮ್ಮ ಜಿವನದಾ ಭೂತಗನ್ನಡಿ ಇಣುಕಿ ನೋಡಿ? ತಾಯಿ ಜಿಜಾಭಾಯಿಯಾ ಪ್ರೀತಿ, ಪ್ರೇರೆಪಣೆ ಸಿಗದಿದ್ದರೇ, ಶಿವಾಜಿ ಹಿಂದು ಮಹಾಸಾಮ್ರಾಜ್ಯವನ್ನು ಸ್ಥಾಪಿಸುತಿದ್ದನೇ?.
ಈ ಕಥೆಯಲ್ಲಿ ನಾನು ಹಳ್ಲಿಯಲ್ಲಿ ಬರುವಾ ಹಾವಿನಾ ಮತ್ತು ದೇವರಾ ಬಗ್ಗೆ ಇರುವ ಅಂಧಕಾರವನ್ನು, ವಿಜ್ಞಾನದ ಮೂಲಕ ಹೊರಡಿಸುವ ಜ್ಞಾನವನ್ನು ಹೆಳಲು ಹೊರಟಿರುವೆ, ಕಥಾನಾಯಕ ದ್ಯಾಮಪ್ಪಾ ಮುಲಕಾ ವಿವರಿಸುತ್ತಾ, ಒಬ್ಬ ಸಾಮಾನ್ಯ ಯುವಕ ತನ್ನ ತಾಯಿಗಾಗಿ ಮಾಡಿರುವಾ ಅವನಾ ಚಿಕ್ಕ ಸಾಧನೆಯೊಂದಿಗೆ ಅಂತ್ಯಗೋಳಿಸಿರುವೆ.
ಇದರಲ್ಲೆನಾದರು ತಪ್ಪುಗಳಿದ್ದರೆ ದಯವಿಟ್ಟು ಕ್ಷಮಿಸಿ, ಇ ಕಥೆಯನ್ನಾ ಓದಿದ ಮೆಲೆ, ನಿವು ನಿಮ್ಮ ತಾಯಿಯ ಒಂದು ಚಿಕ್ಕ ಆಸೆ ಇಡೆರಿಸಿದರೆ, ಅದೆ ನನಗೆ ಅಭಿನಂದನೆ ಸಲ್ಲಿಸಿದ ಹಾಗಾಗುತ್ತೆ.

ಇಂತಿ ನಿಮ್ಮ ಪ್ರೀತಿಯ
                  ಸೋಮು(ಡೆಡ್ಲಿ)

======================================================

ಅದ್ಯಾಯ 1

"ಹಾವು ತುಳಿದೇನಿ, ಮಾಗಿನಿ ಹಾವು ತುಳಿದೇನಿ..." ಎಂದು ಮನದಲ್ಲೇ ಗುಣಗಾನಿಸುತ್ತಾ ಆಫಿಸಿನಲ್ಲಿ ಕುಳಿತಿದ್ದಾ ಮಲ್ಲಪ್ಪಾ, ಬೈಲಹೊಂಗಲದಾ ತಹಸಿಲ್ದಾರ್ ಆಫಿಸ್‍ನಲ್ಲಿ ಎಫ.ಡಿ.ಸಿ ಇದ್ದಾನೆ, "ಎನ್ ಚಂದಾ ಪದಾ ಕಟ್ಟ್ಯಾನ್ರಿ ಷರಿಫ್ ಅಜ್ಜಾ" ಎಂದು ತಮ್ಮಾ ಸಹೊದ್ಯೊಗಿಯಾದ ಸುರೇಶನಿಗೆ ಹೇಳಿದನು, ಕೆಲಸದಲ್ಲಿ ನಿರತರಾದ ಸುರೇಶ, ಒಮ್ಮೆ ಮಲ್ಲಪ್ಪನವರಾ ಮುಕ ನೋಡಿ ಎನು ಹೆಳ್ಬೇಕೋ ಅಂತಾ ತಿಳಿಯದೆ, ನಾನೂ ಬದಕಿದೀನೀ ಅನ್ನೋ ರೀಂಗ ಮಾಡೋ ಮೊಬೈಲ ತರಾ, ಒಮ್ಮೆ ನಕ್ಕು ಕೆಲಸದಲ್ಲಿ ನಿರತರಾದರು. "ಶಿವಾ ಅಂತಾ ಹೋಗುತಿದ್ದೇ ರೋಡಿನಲಿ, ಸಿಕ್ಕಾಪಟ್ಟೇ ಸಾಲಾ ಇತ್ತು ಲೈಪೀನಲೀ.." ಅಂತಾ ಮೋಬೈಲ ನಾದ ಆಫಿಸ್ ರುಮನಾ ರಂಗೇರಿಸೀತು, "ನನ್ ಮಕ್ಕಳಿಗೇ ಬುದ್ದೀ ನೇ ಇಲ್ಲಾ, ಎಂತಾ ಹಾಡು ಕೇಳ್ತಾರ ನೋಡು, ಇ ಹಾಡಿಗೇ ಮಕಾ ಎತ್ತೈತೋ, ... ಎತ್ತೈತೋ ಗೊತ್ತಾಗುಲ್ಲಾ, ಎಂತಾ ಹಾಡು ಇಟ್ಟಾರ್ನೊಡು, ಹುಚ್ ... ಮಕ್ಳ್ ಓಂದ್" ಅಂತಾ ಕಾಲ್ ಯಾರು ಮಾಡಿದಾರೋ ಎಂದು ಮೊಬೈಲ್ ನೊಡುತ್ತಿದ್ದಾ ಮಲ್ಲಪ್ಪಾ, ಅಷ್ಟರಲ್ಲಿ ಕಾಲ ಕಟ್ಟ್ ಆಯಿತು. ಮತ್ತೊಮ್ಮೆ ಅದೆ ರಾಗದಂದಾ ತಾನೇ ದಿಗ್ವಿಜಯಿ ಎಂದು ರಂಗೇರಿಸಿತು, ನೋಡಿದರೇ ಅದರಲ್ಲಿ ಕಾಲಿಂಗ ಹೋಮ ಅಂತಾ ತೋರಿಸುತಿತ್ತು.
"ಹಲೋ... ಯಾರ್ ಮಾತಾಡುದ್?",
"ಎಪ್ಪ, ನಾನ್ ರಂಗ ಮಾತಾಡುದ",
"ಕಾಲೇಜಗೆ, ಹೋಗಿ ಬಂದೀ.. , ಏನ್ ..." ಅಂತಾ ಕೇಳುವಷ್ಟರಲ್ಲಿ,
"ಎಪ್ಪಾ, ಮನ್ಯಾಗ ಹಾವ ಬಂದೇತೀ, ನಾಗರ್ ಹಾವ ಅಂತ್.." 
"ಹಾವಾ?... ಎಲ್ಲೀ ಬಂತಿ, ಯಾವಾಗ್? ಎನಾಯ್ತಿ?" ಅಂತಾ ಹಾವ್ ಕಚ್ಚಿದವರ ತರಾ ಬೆವರಕೊಂಡು, ಅವನಾ ನಾಲಿಗೇ ಬುದ್ದಿಯ ಸ್ಥಿರಥೇ ಕಳೇದುಕೊಂಡು ಪಟಾ ಪಟಾ ಅಂತಾ ಮಲ್ಲಪ್ಪಾ ಕೇಳಿದಾ. "ಯಾರ್ಗು, ಯೆನು ಆಗಿಲ್ಲ್, ನಿನೇ£ ಹೇದಿರ್ಕೊಕ ಹೋಗ್ಬ್ಯಾಡ್, ಮನೀ ತಾಟ್(ಮನೆಂiÀi ಮೆಲ್ಛಾವಣಿ, ಜಂತಿ) ನ್ಯಾಗ ಇತ್ತ ಅಂತಾ, ಅದನ್ನ ನೋಡಿ ಅವ್ವಾ ಹೆದರ್ರಿ, ಎನ್ ಮಾಡಬೆಕಂತ್ ಅಂತ್ ತಿಳಿಲಿಲ್ಲಾ ಅದಕ ಅಕಿ" ಅಂತಾ ಉಗುಳು ನುಂಗಿ, "ಪಟ್ಟ್ನಾ ಮನಿ ಚಿಲಕಾ ಹಾಕಿ ಹೊರಗ್ ಬಂದ್ಳು, ಅದ ಟೈಮಗಾ ನಾ ಬನ್ನಿ",
"ಅಪ್ಪಾ, ಸೋಗಲದಾ ಸೋಮನಿಂಗಾ" ಅಂತಾ, ಕರೇಂಟ್ ಹೊದ ಮೆಲೇ ಹತ್ತೊ ಚಾರ್ಜರ್ ಬಲ್ಬ ತರಾ ನಿರಾಯಾಸಗೋಂಡಾ,
"ಇಗಾ ಎಲ್ಲಿ ಅದೇರೀ, ಮನಿ ಒಳಗ ಹೋಗಾಕ ಹೊಗ್ಬ್ಯಾಡ್ರಿ ನಾನು ಬರೋ ತನಾ"
"ನಾನು ಮತ್ತಾ ಅವ್ವಾ, ಬಾಜು ಕಾಕಾನ್(ಚಿಕ್ಕಪ್ಪ) ಮನ್ಯಾಗ ಅದೇವ್, ಕಾಕಾ ಮನ್ಯಾಗ ಇಲ್ಲಾ, ಚಿಗವ್ವಾ ಅದಾಳ್, ಹಾವ್ ಬಾಳ ದೊಡ್ಡದ ಐತೀ ಅಂತ, ನೋಡಿ ಹೆದರ್ಯಾಳ ಅವ್ವಾ"
"ಇರ್ಲಿ ಬಿಡು, ನಾ ಬರ್ತೆನೀ ಇಗಾ, ಅಲ್ಲೇ ಇರ್ರೀ ನೀವು, ಮನಿ ಒಳಗಾ ಹೋಗಾಕ್ ಹೊಗ್ಬ್ಯಾಡ್ರೀ" ಅಂತಾ, ಅತ್ತಾ ಇತ್ತಾ ನೋಡ್ತಾ, ತನ್ನಾ ಫೈಲ್ಸನೆಲ್ಲಾ, ಡ್ರಾ ನಲ್ಲಿ ಹಾಕಿ ಕೀ ಹಾಕಿದಾ, ಉಕ್ಕೀ ಬರೋ ಸಮುದ್ರ ದಿಕ್ಕಿಲ್ಲದೇ ದುಮುಕುವಾ ನೋಟದಲ್ಲಿ ಕಣ್ಣುಗಳು ಕರಗಿದವು, ಬಾಯಲ್ಲಿರೋ ಲಾವಾರಸಾ ಪರಿಪರಿಯಾಗಿ ಗಂಟಲೊಳಗಿನಾ ಆಳವನ್ನು ಪರಿಕ್ಷಿಸುತ್ತಿತ್ತು.
"ಸುರೇಶ, ಮನಿ ತಾಟ್(ಮನೆಂiÀi ಮೆಲ್ಛಾವಣಿ, ಜಂತಿ) ನ್ಯಾಗ, ನಾಗರ್ ಹಾವ ಹೊಕ್ಕೇತಂತಾ, ನಮ್ಮಾಕಿ ನೊಡ್ಯಾಳಂತ, ಮನಿ ಕದಾ ಹಾಕೋಂಡ ನನ್ನ ಮಗಾ ಆಕಿ ತಮ್ಮನ ಮನ್ಯಾಗ ಕುಂತಾರಂತ, ನಾ ಮನೀಗಿ ಹೋಗಿ ಬರ್ತೇನೀ"
"ಹಾವಾ.. ಅದರವ್ವನ್, ಇ ನಾಗರ್ ಹಾವ ಬಾಳ ಕೆಟ್ಟರೀ, ಸೂಳಿಮಗಂದು.. ನೀವ ಹೋಗಿ ತಡವಾಕ ಹೋಗ್ಬ್ಯಾಡ್ರೀ, ಏನರ್ ಹೆಚ್ಚು ಕಡಮಿ ಆಗಿಗಿದ್ದಿತೀ"
"ಹಾ ಮಾರಾಯಾ, ನನಗು ಅದ ಚಿಂತಿ, ಸಂಜೀ ಮಾಡಿ ನನ ತಮ್ಮಾ ಬಂದ ಮ್ಯಾಲ, ಒಂದ ನಾಲ್ಕ ಮಂದಿ ಕೂಡಿ ಹುಡಕಿ ನೋಡ್ಬೆಕು, ಅದು ಏನೋ ಅಂತಾರಲ್ಲಾ ಕಾಡು ಟೈಮ್ಕ ಏಂತದೋ ಮಗಾ ಹುಟ್ಟೀದ್ ಅಂತ, ಹಂಗ ಆತಿ" ಸಿಮೆಂಟ ತುಟ್ಟೀ ಐತಿ ಅಂತಾ ಕಾಂಕರೀಟ್ ಬದ್ಲಿ ತಾಟ್(ಕಟ್ಟೀಗೆಯಾ ಮೆಲ್ಚಾವಣಿ) ಮನಿ ಹಾಕ್ಸೀನೀ, ಹೀಂಗ ಮನಿ ಮುಗಿಸಿ ಸ್ವಲ್ಪ ನೀರ ಕುಡದಾಂಗ ಆಗತ್ತೀ, ಇದೋಂದ ಹಿಂಗ ಆತಿ ನೋಡ್" ಎಂದು ಮಲ್ಲಪ್ಪಾ ನಿಟ್ಟುಸುರು ಬಿಟ್ಟಾ.
"ನ್ಯಾಸರಗಿ(ಗ್ರಾಮ) ದಾಗ, ಒಬ್ಬಾ ಹಾವಾ ಹಿಡ್ಯಾವ ಅದಾನ ಅಂತಾ ಕೇಳದ್ನೀ, ಬಾಳ ಕೆಟ್ಟ ಸುಳಿಮಗಾ ಅದಾನಂತಾ, ಅನಾವತ್ ಅನಾವತ್ ಹಾವ ಹಿಡಿದಾನಂತ, ಯಾರ್ನರ ಕೇಳ್ತೆನ್ರಿ, ಅವನ ನಂಬರ ಸಿಕ್ತಿ ಅಂದ್ರ ಹೇಳ್ತೆನ್ರಿ, ಅವನ ಕರಸಿದ್ರಾಯ್ತು, ಸುಮ್ನ ಹುಲಿಗ ಮೇವು ತಿನಸಾಕ ಹೋದಾಂಗ ಆಗ್ಬಾರ್ದು, ನೀವು ಈಗಾ ಹೊಗ್ರಿ, ಅವನ ಬಗ್ಗಿ ತಿಳಿತಿ ಅಂದ್ರಾ ಫೋನ್ ಮಾಡೀ ಹೇಳ್ತೆನ್ರಿ"

                              ...........................................................................

"ಒಂದ ಮಾರ ಮ್ಯಾಲ ಉದ್ದ ಇತ್ತ ಅದ, ಪಕ್ಕಾ ನಾಗರ ಹಾವ, ಮನಿ ದೇವ್ರ ಮಲ್ಲಯ್ಯಗ ಬಾಳ ದಿನಾ ಆತಿ ನಡ್ಲೊಂಡಿಲ್ಲಾ, ಅದಕ ಬಂತೋ ಏನೋ.. ನೀವ ಒಳಗ ಹೋಗಾಕ ಹೊಗ್ಬ್ಯಾಡ್ರಿ" ಅಂತಾ ಕಸ್ತೊರಿ, ಮಲ್ಲಪ್ಪನ ಹೆಂಡತಿ ತನ್ನ ಶೆರಗಿನಿಂದಾ ಮುಕಾ ಒರಿಸುತ್ತಾ ಹೇಳಿದಳು, "ಅದೇನೋ ಅಂತಾರಲ್ಲಾ ಊರಾಗಿನ ದ್ಯಾವರ್ನಾ ಮನ್ಯಾಗ ತಂದ ಇಟ್ರ, ಮನೀನ ಗುಡಿ ಆಗಿತ್ತ ಅಂತ(...), ಅದ ನಮ್ಮ ಮನಿ, ನಾವ ಹೋಗಿ ನೊಡ್ಲಿಲ್ಲಾ ಅಂದ್ರ ಮತ್ತ್ಯಾರ್ ನೊಡ್ಬೇಕು, ನಿಯೆನ ಹೆದರಾಕ ಹೋಗ್ಬ್ಯಾಡ್, ಅದರವ್ವನ್ ಮನಸ್ಯಾರ್ಗೆ ಹೆದರಲ್ದ, ದೆವ್ವ್ಗ ಹೆದರ್ತೆತನ, ಅದನ್ನ ನೋಡೆ ಬಿಡುನು" ಆಂತಾ ಹತ್ತು ರೊಟ್ಟಿ, ಕಿಲೊ ಬೆಣ್ಣಿ ತಿಂದು ಕುಸ್ತಿ ಹಿಡ್ಯಾಕ ಹೊಗುವರಾ ತರಾ, ಧೈರ್ಯ ತಂದಕೊಂಡು, ಎದ್ದ ನಿಂತಾ ಮಲ್ಲಪ್ಪಾ, "ಈರಪ್ಪಾ ಒಂದು ನಾಲ್ಕ ಕಳಗಾ(ಬಡಿಗೆ) ತಗೋ, ಅಟ್ಟದ ಮ್ಯಾಲ ಇದ್ರ ನೋಡು, ಬಾಜು ಮನ್ಯಾವ್ರನಾ ನಾಲ್ಕ ಮಂದಿ ಕರೀ, ಹೋಗಿ ಹುಡಕಿ ಅದರವ್ವನ್ ಸಿಕ್ತಂದ್ರ ಬಡದ ಒಗದ ಬಿಡುನು" ಅಂತಾ ತಮ್ಮ ಈರಪ್ಪನಿಗೆ ಹೇಳಿದಾ, ಅಷ್ಟರಲ್ಲಿ ರಂಗನು ಕೂಡಾ ಅವರ ಜೊತೆ ಎದ್ದು ನಿಂತಾ, ಹೊಸಾ ಐರನ್ ಬಾಕ್ಸ ನಿಂದಾ ಬರೋ ಸ್ಟೀಮ್ ತರಾ, ತನ್ನದು ಸ್ವಲ್ಪ ಸಹಾಯ ಮಾಡೋ ಆಸೆ ಅವನ ಮುಕದಲ್ಲಿ ಕಾಣುತ್ತಿತ್ತು, ಜೊತೆಗೆ ಕುತುಹಲಕೆ ಅರಳಿದಾ ಕಮಲದಂತೆ ಕಾತುರಾ ಅವಿತಿತ್ತು, ಅಷ್ಟರಲಿ "ನೀ ಇಲ್ಲೆ ಇರ್ಲೇ ನಿಮ್ಮ ಅವ್ವನ ಇಂಬಾಲಿ, ಬಂದ ಅಲ್ಲಿ ಕಿಸಿಯುದು ಅಷ್ಟ ಐತಿ" ಇ ಮಾತು ಕೆಳಿ ರಂಗನಾ ಅರಳಿದಾ ಕಮಲ ಮುದುಡಿತು, ಅದು ಏನೋ ಅಂತಾರಲ್ಲಾ, ಬೆಳ್ಳಗಿರೋದೆಲ್ಲಾ ಹಾಲಲ್ಲಾ, ಮುಳ್ಳು ಇರೋದು ಬರೇ ಕಾಲಿಗೆ ಚುಚ್ಚಾಕ ಅಲ್ಲಾ, ಅನ್ನೋ ಹಾಗೆ ಮಗನಾ ಮೆಲಿನಾ ಪ್ರಿತಿಗೆ ಮುಳ್ಳಿನಾ ತರಾ ಅವನಿಗೆ ಚುಚ್ಚಿದಾ, ರಂಗಾ ಸುಮ್ಮನೆ ಹುಲಿ ಮೂಂದೆ ನಾಯಿ ಬೊಗಳಿದರೇ ಏನು ಫ್ರಯೊಜನಾ ಅಂತಾ ಓಮ್ಮೆ ಅಪ್ಪನ ಮುಕಾ ನೋಡಿ ಅವ್ವನ ಹತ್ರಾ ಹೋಗಿ ಕುಳಿತಾ, ಅಷ್ಟರಲ್ಲಿ ಈರಪ್ಪಾ ಅಲ್ಲಿಗೆ ಬಂದಾ, "ಬಾಜು ಮನಿ ಸಂಗ್ಯಾಗ ಮತ್ತ ರವಿಗೆ ಹೇಳಿ ಬನ್ನಿ, ಬರ್ತಾರು ಅಂತಾ ಹೆಳಿದ್ರು, ಬಾ ಹೋಗುನು ಅಂಗಾರಾ" ಅಂತಾ ಹೆಳಿದಾ, ಇನ್ನೇನು ಹೊರಗಡೆ ಹೊಗ್ಬೆಕು ಅನ್ನುವಷ್ಟರಲ್ಲಿ, "ಶಿವಾ ಅಂತಾ...." ಮೊಬೈಲ ರಿಂಗ ಆಯ್ತು, "ಹಲೋ ಏನ್ ಹೆಳ್ರಿ, ಸುರೇಶ" ಅಂತಾ ಮಲ್ಲಪ್ಪಾ ಕೆಳಿದಾ, "ನ್ಯಾಸರಗಿ ದಾಗ ಹಾವಾ ಹಿಡ್ಯಾವ ದ್ಯಾಮಪ್ಪಾ ಅಂತ, ಅಲ್ಲೇ ಹೈಸ್ಕೂಲನ್ಯಾಗ ಪ್ಯುನ ಅದಾನಂತ, ಈಗ ಹೈಸ್ಕೂಲ ಗೆ ಪೋನ್ ಮಾಡಿನ್ನಿ, ಸಿಕ್ಕಿದ್ದಾ, ಅವಂಗ ಹೇಳೇನ್ರಿ ಹಿಂಗ ಹಿಂಗ ನಿಮ್ಮ ಮನ್ಯಾಗ ಆಗೇತಿ ಅಂತಾ, ಅವ ಹೆಳಿದಾ ನಿವ ಯಾರು ಹೋಗಿ ಅದನ್ನಾ ಹೊಡ್ಯಾಕ ಹೋಗಬ್ಯಾಡ್ರಿ, ಅವ ಬರ್ತಾನಂತಾ ಹೇಳಿದಾ, ನಿಮ್ಮ ಮನಿ ಅಡ್ರೆಸ್ಸ ಹೇಳೆನ್ರಿ ಅವಂಗ್, ಇನ್ನೊಂದ ತಾಸ(ಘಂಟೆ) ಒಳಗ ಬರಬಹುದು" ಎಂದು ಸುರೇಶ ಹೇಳಿದಾ, "ಓ, ಚಲೋ ಆತಿ ಬಿಡ್ರೀ, ನಾವು ಇನ್ನೆನ್ ಹೊಗಾಕ ನಿಂತಿದ್ದು, ಅವಾ ಬರ್ತಾನಂದ್ರ ಬಾಳ ಚಲೋ ಆತ್ರೀ, ಥ್ಯಾಂಕ್ಸರಿ" ಅಂತಾ ಹೆಳಿ ಕಾಲ್ ಕಟ್ಟ್ ಮಾಡಿದಾ, ಇಗಾ ಸ್ವಲ್ಪ ಮುಕಾ ನಿರಾಳವಾಯಿತು, ಈರಪ್ಪನ ಕಡೆ ನೋಡಿ ಸುರೇಶ ಹೆಳಿದ್ದನ್ನಾ ಹೆಳಿದಾ, "ಆಯ್ತ ಬಿಡು ಅಂಗಾರ, ಸುಮ್ನ ನಾವ್ಯಾಕ ಕತ್ತಲಾಗ ಕರಡಿ ಹಿಡ್ಯಾಕ ಹೋಗುನು, ಅವ ಬರು ಮಟಾ ನಿಲ್ಲುನೂ" ಅಂತಾ ತನ್ನ ಹೆಂಡತಿ ಕಡೆ ಒಮ್ಮೆ ನೋಡಿ ಸುಮ್ಮನಾದ, ಮಲ್ಲಪ್ಪಾ ಅಯ್ತಬಿಡು ಅಂತಾ ಅವನು ಬರೊವರೆಗು ನಿಲ್ಲೋನ್ ಅಂತಾ ಸೂಚನೆ ಕೊಟ್ಟ.

                                   ................................................................................

ಕರಿ ನಾಯಿ ಬೆನ್ನತ್ತೀ, ಕಾಳಕೂಟದಲಿ ಕರಗಿದೇನೋ,
ಸದ್ದಿಲ್ಲದೇ ಸುಡುಗಾಡು ಸಿದ್ದಾ, ಸಂಡಿಗೇಯಾ ಹೀರೀದನೋ,
ಎಪ್ಪಾ ಕೇಳ ನನ ಕನಸಾ, ಬಿಂದಿಗ್ಯಾಗ ತುಂಬಿತ್ತ ಬರೇ ಹೊಲಸಾ.
ಏಂದು ರಂಗನ ತಾಯಿ ಆಕಾಶವಾಣಿ ಟ್ಯೂನ್ ಕೊಟ್ಟಳು, ಸಂಜೆಯ ಸಂಗೀತಕ್ಕೆ, ದನಿದು ಬಂದಾ ಸೂರ್ಯನಿಗೆ ನಿದ್ದೆಯಾ ಆಲಾಪ ಶುರುವಾಗಿತ್ತು, ಮಲ್ಲಪ್ಪಾ ಒಮ್ಮೆ ಎದ್ದು ಹೊರಗಡೆ ಬಂದು ನೊಡಿದಾ, ಬೀದಿಯಾ ಆ ಕಡೆ ಒಮ್ಮೆ ಇ ಕಡೆ ನೊಡಿದಾ, ಹಾಗೆ ನಿಂತಾ ತನ್ನ ಮೆದುಳಿನಾ ಮಂದಾಲೊಚನೆಯ ಸುಳಿಯಲ್ಲಿ ಒಂದು ಎಳೆ ಗೋಚರಿಸಿತು, ಅದೇನೆಂದು ನೋಡಿದರೆ, ಇದು ವರೇಗು ಅವನು ಹಾವಾಡಿಗನನ್ನು ನೋಡಿರಲಿಲ್ಲಾ, ಅಲ್ಲಿ ಇಲ್ಲಿ ಸಿನಿಮಾದಲ್ಲಿ ನೊಡಿದಾ ನೆನಪಿನಾ ಎಳೆ ಮೆದುಳಲ್ಲಿ ಕರಗಿ ಹೀಗೆ ವಿಸ್ತರಿಸಿತು.
ಕೆಂಪು ವಸ್ತ್ರದಾ ಶಿಂಬಿ, ಸುಗ್ಗಿಯಾ ತೋರಣದಾಂಗ ತಂಗೈತಿ, ತೆಲಿಮ್ಯಾಲ,
ತುದಿಯೊಂದಕ ಉತ್ಸಾಹದಾ ರಸ ಉಕ್ಕಿ
ನೋಡೈತೀ ಆಕಾಶ, ಸಾಕಪ್ಪಾ ಸಹವಾಸವೆಂದು ಇನ್ನೋಂದು ವಾಲಿದೇ, ಭೂಮಿ ಮ್ಯಾಲ,
ಸಂಜೆ ರಂಗಾಗುವಾ ಕೆಂಪು ಬಣ್ಣಾ, ಕಿವಿಗಳಿಗೇ ಕರ್ಣಕುಂಡಲಾ ಚಂದವಣ್ಣಾ,
ರೈಲಿಗೇ ತಕ್ಕ ಹಳಿ, ಸ್ಥಳಿಯತೆಗೆ ಸಹಕರಿಸುವಾ ಬಟ್ಟೆಗಳಾ ಪಳಿ,
ಸಾಧಕರಾ ಸಾಧನೆಗೆ ಗಡ್ಡ ಮಿಸೆಗಳಾ ಧಾಳಿ,
ಹೆಂಗಳೆಯರ ಕಂಗೊಳಿಸುವಾ ವಸ್ತ್ರಾಭರಣಗಳಾ ಹಾರ, ಹಾವಾಡಿಗನಿಗೆ ಪುಂಗಿ ಬುಟ್ಟಿಗಳಾ ಭಾರ.
ಮಂದ ಆಲೋಚನೆ ಗಂಧ ಹಚ್ಚುತ್ತಾ ಆ ಕಡೆ ಇರದೇ, ಓಮ್ಮೆ ನೋಡಿ, ಬಿಂಬ ಮೂಡದಾ ಕನ್ನಡಿ ನೋಡಿ, ಕಾಲಿಗೆ ಬುದ್ದಿ ಹೆಳಿದಾ, 
"ಮಲ್ಲಪ್ಪ ಅವರ ಮನಿ ಇದ ಏನ್ರಿ" ಅಂತಾ ಯಾರೋ ಕೇಳಿದಾಂಗ ಆಯಿತು. ಮಲ್ಲಪ್ಪಾ, ಈರಪ್ಪಾ, ರಂಗಾ ಮೂವರು ಎದ್ದು ಹೊರಗಡೆ ಬಂದರು, ಕಪ್ಪನೇ ಮಕಕ್ಕೆ ಶೆಡ್ಡು ಹೊಡೆಯುವಾ ಮೀಸೆ ಮತ್ತು ಸ್ವಲ್ಪಾ ಕೆದರಿದಾ ತಲೆಕುದಲು, ಉದ್ದನೆಯ ತೋಳಿನಾ ಬಿಳಿಯ ಕಪ್ಪನೆಯ ಗೆರೆ ಗೆರೆಯಾ ಶರ್ಟು, ಶರ್ಟಿಗೇ ತಕ್ಕಹಾಗೆ ಬೂದಿ ಬಣ್ಣದಾ ಪ್ಯಾಂಟು, 
ಒಂದು ಕೈಲಿ ಕೈ ಚಿಲಾ ಅದರಲ್ಲಿ ಮುದಡಿದಾ ಹಗ್ಗಾ ಮತ್ತೆ ಗೋಣಿ ಚಿಲಾ, ಇನ್ನೋಂದು ಕೈಲಿ ಎರಡು ಉದ್ದನೇಯಾ ಕಟ್ಟಿಗೆಗಳು, ಒಂದು ಕ್ಷಣ ಮಲ್ಲಪ್ಪನಿಗೆ ಯಾರಿರಬಹುದೆಂಬ ಗೊಂದಲಾ ಆಯ್ತು, "ಹಾ ನಾನ ಮಲ್ಲಪ್ಪಾ, ಯಾರ್ ನೀವಾ" ಅಂತಾ ಕೆಳಿದಾ, ದ್ಯಾಮಪ್ಪಾ "ನಾನ್ರೀ ದ್ಯಾಮಪ್ಪಾ ಅಂತಾ, ಸುರೇಶ ಅನ್ನವ್ರು, ಫೋನ್ ಮಾಡಿದ್ರು,  ಹಿಂಗ ಹಾವ ತಾಟನ್ಯಾಗ ಹೋಗೆತೀ ಅಂತಾ, ಅದಕ ಬನ್ರೀ" ಅಂತಾ ಹೇಳಿದಾ, ಎನಪ್ಪಾ ಸಾಪ್ಟವೇರ್ ಇಂಜನೀಯರ ಕೈಗೆ ಬಾರಕೋಲ್ ಗುನಿ(ಎತ್ತುಗಳಾ ಹೊಡೆಯುವಾ ಸಾಧನಾ) ಕೊಟ್ಟಂಗ ಇದಾನಲ್ಲಾ, ಇವಾ ಹಾವಾ ಹಿಡಿತಾನಾ ಅಂತ ಅನಿಸ್ತು, ಇರ್ಲಿ ಬಿಡು ಯಾವ ಸಾಪ್ಟವೇರ್ ನ್ಯಾಗ ಯಾವ ವೈರಸ್ ಇರತೆತಂತ ಯಾವನಿಗೆ ಗೊತ್ತು, 
"ಚಲೋ ಆತ್ರೀ ನೀವ ಬಂದಿದ್ದು, ಬನ್ರೀ ಒಳಗ ಚಾ ಗೀ ಕುಡದ, ಆಮ್ಯಾಲ ಹಾವಾ ಹೀಡ್ಯುನು" ಅಂತಾ ಮಲ್ಲಪ್ಪಾ, ದ್ಯಾಮಪ್ಪನಾ ಒಳಗಡೆ ಕರೆದುಕೊಂಡು ಹೊದಾ.
ಸಾಗರದೊಳ್ ಸೂರ್ಯ ಕರಗಿ,
ಭೂಮಿಯಾ ಬೆಳಕೆಲ್ಲಾ ಸೊರಗಿ,
ಚಂದ್ರನಾ ಕಾಂತಿಗೆ ಭೂಮಿ ಒರಗಿ,
ಊರಾ ತುಂಬೆಲ್ಲಾ ವಿದ್ಯುತ್ ದೀಪಗಳಾ ಮೆರವಣಿಗೆ,
ಇದೂ ಸೂರ್ಯನಿಗೆ ಶ್ಯಾಕ್ ಕೊಡುವಾ ಬೆಳವಣಿಗೆ.
======================================================

ಅದ್ಯಾಯ 2


"ಪಾಪಿಗಳು ಪಾಪದಲ್ಲೇ ನೀತಿ ಹೇಳಬೆಕಾದರೇ, ಭೀತಿ ಇಲ್ಲದೇ ಬದುಕಕಾಗುತ್ತಾ, ರೀತೀ ರಿವಾಜುಗಳೆಲ್ಲಾ ತುಕ್ಕು ಹಿಡದಿರೋ ಪಾತ್ರೆ ತರಾ ಬಳಸಿದ್ರೇ ನಾವೆ ಪಾಪಿಗಳಾ ತಲೆ ತೆಳಗೇ ಇರೋ ದಿಂಬು ಆಗ್ತಿವೀ, ಖಳನಾಯಕನಿಲ್ದೆ ಕಥೆ ಇಲ್ಲಾ, ಈ ಖಳನಾಯಕನಿಲ್ಲೆ ನಿಮ್ಮ ಆಟಾ ನಡೆಯಲ್ಲಾ, ಊರು ಸೂತ್ತೊಕೆ ಮರಾ ಇರಬೇಕು, ಎರಡು ಮನೆಗಳಾ ನಡುವೆ ಸಂದಿ ಇರಬೇಕು, ನನ್ನಾ ಹಿಡಿಯೋಕೆ ಬಂಗಾಳ ಕೊಲ್ಲಿಯಿಂದಾ ಹಿಡಿದು ಅರಬ್ಬಿ ಸಮುದ್ರದಾ ನೀರು ಕುಡದಿರಬೇಕು", ಹಾ.. ಹಾ.. ಅಂತಾ ನಗುತ್ತಾ ಇದ್ದಾ, "ಉಪ್ಪಿನ್ ನೀರು ಕುಡಿದು, ಅಟ್ಟದಲ್ಲಿ ಅಡಗಿದರೇ ಉಪಚಾರ ಮಾಡಲು ಬೆಕ್ಕು, ಇಲಿ, ಹೆಗ್ಗಣಾನೇ ಬರಬೇಕು, ಕಾವೇರಿ ನೀರು ಕುಡಿದು, ಕನ್ನಡ ನೆಲದಲ್ಲಿ ಮೊದಲು ಉಸಿರು ಎಳದಿರೋ ಹುಲಿ ಇದು, ನಮ್ಮ ತಾಯಿ ಹುಟ್ಟಿದ ಖುಡಲೇ, ಯಾರ ಹಂಗ ಇಲ್ಲದೇ ಬೇಟೆ ಆಡಿ ಬದಕೋದನ್ನಾ ಕಲಸಿದಾಳೆ, ನಾನು ಇಲಿ, ಹೆಗ್ಗಣಾ ಹಿಡಿದು ಕೈ ಕೋಳೆ ಮಾಡ್ಕೊಳ್ಳಿಕ್ಕೆ ಹೋಗೋದಿಲ್ಲಾ, ಸುಮ್ನೆ ಬೋನಿನಾ ಒಳಗಡೆ ಸದ್ದ ಮಾಡದೆ ಹೋಗಿ ಬಿಡು, ಇಲ್ಲಾ ಅಂದ್ರೇ ನಿನ್ನ ಮೈಮೆಲೆ ಇರೋ ಪ್ರತಿಯೊಂದು ರೋಮಗಳು ನರಳಿ ನರಳಿ ನನ್ನ ಕಡೆ ಬೆರಳು ಮಾಡಿ ತೊರಿಸಬೇಕು", ಅಂತಾ ಎಸ್ಪೀ ಶ್ಯಾಮ್ ಇನ್ನೇನು ಖಳನಾಯಕನನ್ನಾ ಹಿಡಿಬೆಕನ್ನೋವಸ್ಟರಲ್ಲಿ, ಜೋರಾಗಿ ರಿಪ್ಪ್ ಅಂತಾ ಮಳೆ ರಪ್ಪ್ ಅಂತಾ ಅವನಾ ಮುಕಕ್ಕೆ ಬಡಿಯಿತು. "ಚೇ ಇವನವ್ವನ್, ಇದು ಸಲಾ ತಪ್ಪಿಸಿಕೊಂಡ ಹೋದಾ" ಅಂತಾ ಕಣ್ಣು ತಗೆದು ನೊಡಿದ್ರೆ ದ್ಯಾಮಪ್ಪನ ತಾಯಿ ಅರ್ದಾ ತುಂಬಿದಾ ಚೊಂಬು ಹಿಡಿದುಕೊಂಡು ಮುಂದೆ ನಿಂತಿದ್ದಳು, "ಯಾವ ತಪ್ಪಿಸಿಕೋಂಡು ಹೊದ" ಅಂತಾ ಕೇಳಿದಳು, "ನಿಮ್ಮವ್ವನ್, ಅಡ್ಡಮಳ್ಯಾಗ ಬರು ಬಿಸಿಲ್ತರಾ, ಬರೇ ಇಂತಾ ಕೆಲನ್ ನೋಡ ನಿಂದ, ಇನ್ನೆನ ಕಳ್ಳ .. ಮಗನ್ನಾ ಹಿಡೀತೀದ್ನಿ, ಟಿ ವಿ ದಾಂದ ಬರು ಅಡ್ವರ್ಟೈಸ್ ತರಾ ಬಂದ ನೀರು ಸುರಿದು ಹಾಳ ಮಾಡಿದಿ" ಇದನ್ನಾ ಕೇಳಿ ದ್ಯಾಮಪ್ಪನಾ ತಾಯಿ ರಂಗವ್ವನಿಗೆ ಕೊಪಾ ಬಂತು, "ಏಳ್ ಬಾವಾ.. ಏಳ್ ಇನ್ನ್, ಊರ ಮನ್ಯಾಗಿನ್ನು ಚರಿಗಿ(ಚಂಬು) ಎಲ್ಲಾ ಹೊಲಾ ಸುತ್ತಾಡಿ ಬಂದು, ನಿಂದ ಮಾತ್ರಾ ಬೆಚ್ಚಗೆ ಮುದಡಿಕೋಂಡು ಬಿದ್ದೆತಿ, ಏಳ್ ಇನ್ನ", ಅಂತಾ ಅಡುಗೆಮನಿಗೆ ಹೊದಳು, "ನನ್ನ ಮಗಾ ಮಾಮ್ಲೆದಾರ್(ತಾಹಸಿಲ್ದಾರ್) ಆಗ್ತಾನು ಅಂತ, ನಾ ಗಂಡ ಎತ್ತ್ ದುಡದಾಂಗ, ಊರ ಮಂದಿ ಹೊಲಕ್ಕ ಹೊಗಿ ಕಳೆ ಕಿತ್ತ(ಕುಲಿ) ಬರತೇನಿ, ನೀ ನೋಡಿರ್ ಸಿನಿಮಾ ಗಿನಿಮಾ ಅಂತ, ಹುಚ್ಚರಾಂಗ ಅಡ್ಡಾಡ್ತಿ, ನೀನೋ ನಿನ್ನ್ ದೋಸ್ತಗೋಳೋ ಹೊಲದಾಗ ಬೆಳಿವ ಕರ್ಕಿ ಆಗೆರೀ, ಏನ್ ಮಾಡೋದ್ ನನ್ನ ಕರ್ಮ, ಯಾವ ಪಾಪ ಮಾಡಿದ್ನೋ ಹಿಂದಿನ ಜನ್ಮದಾಗ, ಆ ಹಾಟ್ಯಾನ ಮಗಾ ದೆವ್ರ ಇಂತಾ ಮಗಾ ಕೊಟ್ಟ", ಅಂತಾ ತನ್ನನ್ನ ತಾನೆ ಶಪಿಸುತ್ತಾ, ತನ್ನ ಕೊಪವನ್ನು ಪಾತ್ರೇಗಳಾ ಮೇಲೆ ತೋರಿಸುತ್ತಾ ಹೊಸ ಟ್ಯುನ ಹಾಕೊ ಮ್ಯುಜಿಕ್ ಡೈರೆಕ್ಟರ್ ತರಾ ಮ್ಯುಜಿಕ್ ಕೊಡುತಿದ್ದಳು, 
"ಶ್ಯುರು ಆತಿ ನೋಡ್, ನಿನ್ನವ್ವನ್ ನಿಂದ, ಹಿಂಗ ಎದ್ದ ಎದ್ದ ಖುಡ್ಲೇ ಕಾಟಾ ಕೊಟ್ಟಿದ್ದಕ್, ನಮ್ಮ ಅಪ್ಪ ಮನ್ಯಾಗ ಇರೊ ದೀಪದಾ ಮುಂದಿನಾ ಫೊಟೊ ಆಗಿ ಕುಂತಾ, ಎನ್ ಮಾಡ್ಲಿ ನಾ, ಆ ... ಮಗಂದು ಇಂಗ್ಲೀಷ ಯಾವ ಕಂಡ ಹಿಡದೋ ... ಮಗಾ, ಅವ ಸಿಕ್ರ ತೆಲಿಮ್ಯಾಲ ಚಪ್ಪಡಿನ ಎಳದ ಬಿಡ್ತೆನೀ, ಏನ್ ಮಾಡಿರ್ರು ತ್ಯಲ್ಯಾಗ್ ಹೋಗವಾಲ್ತು, ಅರಿಸಿನಾ ಭೆರು ತೇದ್ರ, ಗಂಧ ಬರತೇತನಾ, ಏನ್ ಮಾಡ್ಲಿ ನಾ, ನಾ ಸಾಲಿ ಬಿಡ್ತೇನಿ ನನ್ ಕೈಂದಾ ಆಗೋದಿಲ್ಲಾ", ಇಷ್ಟ ಮಾತ್ ಕೇಳಿ ರಂಗವ್ವನಿಗೇ ಎಲ್ಲಿಲ್ಲದಾ ಕೊಪ ಬಂತು, ಕೈಲಿ ತೊಳಿತಿರೋ ಪಾತ್ರೇ ತಗೊಂಡು ಮಗನ ಹತ್ರಾ ಬಿಸಾಕಿದಳು. ದ್ಯಾಮಪ್ಪಾ ಎಸೆತದಿಂದಾ ತಪ್ಪಿಸಿಕೊಂಡು, ಹಾಗೆ ಉಟ್ಟ ಲೂಂಗಿ ಮೆಲೆ ಹೊರಗೆ ಓಡಿಹೋದಾ, ಅವಳ ರೋಧನದಾ ರಾಗ ಮನೆಯಾ ಅಂಗಳದಲ್ಲಿ ಮಂದ್ರಿಸುತಿತ್ತು.
ಊರ ದ್ಯಾವರಮ್ಯಾಲ ಹರಕಿ ಹೊತ್ತು, ನೂರಾ ಒಂದು ದಿನಾ ಉಪವಾಸವಿತ್ತು,
ಒಡಲ ತುಂಬಿದ್ದಾ ನನ್ನ ದ್ಯಾವರ, ಮೂಡಿತ್ತು ನೂರಾರು ಕನಸುಗಳಾ ಹೂ ಹಾರ,
ದಿನವು ತಂಗಳನ್ನಾ ಕಾಯ್ದು ತಿಂತಿದ್ದೆ ಒಂದೆ ಹೊತ್ತು,
ಮೂರೊತ್ತು ತಿಂದು ಮಾಮ್ಲೆದಾರ ನಾಗಲೆಂದು ಮಾಡ್ತಿದ್ದೆ ದಿನವೆಲ್ಲಾ ಕಸರತ್ತು,
ನೂರಾರು ಕನಸು ನಘ್ನವಾಗಿ ಕುಣದಾವ, ದಾರಿದಾಗಿರೋ ಹುಲ್ಲು ಮುಳ್ಳಾಗಿ ಚುಂಚಾವ.

ಆಕೆಯಾ ಉಸಿರು ಭಾರ ಆಯ್ತು, ಏನ ಮಾಡಬೆಕಂತಾ ತಿಳಿಲಿಲ್ಲಾ, ಬರಿ ಲೂಂಗಿ ಮ್ಯಾಲ ಒಡಿ ಹೊದ ಮಗಾ ಬರಲಿಲ್ಲಾ, ಅಳುತ್ತಾ ಮನೆಯಲ್ಲಿ ಕುಳಿತಿದ್ದಳು, ಏನ್ ಮಾಡೋದು ನಾವ ಪಡಕೊಂಡು ಬಂದಿರೋದೆ ಇಷ್ಟೆ ಅಂತಾ ಕಣ್ಣ ಒರಿಸಿಕೊಂಡಳು, ಅಷ್ಟರಲ್ಲಿ ಪಕ್ಕದ ಮನೇ ಪಾರಮ್ಮ ಬಂದು ಕೆಲಸಕ್ಕೆ ಹೋಗೋಣ್ವಾ ಹೊತ್ತು ಆಗೆತಿ ಅಂತಾ ಕೇಳಿದಳು, ತನಗೆ ಯಾಕೋ ಹುಷಾರಿಲ್ಲಾ ಇವತ್ತು ಬರೋದಿಲ್ಲಾ ಅಂತಾ ಹೇಳಿ ಕಳಸಿದಳು.

..................................................................................

ಸೂರ್ಯನಾ ನೇರ ನೋಟ ಭುಮಿಗೇ ಭಾರವಾಗಿತ್ತು, ಊಟದಾ ಸಮಯಾ, ಹೊರಗೆ ಹೊದಾ ಮಗಾ ಇನ್ನು ಬಂದಿಲ್ಲಾ, ರಂಗವ್ವನಾ ಮನಸ್ಸು ಇಗ ಗಲಿಬಿಲಿಗೊಳಗಾಯಿತು, ಇರುವವನು ಒಬ್ಬನೆ ಒಬ್ಬ ಮಗಾ, "ಹಾರಾಡೋ ಗಿಳಿ ನಾ ಚೆಂದ ಕಾಣಲಿ ಅಂತಾ ಬಂಗಾರ ಪಂಜರದಾಗ ಇಟ್ರ, ಅದೇನ್ ಚಲೋ ಇರ್ತೇತಿ, ಪಾಪ ನನ್ನ ಮಗಾ ಸಾಲಿ ತಲಿಗೆ ಹತ್ತಲಿಲ್ಲಾ ಅಂದ್ರ ಏನ್ ಮಾಡ್ಯಾನು" ಅಂತಾ ತನ್ನನ್ನು ತಾನೆ ಸಾಂತ್ವಾನ ಪಡಿಸಿಕೊಂಡಳು, "ಹರವಿ(ದೊಡ್ಡದಾದ ಮಣ್ಣಿಣಾ ಗಡಿಗೆ) ಮಾಡೋ ಕುಂಬಾರಗ ಗೊತ್ತಿರತೇತನಾ, ಯಾವ ಹರವಿ ಎಲ್ಲಿ ಹೊಕ್ಕೆತಿ ಅಂತಾ, ನನ್ನ ಮಗಾ ಹಂಗ ಆಗ್ಬೆಕು ಹಿಂಗ ಆಗ್ಬೆಕು ಅಂದ್ರ ಎಲ್ಲಿ ಆಗ್ತೆತಿ, ಅವನ ಹಣ್ಯಾಗ ಏನ ಬರದೆತೊ ಅದ ಆಗ್ತೆತಿ", ಅಂತಾ ತನ್ನದು ತಪ್ಪಲ್ಲಾ ಮಗನದು ತಪ್ಪಲ್ಲಾ ಅನ್ನೊ ಅಡ್ಡ ಗೋಡೆ ಮೆಲೆ ಇಡೋ ದೀಪದ ತರಾ, ತನ್ನ ದ್ವಂದಗಳಿಗೆ ಪುಲ್ಲ ಸ್ಟಾಪ ಕೊಟ್ಟಳು, ಬೆಳಿಗ್ಗೆ ಮಾಡಿದಾ ಉಪ್ಪಿಟ್ಟು ಬಂದು ಬಾಂದವರಿಲ್ಲದೆ ಬೇಸತ್ತು ಮಲಗಿತ್ತು, ಮಗನಾ ಬರುವಿಕೆಗಾಗಿ ಕಾಯುತ್ತಿದಾ ಕಣ್ಣುಗಳಾ ಘೋರ ತಪಸ್ಸು ರೆಪ್ಪೆಗಳಿಗೆ ಅನಕಿಸುತ್ತಿದ್ದವು.
  ಹುಟ್ಟಿದಾ ಮ್ಯಾಲ ಸಾಯಲೇ ಬೇಕು, ಊಟದಾ ಸಮಯ ಆದ ಮ್ಯಾಲ ಮಗಾ ಬರಲೇಬೇಕು, ಅನ್ನುವದು ಅವಳಾ ನಂಬಿಕೆ, ಆ ನಂಬಿಕೆ ಕೊನೆಗು ನಿಜವಾಯಿತು, ಕಳ್ಳಕೃಷ್ಣನಂತೆ ರಂಗವ್ವನಾ ಮುದ್ದು ಕೃಷ್ಣಾ ಕಳ್ಳ ನಡಿಗೆಯಾ ಹಾಕುತಾ ಒಳಗೆ ಬಂದಾ, ಹೆದರಿಕೆಯಿಂದಾ ತಾಯಿಯಾ ಮುಕ ನೋಡಿದಾ, ಅವಳು ಸುಮ್ಮನೆ ಒಳಗೆ ಎದ್ದು ಅಡುಗೆ ಮನೆಗೆ ಹೋದಳು, ಅವನು ಎನು ಮಾಡಬೇಕೆಂದು ತಿಳಿಯದೆ ಅಲ್ಲಿ ಹೊರಗಿನಾ ಕೊಣೆಯಲ್ಲಿ ಕುಳಿತಾ, ಅಷ್ಟರಲ್ಲಿ ತಾಯಿಯಾ ಮುದ್ದಿನಾ ಮಾಮ್ಲೆದಾರ ಅಳಿದು, ಬರಿ ಪ್ರೀತಿಯಾ ದ್ಯಾಮಪ್ಪ ನಾಗಿದ್ದಾ, "ಬಾ ಊಟಾ ಮಾಡ ಬಾ" ಅಂತಾ ಮಂಪರು ದ್ವನಿಯಲ್ಲಿ ಕರೆದಳು, ಇವನು ಮನಮೋಹನ ಸಿಂಗ ತರಾ ಎನು ಮಾತಾಡದೆ ತಲಿ ಅಲ್ಲಾಡಿಸಿ ಕೈ ತೊಳಿದು ಕುತಾ, ಬೆಳಗಿನಾ ಉಪ್ಪಿಟ್ಟು, ತಾಟಿಂದಾ ಕೈ ಗೆ, ಕೈಯಿಂದಾ ಬಾಯಿಗೆ ಕರಗುತ್ತಿತ್ತು, ಒಮ್ಮೊಮ್ಮೆ ಏನೊ ತಾಯಿಗೆ ಹೆಳ್ಬೆಕು ಅಂತಾ ಕೈ ತುತ್ತು ಬಾಯಿಂದಾ ಕೆಳಗೆ ಜಾರುತ್ತಿತ್ತು, ಊಟ ಮುಗಿದಾ ಮೇಲೆ, ಕೊಲೆ ಬಸವಣ್ಣನಾ ತರಾ ಹೊರಗಿನಾ ಕೊಣೆಗೆ ಬಂದು ಕುಳಿತಾ, ಅವನ ಹಿಂದೆ ರಂಗವ್ವನು ಬಂದು ಕೂತಳು, "ಇದ್ದ ಹೊಲಾನೆಲ್ಲಾ, ನಿಮ್ಮಪ್ಪನ್ ದಾವಾಖಾನಿ ಹೆಣಕ್ಕ ಬಡೀತೀ, ಇಗ ಇರೋದ್ ನಿನೊಬ್ಬ ನನಗ, ನೋಡ.. ಆದ್ರ ಕಲಿ, ನಿನಗ ಚಲೋ ಆಗ್ತೆತಿ, ಇಲ್ಲಾ ಅಂದ್ರ ಯಾರ್ದರ ಹೊಲಕ್ಕ ದುಡ್ಯಾಕ ಹತ್ತ, ನೀನು ತಿಳಿದಾವ ಅದಿ, ಹೈಸ್ಕೂಲ್ ಕಲ್ಯಾಕತಿ" ಎಂದು ಬಲ್ಲವರಾ ನಾಲ್ಕು ಮಾತುಗಳನ್ನಾ ರಂಗವ್ವಾ ಹೇಳಿದಳು, ಎನು ಮಾತಾಡಬೆಕಂತಾ ದ್ಯಾಮಪ್ಪನಿಗೆ ತಿಳಿಲಿಲ್ಲಾ, ಅವನಾ ವಿಚಾರದಾ ಆಚಾರಗಳು ಭಂದಿಸಿದವು, "ಆಯ್ತ ಬೇ, ನಾಳಿಂದಾ ಸಾಲಿಗೆ ಬರೊಬ್ಬರಿ ಹೊಗ್ತೆನು, ಎಷ್ಟ ಆಗ್ತೆತೊ ಅಷ್ಟ ಮನಸ್ಸಕೊಟ್ಟ ಕಲಿತೇನಿ, ನಿಯೇನ ಚಿಂತಿ ಮಾಡ್ಬೆಡಾ, ನಿನ್ನ ಮಗಾ ಮಾಮ್ಲೆದಾರ ಆಗ್ತಾನು" ಅಂತಾ ಹೇಳಿ, ಹಾಗೆ ಎದ್ದು ಸ್ನಾನ ಮಾಡಿ, ಲೇಟ್ ಆದರು ಪರವಾಗಿಲ್ಲಾ ಎಂದು, ಸಮವಸ್ತ್ರ ಧರಿಸಿ, ಹೆಗಲ ಚಿಲಾ ಹಾಕಿಕೊಂಡು, ಶಾಲೆಗೆ ಹೋದಾ

...........................................................................

ರಾತ್ರಿಗಳಾ ರಂಗು ಅರಿವಿಲ್ಲದೆ ಜಾರುತ್ತಿತ್ತು, ದಿನಗಳು ನುಂಗಲು ವರುಷಾ ಕಾಯ್ದಿತ್ತು, ಹಂಗಿನಾ ಅರಮನೆಗೇ, ಧಂಗು ಬಡಿಯುವಾ ಸುದ್ದಿಗೆ, ತತ್ತರಿಸಿ ಊರು ನೆಗೆದಿತ್ತು, ಕಾರ್ಮೋಡಾ ಕಟ್ಟಿ ಕಟ್ಟಿ ಹೊಸ ಹೊಸ ಕತೆ ಹೇಳುತಿತ್ತು, ಅದೆನೆಂದರೆ ಎಸ್ ಎಸ್ ಎಲ್ ಸಿ, ರಿಸಲ್ಟ ಬರೊ ದಿನವು ಬಂದಿತ್ತು, ಭಿತಿ ಭಯಗಳಾ ಬಿನ್ನಾಬಿಪ್ರಾಯ ತಿಳಿಯದೆ ಅರವಿಗೆ ಬರೊ ಚುರುಕು, ಸದ್ದಿಲ್ಲದೆ ಎಲ್ಲ ಪುಟ್ಟ ಹೃದಯಗಳಾ ಆವರಿಸಿತ್ತು, ದ್ಯಾಮಪ್ಪನಿಗೆ ತಳಮಳಾ, ರಂಗವ್ವನಿಗಿ ಹೇಳದೆ ಶಾಲೆಗೆ ಫಲಿತಾಂಶ ತಿಳಿಯಲು ಹೊರಟಾ, ಹಾಗೆ ಹೋಗುತಿರುವಾಗ ಅವನ ಒಬ್ಬ ಗೆಳೆಯನು, "ಫಸ್ಟ ಕ್ಲಾಸ್ ನ್ಯಾಗ ಪಾಸ್ ಆಗ್ಯೇನ್ಲೆ, ದ್ಯಾಮ್ಯಾ" ಅಂತಾ ಹೇಳಿದಾ, "ನಂದ ಏನಾತೀ ಅಂತ ನೋಡಿದೇನ್" ಅಂತಾ ದ್ಯಾಮಪ್ಪಾ ಕೇಳಿದಾ, "ನಿಂದಾ... ನಾ ನೋಡ್ಲಿಲ್ಲಾ" ಅಂತಾ ಹೇಳಿದಾ, ಇಗಾ ಸ್ವಲ್ಪ ಭಯ ವ್ಯವಕಲನದಲಿ ಉಳಿಯಿತು, "ಚಲೋ ಆತಿ ಬಿಡಲೆ, ನಿಂದ್.. ನಂದ ನೊಡಿ ಬರ್ತೇನೀ" ಅಂತಾ ಹೆಳಿ, ತನ್ನ ಎರಡು ಕಾಲುಗಳನ್ನಾ ಪ್ರತಿ ಸ್ಪರ್ದಿಗಳಾಗಿ ಮಾಡಿ ಪಂದ್ಯ ನಡಿಸಿದಾ, ಅಷ್ಟರಲ್ಲಿ ಇನ್ನೊಬ್ಬ ಗೆಳೆಯ ಬೆಂದಿರುವಾ ಇದ್ದಿಲಿ ತುಂಡಿನಾ ತರಾ, ಜೋತು ಮುಕಾ ಮಾಡಿ ಬರ್ತಾ ಇದ್ದಾ, ಅವನ ಭಾವ ಬಿಡಿಸದಾ ಗಣಿತವೇನು ಆಗಿರಲಿಲ್ಲಾ, ಆದರು ಕೇಳೋಣವೆಂದು, "ಏನಲೇ, ಗುರ್ಯಾ, ಏನ ಆತಿ ನಿಂದಾ" ಅಂತಾ ಕೆಳಿದಾ, "ಫೆಲ್, ಆಗೆತಿ, ... ಮಗಂದು, ಎಂಬತ್ತ ಮಂದ್ಯಾಗ ಬರೇ ಇಪ್ಪತ್ತ ಮಂದಿ ಪಾಸ್ ಆಗ್ಯಾರ್" ಅಂತಾ ಕೆಳಿದ ತಕ್ಷಣ, ನಿರುತ್ತರವಿಡದೆ ಭಯಾ ಗುಣಾಕಾರದ ಗತಿಯಲ್ಲಿ ಕಾಲುಗಳಿಗೆ ಮತ್ತೆ ಮನಸ್ಸಿನಾ ವೇಗ ಹೆಚ್ಚಿಸಿತು, ಶುಕ್ರವಾರ ಸಂತೆಯಲಿ ಪ್ರೆಶ್ ಮಾಲ ತರೋ, ರೈತರ ಮ್ಯಾಲ ಬೀಳೊ ದಲ್ಲಾಳಿಗಳ ತರಾ, ಹತ್ತಾರು ಮಂದಿ ಫಲಿತಾಂಶದಾ ಪಟ್ಟಿಮೇಲಿ ಮುಗಿಬಿದ್ದಿದ್ದರು, ದ್ಯಾಮಪ್ಪನಿಗೆ ತನ್ನ ಹೃದಂiÀi ಎಲ್ಲಿ ಐತಿ, ಎನೋ, ಅನ್ನುದ ಭಯದ ಕತ್ತಲಲ್ಲಿ ಮರೆತಾ, "ಅದೇನೋ ಅಂತಾರಲ್ಲಾ, ಮರಗಿದರ ಮಲ್ಲಗಿ ಹೂ ಅರಳುದ ಬಿಟ್ಟಿತ್ತೆನ" ಎಂದು ಅವನು ದಲ್ಲಾಳಿಯಾಗಿ ಮುಗಿಬಿದ್ದಾ, ಹಾಗೋ ಹೀಗೋ ಒಂದು ಪಟ್ಟಿ ಸಿಕ್ಕಿತು, ಅದರಲ್ಲಿ ಅವನಾ ಹೆಸರ್ ಹುಡಕಿದಾ ಸಿಗಲಿಲ್ಲಾ, ಅಮ್ಯಾಲ ಇನ್ನೋಂದು ಸಿಕ್ತು ಅದರಲ್ಲೀನು ಸಿಗಲಿಲ್ಲಾ, ಭಯದಾ ಕಾಗೆ ಕೌ ಕೌ ಅಂತಾ ತನ್ನ ದ್ವನಿ ಎರಿಸುತಲೆ ಇತ್ತು, ಕೊನೆಯ ಪಟ್ಟಿಯಲ್ಲಿ ಅವನಾ ಹೆಸರು ಕಾಣಿಸಿತು, ತನ್ನ ಹೆಸರನ್ನಾ ಇಂಗ್ಲಿಷನಲ್ಲಿ ಒದುವಷ್ಟು ಬುದ್ದಿವಂತನಿದ್ದಾ ನಮ್ಮ ದ್ಯಾಮಪ್ಪಾ, ಆಮೆಲೆ ಅಂಕಗಳನ್ನಾ ಒಂದೊಂದಾಗಿ ನೊಡಿದಾ, ಕೊನೆಂiÀi ಅಕ್ಷರಗಳನ್ನಾ ನೋಡಿ ಅವನಾ ಜೀವನದಾ ಅಕ್ಷರಗಳೆ ಅದಲು ಬದಲಾಗಿ ಹೋದವು.
ಅದು ಫೇಲ್ ಅಂತಾ ಇತ್ತು, ದಿಕ್ಕೆಟ್ಟು ಓಡುವಾ ಧೂಮಕೇತು ತರಾ ದಿಕ್ಕು ಕಾಣದೆ ಕೂತಾ, ಹಾಗೆ ಕಣ್ಣು ಮುಚ್ಚಿಕೊಂಡಾ, ಅವನ ಅವ್ವ ರಂಗವ್ವನಾ ಪ್ರತಿಬಿಂಬಾ ಮೂಡಿತು, ಕಣ್ಣುಗಳಲಿ ನೀರು ತಮಗೆ ತಿಳಿಯದೆ ಹಾಗೆ ಉರಳಿದವು, ಎಲ್ಲಾದರು ಹೋಗಿ ಸಾಯಿ ಅಂತಾ ಒಂದು ಮನಸ್ಸು ಮೂಗುದಾರಾ ಹಾಕುತಿತ್ತು, "ನನ್ನ ಅವ್ವಗಾ ನಾನು ತಕ್ಕ ಮಗಾ ಆಗಲಿಲ್ಲಾ ಬದುಕಿದ್ದು ವೇಷ್ಟು" ಅಂತಾ ತನ್ನ ಸೆಳಿತವನ್ನು ಭಾರ ಮಾಡಿತು, ಇನ್ನೋಂದು ಮನಸು "ನೀನು ಮಾಮ್ಲೆದಾರ, ಆಗದಿದ್ರು ಪರ್ವಾಗಿಲ್ಲಾ, ನೀ ಇದ್ರ ನಿಮ್ಮ ಅವ್ವಗಾ ಹತ್ತ ಎತ್ತಿನಾ ಬಲಾ ಬರ್ತೇತೀ, ನೀ ಸತ್ತಿ ಅಂದ್ರ ಆಕಿ ನರಳಿ ನರಳಿ ಸಾಯ್ತಾಳು, ಇದು ಬೇಕಾ ನಿನಗ" ಎಂದು ಮೂಗುದಾರದಾ ಮನಸ್ಸನ್ನು ಕತ್ತರಿಸಿತು. ಕೊನೆಗೆ ಇರ್ಲಿಬಿಡು ಅಂತಾ, ಯಾರ ಜೊತೆನು ಮಾತಾಡದೆ, ಮನೆಗೆ ಅದೆ ಜೋತು ಮುಕಾಮಾಡಿಕೊಂಡು ಬಂದಾ, ರಂಗವ್ವಾ ಅದೆ ಸಮಯದಲ್ಲಿ ಹೊಲಕ್ಕೆ ಹೊಗಲು ತಲಿ ಮ್ಯಾಲ ಊಟದಾ ಗಂಟ ಇಟಗೊಂಡು, ಮಾಡನಲ್ಲಿ ಇರೊ ಕುರ್ಪಿ(ಕಬ್ಬಿಣದಿಂದಾ ಮಾಡಿದಾ ಹೊಲದಲ್ಲಿ ಕೆಲಸ ಮಾಡುವಾ ಸಾದನ) ತಗೊಂಡು ಹೋಗೊದಕ್ಕ್ ಸಿದ್ದವಾಗ್ತಾ ಇದ್ದಳು, ಅದೆ ಸಮಯದಲ್ಲಿ ಇವನು ಮನಿ ಒಳಗಡೆ ಬಂದಾ, "ಏನ್ ಆತಿ ಲಾ, ಬಾಲಾ ಸುಟ್ಟ ಹನುಮಪ್ಪನಾಂಗ ಹಂಗ್ಯಾಕ ಮಕಾ ಘಂಟ ಮಾಡ್ಕೊಂಡ ಬಂದಿ" ಎಂದು ಆರಂಬದಾ ಬೆಂಕಿ ಇಟ್ಟಳು, ಅವನು ಎನು ಮಾತನಾಡದೆ ಸುಮ್ಮನಾದಾ, "ನೀನೋ, ನಿನ್ನ ಅವತಾರಾನೋ, ನಾನ ಹೊಲಕ್ಕ ಹೊಗ್ತೆನಿ ಇನ್ನ" ಅಂತಾ ಹೆಳಿ ಹೊಗಬೆಕೆನ್ನುವಷ್ಟರಲ್ಲಿ, "ಯವ್ವ...." ಅಂತಾ ಪುಂಗಿ ಊದಿದಾ, "ಏನಾತಿ ಹೇಳ, ನಾ ಲಗುನಾ ಹೊಲಕ್ಕ ಹೊಗಬೆಕಿನ್ನ",
"ಇವತ್ತ ರಿಸಲ್ಟ ಬಂತಿ, ನಾ ಫೆಲ್ ಆಗೆನಿ" ಅಂತಾ ಹೆಳಿದಾ, ಫೆಲು ಪಾಸು ತಿಳಿಯುವಷ್ಟು ಮುಗ್ದ ಅನಕ್ಷರಸ್ಥಳು ರಂಗವ್ವ, ಇದನ್ನು ಕೆಳಿದಾ ತಕ್ಷಣ, ಕೈನಲ್ಲಿರೊ ಕುರುಪಿ ತನ್ನ ಬಾವನೆಗಳನ್ನಾ ಬೆರೆಯಲು ನೆಲಕ್ಕೆ ಉರಳಿತು, ಹಾಗೆ ತಲೆಯ ಮೆಲೆ ಕೈ ಇಟ್ಟು ನೆಲಕ್ಕೆ ತಾನು ಕುಂತಳು, ಹಾಡು ಇಲ್ಲದಾ ಸಿನಿಮಾತರಾ ಮೂಕ ವೇಧನೆ ಮನೆಯನ್ನಾ ಮರಗಿಸಿತು, ತನ್ನ ತಾಯಿಯಾ ಧುಃಖ ನೋಡಿ ಅವನಿಗು ಎನು ಮಾಡಬೆಕೆಂದು ತಿಳಿಯಲಿಲ್ಲಾ, "ನಾ ಅವತ್ತ ಹೇಳಲಿಲ್ಲಾ ನಿನಗ, ಅದರವ್ವನ್ ಇಂಗ್ಲೀಷ ತಲಿಗೆ ಹತ್ತವಾತು ಅಂತಾ, ಅದನ್ನ ಬಿಟ್ಟ ಉಳದಿದ್ದ ಎಲ್ಲಾದರಾಗು ಪಾಸ ಆಗೇನಿ",
"ಎನಾದರು ತಗೊಂಡ ಹೊಡಿ ನನಗ, ಆದ್ರ ಹಿಂಗ ಸುಮ್ನಾ ಕುತ್ಕೊಳ್ಳಾಕ ಹೊಗ್ಬ್ಯಾಡ್, ಎವ್ವ ಬೇ....." ಎಂದು ಮುಗ್ದ ಪ್ರಿತಿ, ತನ್ನ ತಾಯಿಗೆ ಸಾಂತ್ವಾನ ಹೇಳಿತು, ರಂಗವ್ವ ಎನಾದರು ಬೆಯ್ದರೇ ಎಲ್ಲಿ ತನ್ನ ಮಗಾ ಬೇಜಾರು ಮಾಡ್ಕೊಂಡು, ಎನಾದರು ಮಾಡಿಕೊಂಡ ಬಿಟ್ಟಾನು ಅನ್ನೊ ಒಂದು ಕಡೆ ಹೆದರಿಕೆ, ಇನ್ನೊಂದು ಕಡಿ ತನ್ನ ಆಸೆಗಳಾಯ್ತಲ್ಲಾ ಮರಿಚಿಕೆ, ಅನ್ನೊ ನೋವು, "ಇರ್ಲಿ ಬಿಡ್, ನಿ ಎನ್ ಮಾಡಿ, ನಿನ ಕೈನ್ಯಾಗ ಬಾರಕೊಲ್ ಗುನಿ ಅಂತಾ ದೇವರ ಬರದಾನ, ಏನು ಮಾಡಾಕ ಆಗುಲ್ಲಾ" ಅಂತಾ ಮಗನಿಗೆ ಕಾಣದ ತರಾ ಕಣ್ಣ ನಿರನ್ನಾ ಅಮಕಿದಳು,
"ನಾ ಹೊಲಕ್ಕ ಹೊಕ್ಕೆನ್ ಇನ್ನ ಮ್ಯಾಲ, ನಿ ಎನ ಕೆಲಸಕ್ಕ ಹೊಗುದು ಬ್ಯಾಡಾ, ಅರಾಮ ಮನ್ಯಾಗ ಇರ್" ಎಂದನು ದ್ಯಾಮಪ್ಪಾ, 
"ದ್ಯಾವ್ರ, ಕೋಟಿ ವಿದ್ಯೆಗಿಂತಾ, ಮೆಟಿ ವಿದ್ಯಾ ಮ್ಯಾಲ ಅಂತಾರಲ್ಲಾ ಹಂಗ ನಾನು ಹರಕಿ ಹೊತ್ತದ್ದಕ್ಕು, ನಿ ನನ್ನ ಕೈ ಬಿಡಲಿಲ್ಲಾ, ನನ್ನ ಮಗನಿಗೇ ಒಳ್ಳೆ ಬುದ್ದಿ ಅರಾ ಕೊಟ್ಟಿ, ಸಾಕಬಿಡಪಾ" ಅಂತಾ ಮನದಲ್ಲೆ ಹರುಷದಾ ಮಳೆಯಲ್ಲಿ ನೆನೆದಳು.
"ಜೋಡ್ ಎತ್ತ ಇಲ್ದಾ ಹೊಲಾ ಉಳಾಕ ಆಗಾಂಗಿಲ್ಲಾ, ನಿನ್ನ ಒಬ್ಬನಿಂದಾ ಮನಿ ನಡಸುದಾ ಒಜ್ಜಿ ಆಗ್ತೆತಿ, ಎಷ್ಟ ಆಕ್ಕೆತೊ ಅಷ್ಟ ದುಡಿತೆನೀ, ನನಗ ನಿನ್ನ ಬಿಟ್ಟ ಯಾರ ಅದಾರು ಹೇಳು, ಮಾಡಿರ್ ಎಲ್ಲಾ ನಿನಗ ಮಾಡುದು, ಇವತ್ತ್ ಬಡ್ಡಿಮನಿ ರಾಜಪ್ಪನಾ ಕೇಳಿ ಬರತೆನಿ, ಖಾಲಿ ಇದ್ರ ಅವರ ಹೊಲಕ್ಕ್ ಹತ್ತಿ ಬಿಡ" ಅಂತಾ ರಂಗವ್ವ ಹೇಳಿದಳು, ಕೊನೆಗೆ ಇಬ್ಬರ ಮನವು ತಾಯಿ ಮಗನಾ ಅಮರ ಭಾಂದವ್ಯಕೆ ಮೆರೆದು, ಆಕಾಶದಲಿ ಮೂಡಿತು ಕಾಣದಾ ಕಾಮನಬಿಲ್ಲು, ರಂಗವ್ವಾ ತನ್ನ ಕೆಳಗೆ ಬಿದ್ದಾ ಕುರ್ಪಿಯನ್ನು ಮೇಲಕ್ಕೆ ಎತ್ತಿ, ಕಾಯಕವೆ ಕೈಲಾಸವೆಂಬಾ ನಾನ್ನುಡಿಗೆ ನಾಂದಿ ಬರೆದಳು.

======================================================

ಅದ್ಯಾಯ 3

ಗತಿಸಿದಾ ಕಾಲ, ಹುದುಗಿದಾ ಇತಿಹಾಸ, ಸಿಮಿತಾ ಅವದಿ, ಪ್ರತಿಯೋಂದು ದಾರಿ ಹೇಳುವುದು ನೂರೆಂಟು ಕಥೆ, ಅಳಿಸದಾ ಇತಿಹಾಸ, ಕೆಲವೊಮ್ಮೆ ದಾರಿಗಳು ಹೆಸರು ಹೇಳದೇ ಗುರಿ ತೊರಿಸುವವು, ಕೆಲವೊಮ್ಮೆ ಗುರಿಗಳು ನಿಲವು ಕಳೆದುಕೊಂಡು ದಿಕ್ಕುಗಳಾ ಅಧ್ಯಯನಕ್ಕೆ ದಾರಿ ತೊರಿಸುವವು, ನನ್ನ ದಾರಿ ಯಾವುದು, ನನ್ನ ಗುರಿ ಯಾವುದು, ನನ್ನ ನಿಲವು ಯಾವುದು, ಕೆಲವೊಮ್ಮೆ ಎಲ್ಲವು ಒಂದೆ, ಕೆಲವೊಮ್ಮೆ ಅಂಕುಡೊಂಕು, ಈಗ ಎಲ್ಲವು ಒಂದೆ ಅದೆ ಹಾವು ಹಿಡಿಯುವದು, ಎಂದು ದ್ಯಾಮಪ್ಪನಾ ವಿಚಾರಗಳು ತೂರಿದವು.
"ಹೆಂಗೂ, ಕತ್ತಲಾಗಾಕ ಬಂತ್ರೀ, ಬೆಳಕಾದಮ್ಯಾಲ ಹಾವಾ ಹಿಡ್ಯಾಕ ಹೊದ್ರ್, ಅದಾ ಎಲ್ಲಿ ಹೊಗಿರ್ತೆತೋ ಗೊತ್ತ್ ಆಗುಲ್ಲಾ, ಆಮ್ಯಾಲ ಮನಸನ್ಯಾಗ ಒಂದು ಹುಳಾ ಬಿಟ್ಟಾಂಗ್ ಆಕ್ಕೇತೀ, ಅದಕ್ ಇವತ್ತ ಹಿಡದ ಬಿಡುನ್ರೀ", ಅಂತಾ ಟಿ ಗ್ಲಾಸು ಕೆಳಗಡೆ ಇಡುತ್ತಾ ಹೆಳಿದಾ ದ್ಯಾಮಪ್ಪಾ, ಮಲ್ಲಪ್ಪಾ ಮನದಲ್ಲೆ ಸ್ವಲ್ಪಾ ವಿಚಾರಮಾಡಿ ಮಂದಗತಿಯಲ್ಲಿ ಈರಪ್ಪನ ಕಡೆ ನೋಡಿದಾ, ಈರಪ್ಪನಾ ಸಮ್ಮತಿಯಾ ಒಪ್ಪಿಗೆಯನ್ನು ಅಪ್ಪಿಕೊಳ್ಳತ್ತಾ ಕಣ್ಣಿನಿಂದಾ ಉತ್ತರ ಕೊಟ್ಟಾ.
"ಮನ್ಯಾಗ ಇರೊ ಬ್ಯಾಟರಿ(ಟಾರ್ಚ), ಲಾಟನ್, ಎನೇನು ಅದಾವ ಎಲ್ಲಾ ತಗೊರೀ, ಜಲ್ದಿ ಹೋಗುನು" ಅಂತಾ ದ್ಯಾಮಪ್ಪಾ ಎದ್ದು ನಿಂತಾ.
"ಅಲ್ರೀ, ನಾವ್ಯೇನು ರಾತ್ರೋ ರಾತ್ರಿ ಗಡಿಪಾರ ಆಗಾಕತೇವ ಎನ್, ಹಾವ ಇರೋದು ಮನ್ಯಾಗ, ಮನ್ಯಾಗ್ ಟ್ಯುಬಲೈಟ, ಬಲ್ಬ ಅದಾವ ಲಾ, ಮತ್ತ ಇವ್ಯಾಕ ಬೆಕ್", ಎಂದು ಮಲ್ಲಪ್ಪನಾ ಮೈಂಡ ವರ್ಕ ಔಟ ಮಾಡಿತು, "ಹಾ ಹೌದಲ್ಲಾ" ಅಂತಾ ದ್ಯಾಮಪ್ಪನಾ ಟ್ಯುಬ್ ಲೈಟ ಆನ ಆಯ್ತು.
"ಹುಯ್ ಅಂತಾ ಊರ ಮಂದಿ ಕಾಡಿಗೆ, ಹುಲಿ ಹೊಡ್ಯಾಕ ಹೋಗಿ, ಬರುವಾಗ ಹಿಂದ ನೊಡಿದ್ರಾ ಒಬ್ಬರು ಇರಲಿಲ್ಲಂತಾ, ಹಂಗ ಆಗಬಾರದು ನಮ್ಮ ಕತಿ, ನಾ ಒಬ್ಬ ಹೊಗ್ತೇನಿ ಮನಿ ಒಳಗಾ, ಬೆಕಾದರ ನನ್ನ ಇಂಬಾಲಿ ಯಾರರಾ ಮನಿ ಗೊತ್ತ ಇರಾವ್ರ ಒಬ್ರ ಬನ್ರೀ", ಅಂತಾ ದ್ಯಾಮಪ್ಪನಾ ನಾಯಕತ್ವಕ್ಕೆ ನಾಂದಿ ಹಾಡಿದಾ.
"ಮತ್ತೊಂದ್ ಮಾತು, ಹಾವು ಒಂದು ಮೂಕ ಪ್ರಾಣಿ, ಅದನ್ ಕಂಡ ಕೂಡಲೆ ನನಗ ಹೇಳ್ಬೆಕ್ರೀ, ಪಟಕ್ಕನಾ ಬಡಗಿಲೆ ಬಡ್ಯಾಕ ಹೊಗ ಬ್ಯಾಡ್ರೀ, ಏಲ್ಲಾರ್ಗು ತಿಳೀತ್ರಿ ನಾ ಹೆಳಿದ್ದು" ಅಂತಾ ಎಲ್ಲರನ್ನಾ ನೊಡಿ, ಅವರಾ ಸಮ್ಮತಿಗಾಗಿ ಕಾಯ್ದಾ.

     ...........................................................................

ಗಗನದಾ ಗಾನಾ ತಿಳಿಬ್ಯಾಡಾ ಜಾಣಾ, ಅರಿತು ನಡೆವುದೆ ಜೀವನಾ, ತಾಯಿ ಪ್ರೀತಿಗೇ ಕೋಟಿ ನಮನಾ, ದ್ಯಾಮಪ್ಪಾ ಹೊಲದಾ ಕಾಲು ದಾರಿಯಲ್ಲಿ ಹೊಗುತ್ತಾ ವಿಚಾರಧಾರೆಗಳನ್ನಾ ಬೆಳಕಿಗೇ ಇಟ್ಟಾ, ಅಲ್ಲೇ ಗೌಡರಾ ತೊಟದ ಮನೆ ಬಂತು, ಗೌಡ್ರು ಮನೆಯ ಹೊರಗಿನಾ ಜಗಲಿಯಾ ಕಟ್ಟೆಯಾ ಮೆಲೆ, ಎಲೆ ಅಡಿಕೆ ಬಾಯಲ್ಲಿ ಜಿನಗುತ್ತಾ ಕೂತಿದ್ದರು.
"ನಮಸ್ಕಾರ್ ರೀ, ನಾ ರಂಗವ್ವನ ಮಗಾ ರೀ, ಅವ್ವಾ ಹೆಳಿಳರೀ, ನಿಮ್ಮ ಹೊಲಕ್ಕ ಕೆಲಸಕ್ಕ ಹತ್ತ ಅಂತಾ, ಅದಕ ನಿಮಗಾ ಮಕಾ ತೋರಿಸಾಕ ಬನ್ರಿ" ಅಂತಾ ನಮ್ರತೆಯಿಂದಾ ಹೇಳಿದಾ ದ್ಯಾಮಪ್ಪಾ, ಗೌಡ್ರು ಅಲ್ಲೆ ಇರು ಚರಗಿ(ಚಂಬು) ತಗೆದು ಬಾಯೊಳಗೆ ನೀರು ಹಾಕಿ ಉಗಿದು, ಮತ್ತೆ ಕಟ್ಟೆಯ ಮೆಲೆ ಕೂತರು.
"ಮಾಡ(ಮೋಡ) ಕ ಲಾ ಭೂಮಿ ತಾಯಿ ತಾಪ ಗೊತ್ತಾಗುದು, ನಿಮ್ಮ ಅವ್ವ ನನ್ನ ಮಗಾ ಮಾಮ್ಲೇದಾರ್(ತಹಸಿಲ್ದಾರ) ಆಗ್ತಾನು, ಬಾಳ ಶ್ಯಾನ್ಯಾ ಅದಾನು ಅಂತಾ, ತಲಿ ಎತ್ತಿ, ಹೊಳ್ಯು ಚಂದ್ರಾಮನಗತೆ ನಕ್ಕೋಂತ ಅಡ್ಯಾಡತಿದ್ಲು, ಇಗ ನೊಡ ಗ್ರಹಣ ಹಿಡದಾಂಗ ಆಗ್ಯಾಳು, ನಿಮ್ಮ ಅವ್ವ ಹೇಳಿದಾಂಗ ನೆಟ್ಟಗಾ ಕಲಿಬಾರ್ದು ದಡ್ಡ ಸುಳಿಮಗನಾ, ಏನ್ ದಾಡಿ ಆಗೆತಿ ನಿನಗಾ, ಗೊರ್ಮೆಂಟದವರ ಸರೆ ನಿಮ್ಮ ಮಂದಿಗೆ ಸಾಲಿ ಕಲ್ಯಾಕ ಎಷ್ಟು ಸಹಾಯ ಮಾಡ್ತೆತೀ", ದ್ಯಾಮಪ್ಪಾ ನೋವಿನಾ ಇಂಗಿತವನ್ನು ಮುಖ ಕೆಳಗೆ ಮಾಡಿ ಹೆಬ್ಬೆರಳಿನಾ ತುದಿಯಾ ಚಿತ್ತಾರದಿಂದಾ ವ್ಯಕ್ತಪಡಿಸಿದಾ.
ಕಣ್ಣೀರು ಕರಗಿತು ಕಣ್ಣಲ್ಲಿಯೇ,
ನಿನ್ನ ಇಂಗಿತಾ ಅರಿಯದೆ ಹಾಳಾದೆ, ನನ್ನಲ್ಲಿಯೇ,
ನಿನ್ನ ಋಣ ತಿರಿಸಲು ಮತ್ತೆ ಮತ್ತೆ ಹುಟ್ಟಿ ಬರುವೆ ನಾ ಏಳೆಳು ಜನುಮಾ,
ನಿನ್ನ ಸೆವೆಯಾ ಮಾಡಿ ಕಳೆಯಲಿ ನನ್ನಾ ನೂರೆಂಟು ಕರ್ಮಾ.
"ಇಲ್ರೀ, ಮುಂದಿನ ಸಲಾ ಎಕ್ಷಾಮ ಬರದ ಪಾಸ ಆಗತೆನ್ರೀ, ಅಲ್ಲಿವರೆಗು ಖಾಲಿ ಎನ್ ಖೂಡುದ್ ಅಂತಾ ಕೆಲಸಕ್ಕ ಬರ್ತೇನ್ರೀ, ಅವ್ವಾಗ ಅಟ ಹೆಗಲ ಕೊಟ್ಟಾಂಗ ಆಕ್ಕೇತ್ರೀ",
"ಹೂ, ಆತಿ ತಗೊ, ದೇವ್ರು ಓಳ್ಳೆದ್ ಮಾಡ್ಲಿ, ನಿಯೆನ್ ಆಳಗೊಳ ಜೊತೆ ಮೈ ಮುರದ ದುಡ್ಯುದು ಬ್ಯಾಡಾ, ದಿನಾ ಕರೆಮ್ಮನ(ಹಿಂದು ದೆವರ ಹೆಸರು) ಕಬ್ಬಿಣ ತೋಟಕ ಹೊಗಿ ನಿರ್ ಹಾಸಿ ಬಾ, ಆ ಹನಮ್ಯಾನ ಹಿಂಬಾಲಿ ಹೋಗಿ, ಹೆಂಗ ಕೆಲಸಾ ಮಾಡುಬೆಕಂತಾ ತಿಳಕೊ, ಮನ್ಯಾಗ ಊಟಾ ಕಟ್ಟಿ ಕೊಡತಾರು, ತಗೊಂಡ ಅವನ ಜೊತಿಗಿ ಹೋಗ್", ಎಂದು ಗೌಡರು ಹೆಗಲಮ್ಯಾಲಿಂದಾ ವಸ್ತ್ರಾ ತಗೆದು ಕೈಲಿ ಹಿಡಿದು, ಒಳಗಡೆ ಹೊದರು

......................................................................

        "ಯವ್ವಾ.., ಯವ್ವಾ..., ಎಲ್ಲಿ ಅದಿ ಬೇ" ಅಂತಾ ಜೋರಾಗಿ ಒಡಿ ಬಂದಾ ದ್ಯಾಮಪ್ಪಾ, ಹುಲಿ ಬಾಯಿಂದಾ ತಪ್ಪಿಸಿಕೊಂಡು ಬಂದಾ ಜಿಂಕೆಯಂತೆ,
"ಯಾಕ್, ಲಾ ಏನಾತೀ, ಹಂಗ್ಯಾಕ ಬಡಕೊಂಡ ತಿನ್ನಾವರಗತೆ ಮಾಡಾಕತಿ",
"ಇವತ್ತ್, ಹೊಲದಾಗ ನೀರ್ ಹಾಸಾಕತಿನ್ನಿ, ಒಂದು ಹಾವ ತುಳದನಿ, ನಾಗರಹಾವ ಕಾಂತೆತಿ, ತಿರಗಿ ಅದಾ ಕಡ್ಯಾಕ ಬಂತಿ, ಕೈನ್ಯಾಗಿರು ಸಲಕಿ ತಗೊಂಡ ಬಡದ್ನಿ, ಒಮ್ಮೆ ಸತ್ತಾಂಗ ಬಿತ್ತಿ, ದೂರ್ ನಿಂತ ನೊಡಾಕತಿನ್ನಿ, ಮತ್ತ್ ಅದ ಚಂಗನ ಜಿಗದಾ ಒಡಿ ಹೊತಿ, ನನಗ ದಿಕ್ಕ ಕಾಣಲಿಲ್ಲಾ, ಅಲ್ಲೆ ಸಲಕಿ ಒಗದಾ ಕಿತಗೊಟ್ಟ ಒಡಿ ಬನ್ನಿ"
"ಬಾವಾ.., ಕಣ್ಣಾಗೇನ್ ಎಮ್ಮಿ ಗೊಡ್ಡ್ ಮಲಗಿತ್ತೀ, ನೊಡಕೊಂಡ ಕೆಲಸಾ ಮಾಡಾಕ್ ಆಗುದಿಲ್ಲಾ, ಕಡಿಲಿಲ್ಲಲೋ ನಿನ್ನ ಅದ್, ಸರಿಯಾಗಿ ನೋಡ ಒಮ್ಮೆ", ಅಂತಾ ಕೈನಲ್ಲಿ ಜೀವಾ ಹಿಡಿದವರಾ ತರಾ ಕೈ ಕಾಲು ಎಲ್ಲಾ ಕಡೆ ನೋಡಿದಳು, ಯಾವ ಕಚ್ಚಿದಾ ಗುರುತು ಸಿಗಲಿಲ್ಲಾ,
"ಯವ್ವಾ ಕರೆವ್ವಾ(ದೆವತೇ) ಪ್ರತಿ ಅಮಾಸಿಗು, ನಿಂಗ ಎಡಿ ಹಿಡಿಲ್ದಾ ಊಟಾ ಮಾಡಾಂಗಿಲ್ಲಾ, ನನ್ನ ಮಗಾ ಎನ್ ತಪ್ಪ ಮಾಡ್ಯಾನು, ಅವನ್ ಮ್ಯಾಲ ಯಾಕ ನಿನಗ ಸಿಟ್ಟ, ಅವನ್ ತಪ್ಪ ಏನೆ ಇದ್ರು ಹೊಟ್ಟ್ಯಾಗ ಹಾಕೋವಾ, ನಿಂಗ ಪ್ರತಿ ದಿನಾ ಪೂಜೆ ಮಾಡಿ, ಎಡಿ ಹಿಡಿತೆನಿ", ಅಂತಾ ತನ್ನ ಸಿರೆಯಾ ಶೆರಗಿನಿಂದಾ ಕಣ್ಣಿರು ಒರೆಸುತ್ತಾ, ಪಕ್ಕದಾ ಮನೆಯ ಕಲ್ಲವ್ವನಾ  ಕರೆದು ಹಿಗೆ ಹಿಗೆ ಅಂತಾ ವಿಷಯ ತಿಳಿಸಿದಳು.
"ದ್ಯಾಮ್ಯಾ, ಹೆಂಗ ಇತ್ತಲಾ ಹಾವ, ಕರೆವ್ವನ ಕಂಟ್ಯಾಗ ಇರತೆತಲಾ ಅದ್ಹ ನಾಗರಹಾವನ ಮತ್ತ್" ಅಂತಾ ಕಲ್ಲವ್ವ ಕೇಳಿದಳು.
"ಹಾ ಬೆ, ಅದ್ ಹಂಗ ಇತ್ತ್",
"ಛೇ.. ಛೇ... ಘಾತಾ ಮಾಡಿದ ಬೇ, ನಿನ್ನ ಮಗಾ, ಅದೂ ಕರೆಮ್ಮನ್ ಹಾವಾ, ಹೊಟ್ಟಿಗೆ ಎನ್ ತಿಂತಾನು ಗೊತ್ತ ಆಗುಲ್ಲಾ ಅವಂಗ, ಅದು ಪೂರಾ ಸತ್ತಿತ್ತ್ ಅಂದ್ರ, ಒಂದ್ ವೆಳೆ ಚಲೊ ನಾ, ಕರೆಮ್ಮಗ ನಡಕೊಂಡ್ರ್ ಮಾಡಿದ್ ಪಾಪ ಹೊಕ್ಕಿತ್ತಿ, ಅರ್ದಾ ಮರ್ದಾ ಹೊಡದಾನ ಇವಾ, ಇದಾ ದೊಡ್ಡ ಮಹಾಪಾಪದ ಕೆಲಸಾ, ದೇವರ್ ಹಾವಿನ್ನು ಸಿಟ್ಟ ನೂರು ವರ್ಷ ಅಂತ್, ನಿಮ್ಮ ಮನಿತನಾ ನಾಶ ಮಾಡುಮಟಾ ಆ ಹಾವ ಸುಮ್ನ ಕುಂದ್ರಾಗಿಲ್ಲಾ, ಅಯ್ಯೋ ನನ್ನ ಕರ್ಮಾ ಎನ್ ಆತಿ ಬೇ, ನಿನ್ನ ಜೀವನಾ" ಅಂತಾ ತನ್ನಾ ಗೊಳಾಟವನ್ನು ಬಯಲಿಗೆ ಇಟ್ಟಳು ಕಲ್ಲವ್ವಾ. ದ್ಯಾಮಪ್ಪನಿಗೆ ಇ ವಿಷಯ ಕೇಳಿ ಕೈ ಕಾಲುಗಳಲ್ಲಿ ಶಕ್ತಿ ನಶಿಸಿ, ನಡಗಲು ಶುರು ಆಯಿತು, ರಂಗವ್ವನಿಗೆ ದಿಕ್ಕೆ ತೊಚದೆ, ಕಂಬಕ್ಕೆ ವರಗಿ ಹಾಗೆ ಕೂತಳು, 
"ಬಾ ಜಲ್ದಿ ಹೋಗಿ, ಕರೆಮ್ಮನಿಗೆ ಬೆಟ್ಟಿ ಆಗಿ, ಪೂಜೆ ಮಾಡಿ, ದೀಪಾ ಹಚ್ಚಿ ಬೆಡಕೊಂಡ ಬರುನು, ಮನ್ಯಾಗ ದೀಪಾ ಹಚ್ಚಿ ನಿನ್ನ ಮಗನ್ನಾ ಅಲ್ಲೆ ಕುಂದರಸು, ಜಲ್ದಿ ಬಾ ಹೋಗುನು, ಹಂಗಾ ಬರುವಾಗಾ ಗುಡ್ಯಾನ ಅಪಗೊಳ್(ಸ್ವಾಮಿಗಳು)ಗೆ ಕಡೆ ಹೊಗಿ, ಮುಂದ ಎನ ಮಾಡಬೆಕಂತಾ ಕೇಳಕೊಂಡ ಬರುನು",
"ಆತಿ ವಾ, ಕಲ್ಲವ್ವಾ, ನನ್ನ ಮಗಾ ಹುಟ್ಟಿದಾಗಿನಿಂದಾ ಆಕಳದಂತಾವಾ, ಒಂದು ಇರವಿ ಕುಡಾ ಹೊಡದಾವಲ್ಲಾ, ಇವತ್ತ ದ್ಯಾವ್ರ ಅವಂಗ್ ಹಿಂತಾ ಬುದ್ದಿ ಯಾಕ ಕೊಟ್ಟಾ ಗೊತ್ತಾಗಲಿಲ್ಲಾ, ಅದು ಕರೆವ್ವನ ಹಾವನಾ ಸಲಕಿ ತಗೊಂಡು ಬಡದ ಬಂದಾನು, ನಾಳಿ ಕಾರಿಮನಿ ಮಲ್ಲಯ್ಯ(ದೆವರು) ಬೆಟ್ಟಿ ಆಗಿ, ಬೇಡಕೊಂಡು ಬರತೆನಿ, ಕರೆಮ್ಮಾ ನಿನಗಾ ಅಷ್ಟ ಸಿಟ್ಟ ಇದ್ರ್, ನನ್ನ ತಗೊ, ನನ್ನ ಮಗನಿಗೆ ಎನು ಮಾಡಾಕ ಹೊಗ್ಬ್ಯಾಡಾ ತಾಯಿ", ಅಂತಾ ರಂಗವ್ವನಾ ರೋಧನಾ ಆಕಾಶದಾ ಕಾರ್ಮೊಡಗಳಿಗು ಸಹಿಸದಾಯಿತು, ಅತ್ತ ಮಳೆಯಾ ಆಟ, ಇತ್ತ ಮಳೆಯಾ ನಿರಲ್ಲು ರಂಗವ್ವನಾ ಕಣ್ಣೀರಿನಾ ತೊಳಲಾಟ, ದಾರಿ ಮೇಲಿನಾ ಹೆಜ್ಜೆ ಗುರುತುಗಳು ಅಳಿಸುತ್ತಾ ತಾ ಮುಂದು ನಾ ಮುಂದು ಏಂದು ಸೆಣಸಾಟ ನಡೆಸಿದವು.

..............................................................................

ಬೆಳಕಿಗೆ ಕತ್ತಲಾಟ, ಮೌನಕೆ ಮಾತಿನಾ ಕಾಟ, ಹಾವು ಮೊದಲಾ ಮನುಷ್ಯ ಮೊದಲಾ, ನಮ್ಮ ಜ್ಞಾನಕೆ ತಿಳಿಯದಾ ಪಾಠಾ, ಮಳೆಹನಿಗೆ ಧುಮಕುವಾ ಆಸೆ, ಧುಮಕಿದಾ ಮೆಲೆ ಎನಾಗುವೆ ಎನ್ನುವಾ ಚಿಂತೆಯಂತೆ, ಮಲ್ಲಪ್ಪನು ಹಾವು ಹಿಡಿಯುವಾ ಪಂದ್ಯಕ್ಕೆ ಇನ್ನೇನು ಸೀಟಿ ಊದಬೇಕಿತ್ತು, ಆದರು ಮುಂದೆ ಎನಾಗುವದೊ ಅನ್ನುವಾ ಚಿಂತೆ ಉರಿಯುತಿತ್ತು. ದ್ಯಾಮಪ್ಪ ಮನೆಯ ಬೀಗದ ಕೈ ಕೇಳಿ ಪಡೆದಾ, ಮೌನ ಮಾತನಾಡದಿದ್ದರು ತಳಮಳಕ್ಕೆ ಮುಖ ಅರಳಿತ್ತೇ, ಅನ್ನುವಾ ಹಾಗೆ ಮಲ್ಲಪ್ಪನಾ ಮುಖದಲ್ಲಿ ಏನೋ ಕಳವಳಾ ಕಾನುತ್ತಾ ಇತ್ತು.
"ನಿಮ್ಮ ಇಂಬಾಲಿ, ನಾ ಒಬ್ಬ ಬರತೇನ್ರೀ, ಮತ್ತ ಯಾರು ಬ್ಯಾಡಾ, ಸುಮ್ನ ಯಾಕ್....." ಅಂತಾ ಹೆಳಿದಾ, ಮಲ್ಲಪ್ಪನಾ ಹೆಂಡತಿ ಮಲ್ಲಪ್ಪನನ್ನಾ ಒಳಗಡೆ ಕರೆದು, ಬೇಡಾ ನೀವು ಹೋಗೊದು, ದ್ಯಾಮಪ್ಪಾ ಒಬ್ಬನೆ ಹೋಗಲಿ ಅಂತಾ ಮಲ್ಲಪ್ಪನನ್ನಾ ತಡೆದಳು, ಇವರ ಮುಗ್ದ ಪ್ರೇಮದಾ ಮೌನಾ ದ್ಯಾಮಪ್ಪನಿಗೆ ತಟ್ಟಿತು.
"ರೀ ಸಾಹೆಬ್ರ್, ಹಾವಾ ಹಿಡ್ಯಾಕ ಹೋಗು ಮೊದಲಾ, ಸ್ವಲ್ಪಾ ಹಾವಿನಾ ಬಗ್ಗೆ ತಿಳಕೋನ್ನು, ಎಲ್ಲರಿಗು ಧೈರ್ಯ ಬರತೇತಿ, ಹಾವ ಅಂದ್ರ ಬ್ರಹ್ಮರಾಕ್ಷಸಾ ಅಲ್ಲ್, ಒಮ್ಮೆ ಹಿಡಕೊಂಡರಾ ಸಾಯು ತನಾ ಬಿಡಂಗಿಲ್ಲಾ ಅನ್ನಾಕ್" ಅಂತಾ ತನಗೆ ತಿಳಿದಾ ಜ್ಞಾನದಾ ಬಂಡಾರವನ್ನಾ ವಿಸ್ತರಿಸಿದಾ.
"ಇ ಜಗತ್ತಿನಲ್ಲಿರೋ, ಪ್ರಾಣಿ, ಪಕ್ಷಿಗಳು, ಜಲ ಜಂತು, ಮತ್ತೇ ಎಲ್ಲಾ ಜೀವ ಜಂತುಗಳನ್ನು ಕ್ಲಾಸ್ಗಳಾಗಿ ವಿಜ್ಞಾನದಲ್ಲಿ ಡಿವೈಡ್ ಮಾಡ್ತಾರೇ, ಮಂಗನಿಂದಾ ಮಾನವಾ ಅಂತಾ ಕೆಳಿದಿರಲ್ಲಾ ಹಾಗೆ ಮನುಷ್ಯ ಖುಡಾ ಒಂದು ಪ್ರಾಣಿ, ನಾವು ಇಲ್ಲಿ ಮನಷ್ಯಾರ್ನಾ ಹೇಗೆ, ಹಿಂದು, ಮುಸ್ಲಿಮ, ಕ್ರಿಷ್ಚಿಯನ್ನಾಗಿ ಹೇಗೆ ವಿಂಗಡಿಸುತ್ತೆವೊ ಹಂಗಾ, ಹಂಗಾ ಇ ಹಾವುಗಳು ರೆಪ್ಟೈಲ್ ಕ್ಲಾಸ್‍ಗೆ ಸೇರೊದು, ಅದರಲ್ಲಿ ಮತ್ತೆ ಸಬ್‍ಆರ್ಡರ್ ಸೆರಪೆಂಟ್ಸ ನಲಿ ಬರುತ್ತೆ, ಮತ್ತೆ ಅದರಲ್ಲಿ ಫ್ಯಾಮಲಿಗಳಾಗಿ ವಿಂಗಡನೆಯಾಗಿ ಮಾಡ್ತಾರೆ, ಹಿಗೇ 18 ತರಾ ವಿವಿದ ಫ್ಯಾಮಲಿಗಳಾಗಿ ವಿಂಗಡಿಸ್ತಾರೆ, ಇದೆಲ್ಲಾ ಹೆಂಗ ಅಂದರಾ ನಾವು ಹಿಂದುಗಳೊಳಗಾ ಲಿಂಗಾಯತರು, ಬ್ರಾಹ್ಮನರು ಹಿಗೆ ಹಲವಾರು ಕಾಸ್ಟ ಮತ್ತೆ ಅದರಲ್ಲಿ ಹೇಗೆ ಸಬ್‍ಕಾಸ್ಟ ಬರುತ್ತೊ ಹಾಗೆ, ಇ ನಾಗರಹಾವು ಬರೋದು ಏಲಾಪಿಡಿಯಾ ಅನ್ನೊ ಫ್ಯಾಮಲಿನಲ್ಲಿ ಬರುತ್ತೆ, ಮತ್ತೆ ಪ್ರತಿಯೊಂದು ಫ್ಯಾಮಲಿನಲ್ಲಿ ಹಲವಾರು ಸ್ಪಿಸಿಜ ಅಂದರೆ ಪ್ರಭೇದಗಳು ಬರುತ್ತೆ, ಹೆಂಗ ಅಂದ್ರಾ ಮಾವಿನ ಹಣ್ಣಿಣಾಗ ಗೋವಾ ಮಾವಿನಕಾಯಿ, ಆಪುಸ್, ಕಲ್ಮಿ ಮಾವನಹಣ್ಣ ಹೆಂಗೋ, ಹಂಗ ನೊಡ ಇ ಪ್ರಭೇದಗಳು ಅಂದರಾ, ಇದರಾಗ ಎಲ್ಲಾ ಹಾವಗೊಳಿಗೆ ವಿಷಾ ಇರುಲ್ಲಾ, ಕೆಲವೊಂದಕಾ ಜಾಸ್ತಿ ಇರತಾವು, ನಾಗರಾಹಾವಿಗು ವಿಷಾ ಇರತೆತಿ, ಅದಕ ಇಂಗ್ಲಿಷನ್ಯಾಗ ಕೊಬ್ರಾ ಅಂತಾರ್, ನಿವ್ ಯಾರು ಹೆದರಾಕ ಹೋಗಬ್ಯಾಡ್ರಿ, ಅದು ಎನಾದ್ರು ಕಡದ್ರ್, ಬೇಕಾಗಿರೊ ಔಷಧಿ ತಂದೇನಿ, ಯಾಕಂದ್ರ್ ನಿಮಗಿಂತಾ ಜಾಸ್ತಿ ನನಗಾ ಡೆಂಜರ್ ಲಾ ಅದಕ, ಕರಡಿಇಂಬಾಲಿ ಕುಸ್ತಿ ಹಿಡ್ಯಾವ ಹೆದರಬೆಕು, ಕುಸ್ತಿ ನೋಡಾವ ಅಲ್ಲಾ" ಅಂತಾ ಧಿರ್ಘ ಭಾಷಣಕ್ಕೆ ಪುಲ್ಲ ಸ್ಟಾಪ್ ಕೊಟ್ಟು, ಮುಗಳ್ನಕ್ಕಾ ದ್ಯಾಮಪ್ಪಾ. ಇಗಾ ಎಲ್ಲರ ಮುಖದಲ್ಲೂ ಏನೋ ಒಂದು ಮಿಂಚು ಬಂದು ಹೋದ ಹಾಗೆ ಆಯಿತು, ಅಜ್ಞಾನದಾ ಕತ್ತಲೇ ವಿಜ್ಞಾನದಾ ಬೆಳಕಿಂದಾ ಸೆರೆಸಿಕ್ಕು ಮಾಯವಾಗಹತ್ತಿತು, 
"ಹಾವುಗಳಿಗೆ ಕಾಲಿಲ್ಲಾ, ಕಿವಿಗಳಿಲ್ಲಾ, ಅದು ತೆವಳುತ್ತಾ ಹೊಗುತ್ತೆ, ಸ್ಪರ್ಷಜ್ಞಾನ ಕಿವಿಗಳ ತರಾ ಕೆಲಸ ಮಾಡುತ್ತೆ, ನಮಗ ಹೆಂಗ ಜೀವಭಯಾ ಇರೊತ್ತೊ ಅದಕು ಹಂಗಾ, ತಮಗೆನಾದ್ರು ಅಪಾಯ ಆಗಬಹುದು ಅಂತಾ ಕಡ್ಯಾಕ ಬರತಾವು, ಅವುಗಳ ಕಣ್ಣು, ಮೆದುಳು ಶಕ್ತಿ ನಮಕಿಂತಾ ಬಾಳ ಕಡಿಮಿ, ಇವ ಮಲ್ಲಪ್ಪಾ ಮನ್ನಿ ನನ್ನ ಬಡದಿದ್ದಾ ಇವತ್ತ ಕಡ್ಯಾಕ ಹೊಗಬೆಕ ಅನ್ನೋ ಶಕ್ತಿ ಅವಕ ಇರುದಿಲ್ಲಾ, ಅವು ದೇವ್ರ ಹುಟ್ಟಸಿರೊ ಮನಸ್ಯಾರಂಗ, ಒಂದು ಪ್ರಾಣಿ, ಒಂದು ಜೀವಾ, ಏನೋ ಬ್ಯಾಟಿ ಹುಡಿಕ್ಕೋಂತ್ ಹಿಂಗಾ ಊರಾಗ ಮನಿಕಡೆ ಬಂದಿರ್ತಾವು, ಒಂದು ಉದ್ದಂದ ಬಡಗಿಲೆ ಹಗರಗಾ ಹೆಡಿ ಒತ್ತಿ ಹಿಡಿದು, ಒಂದ ಕೈಲೆ ಬಾಲಾ ಹಿಡಿದ ಚಿಲದಾಗ ಹಾಕಿ ಗುಡ್ಡಕ್ ಹೊಗಿ ಬಿಟ್ಟ ಬಂದರ್ ಆತಿ, ಹಿಂದೂ ಧರ್ಮದಾಗ ಹಿಂಗಾ ಪ್ರಾಣಿ ಹಿಂಸೆ ಮಾಡಬಾರದು ಅಂತಾ, ಪ್ರತಿಯೊಂದು ಪ್ರಾಣಿನು, ಒಂದೊಂದು ದೇವರ ತರಾ ಕಾಣತಾರು, ಹಾವಿಗೆ ನಾಗದೆವರು ಅಂತಾರ, ಅದು ಅವರವರಾ ನಂಬಿಕೆ, ಆದರೆ ಮೂಡನಂಬಿಕೆನಾ ನಂಬಾಕ ಹೋಗಬ್ಯಾಡ್ರಿ, ಇ ಹಾವಿನ ಬಗ್ಗೆ ಹೇಳಬೇಕಂದ್ರಾ ಬಾಳ ಐತಿ, ಹೊತ್ತ ಆಗಾಕ ಬಂತಿ, ಆಮ್ಯಾಲ್ ಎಲ್ಲಾ ಹೇಳತೆನಿ, ಈಗಾ ನಾನು ಮಲ್ಲಪ್ಪಾ, ಇಬ್ರು ಮನಿ ಒಳಗ ಹೋಗಿ, ಇದ್ರ್ ಹಿಡಕೊಂಡ ಬರತೇವು, ನೀವು ಎಲ್ಲಾ ಅಲ್ಲಿಗೆ ಬಂದು ಸುಮ್ಮನಾ ಗದ್ಲಾ ಮಾಡುದು ಬ್ಯಾಡಾ", ಈಗಾ ಮಲ್ಲಪ್ಪನಿಗೆ ಅನಿಸಿತು ಮುಖಾನೊಡಿ ಮಳಾ ಹಾಕಬಾರದು ಅಂತಾ, ಹಳ್ಳಿ ಹುಂಬನ ತರಾ ಕಂಡ್ರು ದ್ಯಾಮಪ್ಪಾ ಹಾವಿನಮ್ಯಾಲ ಪಿ.ಎಚ್.ಡಿ ಮಾಡಿರ್ಬೆಕು ಅಂತಾ. ಮುಂಜಾನೆಯಾ ಕೆಂಪದುಂಡೆಯಾ ಸೂರ್ಯ ಒಮ್ಮೆಲೆ ಪ್ರಕಾಶಮಾನವಾಗೊತರಾ, ವಿಜ್ಞಾನದಾ ಬೆಳಕು ಎಲ್ಲರಾ ಮನದಲ್ಲು ಬೆಳಗುತಿತ್ತು, ಮಲ್ಲಪ್ಪನಾ ಹೆಂಡತಿಗು ಸ್ವಲ್ಪಾ ಧೈರ್ಯ ಬಂದಿತ್ತು, ಮಲ್ಲಪ್ಪಾ ಮತ್ತೆ ದ್ಯಾಮಪ್ಪಾ ಹಾವಿರೊ ಮನೆಗೆ ಹೊಗಲು ಹೊರಗಡೆ ಬಂದರು.

======================================================

ಅದ್ಯಾಯ 4


ಅರಿವಿಲ್ಲದೆ ಕಾಣುವಾ ಕನಸಿಗೆ ಹುಟ್ಟಿಲ್ಲಾ, ಸಾವಿಲ್ಲಾ, ಅದು ಭ್ರಮೆಯ ಅಂತರಂಗದಾ ಅರಿವು, ಅದು ನೈಜತೆಗೆ ಬಣ್ಣ ಹಚ್ಚಿ ಆಡುವ ನಾಟಕ, ಕೆಲವೊಮ್ಮೆ ದೃಶ್ಯಗಳು ಕೈ ಮೀರೀ ಹೊಗುವುದುಂಟು. ಅಂಧಕಾರದಾ ಅಲೆಗಳು ಬಿಸುತಿವೆ ಭಯದಾ ಬಾಹುಗಳೊಂದಿಗೆ, ದಿಕ್ಕಿಲ್ಲಾ ದಿಶೆಯಿಲ್ಲಾ ಇಲ್ಲಿ ನಾನು ತಾನೆಂಬುದು ಅರಿವಾಗುತ್ತಿಲ್ಲಾ, ಕಾರ್ಮೊಡಾ ಕೂಡಾ ಕಕ್ಕುತಿಹೇ ಕಪ್ಪಾದ ದ್ರಾವಣಾ.
"ಯವ್ವಾ... ಯವ್ವಾ... ನಾ ಸತ್ತನಿ ಬೇ, ಹಾವ ಕಡಿತೀ ನನಗಾ, ಯವ್ವಾ ನಾನ ಸತ್ತನೀ..." ಎಂಬ ಜೋರಾದ ಅರಚಾಟ, ರಾತ್ರೀ ಕತ್ತಲು ಬೆಳಕಿನಾ ಅಮಲಿನಾಟದಲಿ ರಂಗವ್ವನಾ ಕಿವಿಗಳಲ್ಲಿ ತೋರಿ, ಎದೇ ದಸಕ್ಕ ಎಂದಿತು, ಎದ್ದು ಮನೆಯ ಲೈಟ್ ಆನ್ ಮಾಡಿದಾಗ, ಮಗಾ ಹಾಸಿಗೆಯಲಿ ಬಿದ್ದು ವಿಲಿ ವಿಲಿ ಅಂತಾ ಹೊರಳಾಡುತಿದ್ದಾ, 
"ದ್ಯಾಮ್ಯಾ.. ದ್ಯಾಮ್ಯಾ ಎನಾತಿಲಾ.." ಅಂತಾ ಅವನ ಮೈ ತಡವಿ ಎಬ್ಬಿಸಹತ್ತಿದಳು,
"ಯಾವ ಹಾವ, ಎನ ಆತ್ಯೋ... ನನ್ನ ಮಗನಾ, ಎಲ್ಲಿ ಕಡಿತಿ, ಎಲ್ಲಿ ಐತಿ ಹಾವ..." ಅಂತಾ ಅವನಾ ಕೈ ಕಾಲು ನೊಡಿದಳು, ಯಾವ ಕಚ್ಚಿದಾ ಗುರುತು ಇರಲಿಲ್ಲಾ, ಮನೆಯಲ್ಲಿ ಒಮ್ಮೆ ಕ್ಲೂ ಗಾಗಿ ಹುಡಕುವಾ ಪೋಲಿಸ್ ಆಪಿಸರ್ ತರಾ ಹಾವಿಗಾಗಿ ಹುಡುಕಾಡಿದಳು.
"ಏಳಲಾ ಭಾವಾ... ಕನಸ್ ಬಿತ್ತ ಎನ್ ನಿನಗಾ.. " ದ್ಯಾಮಪ್ಪನಿಗೆ ಮೈಮೆಲೆ ಅರಿವೆ ಇರಲಿಲ್ಲಾ, ಕಣ್ಣು ತಗೆಯಲು ಆಗ್ತಾ ಇರಲಿಲ್ಲಾ, ಆವಾಗ ಅವಳಿಗೆ ಅರಿವಾಯಿತು ಇದು ಮಗನಾ ಕನಸೆಂದು, ಮಗನಿಗೆ ಅರಿವಿಲ್ಲಾ ಅಂತಾ ಮೈ ಮುಟ್ಟಿ ನೋಡಿದಳು, ಮೈ ಬೆಂಕಿಯಾ ಕೆಂಡವಾಗಿತ್ತು, ಹುಲಿಯ ಮುಂದೆ ತಡವರಿಸುತಾ ಓಡುವಾ ಜಿಂಕೆ ಹಾಗೆ ಪಕ್ಕದ ಮನೆ ಕಲ್ಲವ್ವನಾ ಹತ್ತಿರಾ ಹೋಗಿ, ವಿಷಯ ತಿಳಿಸಿ ಕರೆದುಕೊಂಡು ಬಂದಳು, ರಾತ್ರೀ ಮುಗಿಯುವವರೆಗು ತಣ್ಣಿರಿನಾ ಬಟ್ಟೆ ಇಟ್ಟು, ಬೆಳಿಗ್ಗೆ ಆದ ತಕ್ಷಣ ಸರ್ಕಾರಿ ದವಾಖಾನೆಗೆ ಬೆಟ್ಟಿ ನೀಡುವ ನಿರ್ಧಾರವಾಯಿತು.
"ಜ್ವರಾ ಸ್ವಲ್ಪರಾ ಇಳಿದಾವ ಇಲ್ಲೋ" ರಂಗವ್ವನಾ ಮೌನದಾ ಕಣ್ಣೀರು ಕಲ್ಲವ್ವನಿಗೆ ಉತ್ತರ ಹೇಳಿತು.
"ಜಲ್ದಿ, ಹೋಗಿ ಹೊಲದಾನ್ನ ಕರೆಮ್ಮಗ ಪೂಜಾ ಮಾಡಿ, ದೀಪಾ ಹಚ್ಚಿ ಬಾ, ಆಕಿ ಸಿಟ್ಟ ಮಾಡಕೊಂಡಾಳ ನಿನ್ನ ಮಗನಾ ಮ್ಯಾಲ ಅನಸತೆತಿ, ಎನ್ ಮಾಡುದ ಯವ್ವಾ, ಎಲ್ಲಾ ಅಕಿ ಕೈಯ್ಯಾಗ ಐತಿ ನೋಡ್, ಜಲ್ದೀ ಹೊಗಿ ಬಾ, ನಿನ್ನ ಮಗನ್ನ ದವಾಖಾನಿಗಿ ಕರಕೊಂಡ ಹೋಗು" ಎಂದು ಕಲ್ಲವ್ವಾ ಮಾರನೆ ದಿನಾ ಬೆಳಿಗ್ಗೆ ರಂಗವ್ವನ ಮನೆಗೆ ಬಂದು ಹೇಳಿದಳು, ಚಾಟಿಗೆಯವನು ಹೇಳಿದಾ ಹಾಗೆ ಆಡುವಾ ಕೊಲೆಬಸವನ ತರಾ ರಂಗವ್ವ ಕಾರ್ಯ ನಿರ್ವಹಿಸಿದಳು.
"ಯವ್ವಾ, ಡಾಕಟರು 2 ಸಲೈನ್ ಹಚ್ಚಿ, 2 ಇಂಜೆಕ್ಷನ್ ಮಾಡಿ, 10 ದಿನದಾ ಗುಳಗಿ ಬರದಾ ಕೊಟ್ಟಾರು, ಈಗ ಮಾದಪ್ಪನ ಸೈಕಲ್ ತಗೊಂಡ ಕರಕೊಂಡು ಬನ್ನಿ, ಇನ್ನು ಆದರು ಕಣ್ಣ ತಗಿವಲ್ಲ, ದೇವರ ಕೈಯ್ಯಾಗ ಇರೋದು ಇ ಡಾಕಟರ ಕೈಯಾಗ ಎನ್ ಆಕ್ಕೆತಿ ಹೇಳು, ನನಗ ಯಾಕೋ ಮನಸ್ಸಿಗೆ ಸಮಾದಾನ ಆಗವಾಲ್ತು, ಗುಡಿ ಸ್ವಾಮಿಗೋಳ್ ಕಡೆ ಹೋಗುನು ಬಾ, ಏನರಾ ಪೂಜೆ ಗಿಜೆ ಇದ್ರ ಮಾಡಿಸಾಕ ಬರತೇತಿ"
"ಯಾವಾಗ ಹಾವ ಹೊಡದ್ ಅವಾ, ಅದು ಕರೆಮ್ಮನ ಹಾವ ಅನ್ನುದು ಖರೇ ಅನಾ, ಅರ್ದಾ ಮರ್ದಾ ಹೊಡ್ಯುದು ಇನ್ನು ದೊಡ್ಡ ಪಾಪ ಅದಾ" ಊರಲ್ಲಿರೋ ದ್ಯಾಮವ್ವನಾ(ದೆವತೆ)  ಗುಡಿ ಸ್ವಾಮಿಗಳಾದ ನಾಗಪ್ಪ ಸ್ವಾಮಿಗಳು ಕೇಳಿದರು.
"ನಿನ್ನೆ ಶನಿವಾರ ಸಂಜಿಮಾಡಿ ನೊಡ್ರೀ, ಹಾ ಅದಾ ಕರೆಮ್ಮನ ಹಾವ ಇರೋದು ಖರೇ ಅಂದಾನರಿ, ಕರೆಮ್ಮಾ ನನ್ನ ಮಗನಿಗೆ, ಹಿಂತಾ ಕೆಟ್ಟ ಬುದ್ದಿ ಯಾಕ ಕೊಟ್ಟಳೊ ಗೊತ್ತ ಇಲ್ರೀ, ನನ್ನ ಮಗನ ಗತಿ ಎನ್ ಆಕ್ಕೆತೋ ಅಂತಾ ಚಿಂತಿ ಹತ್ತೇತ್ರೀ", ನಾಗಪ್ಪಾ ಸ್ವಾಮಿಗಳು ಸ್ವಲ್ಪಾ ವಿಚಾರ ಮಾಡಿದರು.
"ನಾಳಿ ಮಂಗಳವಾರ ಮಡಿ ಇಟಗೊಂಡ ದ್ಯಾಮವ್ವನ ಗುಡಿಗ ಬಾ, ನಾ ತಾಯಿ ದ್ಯಾಮವ್ವನಾ ಕೇಳಿ, ಏನ ಮಾಡಬೆಕಂತಾ ಹೇಳ್ತೆನಿ, ಕುಲಾನ(ವಂಶ) ನಾಶ ಮಾಡುವಂತಾ ಕೆಲಸಾ ಮಾಡ್ಯಾನು ನಿನ್ನ ಮಗಾ, ನಾಗದೆವರಾ ನರಳಿ ನರಳಿ ಸತ್ತ ಅಂದ್ರ್, ಅವನ ಮಕ್ಕಳು ಹೆಂತಾವ ಹುಟ್ಟತಾವೋ ಎನೋ, ಮಕ್ಕಳ ಆಕ್ಕಾವೋ ಇಲ್ಲೋ, ಛೆ.. ಛೇ.. ಇಂತಾ ಕೆಲಸಾ ಮಾಡಬಾರದಿತ್ತ ನಿನ್ನ ಮಗಾ" ಅಂತಾ ಅಜ್ಞಾನವೊ, ತನಗೆ ತಿಳಿದಾ ಜ್ಞಾನವೊ ಎಂಬ ತಿರುಳಲ್ಲಿ ಮಾತುಗಳನ್ನಾಡಿ ಅರೆಕೋಪದಿಂದಾ ಸುಮ್ಮನಾದ.
"ಯಪ್ಪಾ ನಿಮ್ಮನಾ ನಂಬಿಕೊಂಡ ಬಂದೇನ ನಾ, ಕಣ್ಣ ಕಾಣಲಾರದಂತಾ ಹೆಣ್ಣಮಗಳ ನಾ, ಎತ್ತೀ ನೀವ್ ನಡೆಸಬೆಕು, ದ್ಯಾಮವ್ವಗ ನನ್ನ ಮಗನ್ ತಪ್ಪ ಹೊಟ್ಯಾಗ್ ಹಾಕೊಂಡ, ಏನರಾ ಉತ್ತರಾ ಕೊಟ್ಟ ನನ್ನ ಮಗನ್ನ್ ಕಾಪಾಡ ಅಂತ ಹೇಳ್ರೀ, ಎಪ್ಪಾ ನಿಮ್ಮ ಕಾಲ ಮುಗಿತೇನ್",
"ಇದೇನ್, ನನ್ನ ಕೈಯಾಗ ಐತಿ ಎನ್ ವಾ, ನಾ ಹೇಳಿದಾಂಗ್ ಮಾಡು, ಮಂಗಳವಾರ್ ಬಾ, ಮುಂದಿಂದ ಎಲ್ಲಾ ದ್ಯಾಮವ್ವಗ ಬಿಟ್ಟಿದ್ದಾ" ಎಂದು ತನ್ನ ಕಾರ್ಯಕ್ಷಮತೆಯನ್ನು ನಿರೂಪಿಸಿದಾ, ಹಕ್ಕಿ ಗೂಡಿಗೆ ಮರಳುವಾ ಚಿಂತೆಗಿಂತಾ, ಅಹಾರದಾ ಚಿಂತೆಯೆ ಮೇಲು ಅನ್ನುವಾ ಹಾಗೆ ರಂಗವ್ವನಾ ಒಡಲ ನೋವು ನರಳಿತ್ತು.

................................................................................

ಕಬ್ಬಿಣ ಕಾದಾಗ ಕೆಂಪು ಬಣ್ಣಾ, ಬಡಿದು ನೀರು ಊಣಿಸಿದಾಗ ಮತ್ತೇ ಅದೆ ಅನ್ನಾ, ದ್ಯಾಮಪ್ಪನಾ ಮಾಡುವ ಕೆಲಸಾ ನೋಡುವಕ್ಕಿಂತಾ ಅವನು ಮಾತುಗಳೆ ಕೇಳುಗರಿಗೇ ಕಿಕ್ಕ್ ಕೊಡ್ತಾ ಇತ್ತು, ಅಜ್ಞಾನದಾ ಪರಿದಿಯಾ ತೊರೆದು, ವಿಜ್ಞಾನದಾ ಬಳ್ಳಿಯಾ ಚಿತ್ತಾರ ಎಲ್ಲರಾ ಹಣೆಯಲ್ಲಿ ಮೂಡುತ್ತಾ ಹೋಗುತಿತ್ತು, ಹಡಗು ನಿರ್ಮಾಣವಾಗುವುದು ಬಂದರಿನಲ್ಲಿ ನಿಲ್ಲಲು ಅಲ್ಲಾ, ಅದರಂತೆ ದ್ಯಾಮಪ್ಪಾ ಮಲ್ಲಪ್ಪನನ್ನಾ ಕರೆದುಕೊಂಡು, ಹಾವಿರುವಾ ಮನೆಗೆ ಹೋದಾ, ಬಾಗಿಲು ತಗೇದಾ, ಮತ್ತೆ ಮಲ್ಲಪ್ಪಾ ಹಳೇ ಕಬ್ಬಿಣದಾ ತರಾ ಆದಾ, ಹೊರಗಿನಾ ಖೊಲೆ(ರೂಮ್)ಯನ್ನು ಮೊದಲು ನೋಡಿದರು, ಹೆಂಡತಿಯೊಬ್ಬಳು ಮನೆಯೊಳಗಿದ್ದರೇ ನನಗದು ಕೋಟಿ ರೂಪಾಯಿ ಜೊತೆಗೆ ಮನೆಯಾ ಕಸವೆಲ್ಲಾ ಸಫಾಯಿ, ಅನ್ನೋ ಹಾಗೆ ಸ್ವಚ್ಚವಾದ ಮನೆ, ಹೊರಗಿನಾ ಕೊಣೇಯನ್ನು ಜಾಲಾಡಿ ನೋಡಿದರು, ಏನು ಸುಳಿವು ಸಿಗಲಿಲ್ಲಾ.
ಮಲ್ಲಪ್ಪಾ ದ್ಯಾಮಪ್ಪನಾ ಹಿಂದೆ ಇದ್ದಾ, ದ್ಯಾಮಪ್ಪಾ ಎಲ್ಲಾ ಸಾಮಾನು, ಮೂಲೆ ಮೂಲೆಗಳನ್ನಾ ಜಾಲಾಡುತ್ತಿದ್ದಾ, ಮಲ್ಲಪ್ಪಾ ಅವನಾ ಹಿಂದೆ ಬಾಲಂಗೋಸಿಯಾ ತರಾ ವಿಕ್ಷಿಸುತ್ತಿದ್ದಾ, ಕಾಲುಗಳಾ ನಡುಕಾ, ಹೃದಯದಾ ಭಡಿತಾ, ಕ್ಷಣದಿಂದಾ ಕ್ಷಣಕ್ಕೆ ಹಾವು-ಏಣಿ ಆಟ ಆಡುತ್ತಿತ್ತು, ಎರಡನೇಯ ರೂಮು ವಿಶಾಲವಾಗಿತ್ತು, ಅದನ್ನು ದ್ಯಾಮಪ್ಪ ಜಾಲಾಡಿದನು, ಏನು ಸುಳಿವು ಸಿಗಲಿಲ್ಲಾ, ಹಾಗೆ ಅಡುಗೆ ಮನೆ, ಸ್ನಾನದಾ ಮನೆ, ದೇವರ ಮನೆ, ಒಂದೋಂದಾಗಿ ಕೆಂಪು ನಿಶಾನೇ ತೋರಿಸಿದವು, ಇನ್ನು ಉಳಿದೊಂದು ಹಿತ್ತಲ ಮನೆ ಅಂದರೆ ಮನೆ ಹಿಂಬಾಗ, ಹಿಂಬಾಗದಲ್ಲಿ ಕೆಲವು ಹೂವಿನಾ ಗಿಡಗಳು, ತೆಂಗಿನಾ ಮರಗಳು ಇದ್ದವು, ಲೈಟ್ ಆನ್ ಮಾಡಿ ಅಲ್ಲಿಯು ಜಾಲಾಡಿದರು, ಸಪ್ಪಳ ಮಾಡಿನೋಡಿದರು, ಒಮ್ಮೆಲೆ ಸರ್ ಸರ್ ಅಂತಾ ಶಬ್ದವಾಯಿತು, ಮಲ್ಲಪ್ಪಾ ದ್ಯಾಮಪ್ಪಾನಿಗೆ ಶಬ್ದ ಬರುವ ದಿಕ್ಕು ತೋರಿಸಿದಾ, ದ್ಯಾಮಪ್ಪಾ ತನ್ನ ಉದ್ದಾದ ಕಟ್ಟಿಗೆಯಾ ಸಹಾಯದಿಂದಾ, ಕಸ ಮತ್ತು ಸಣ್ಣ ಗಿಡಗಳನ್ನು ಸರಿಸಿ ನೋಡಿದರೆ ಸಣ್ಣ ಹಂದಿ ಮರಿ ಇತ್ತು, ಊಷ್ ಅಂತಾ ಅದನ್ನು ಒಡಿಸಿದರು.
"ಅವಾರಗ್ವಾಡಿ(ಕಾಂಪೌಂಡ) ಕಟ್ಟಲ್ಲರೀ ಹಿತ್ತಲಕಾ, ಅವಾಗ ಅವಾಗ ಹಂದಿ ಗೊಳ್ ಬರತಿರತಾವು" ಅಂತಾ ಮಲ್ಲಪ್ಪಾ ನಿರಾಶಾ ಭಾವದಿಂದ ಹೇಳಿದಾ.
"ಎಲ್ಲಿಯು ಸಿಗಲಿಲ್ಲರೀ, ಹೆಂಗ್ ಇನ್ನ, ಅದು ಕಂಡಿದ್ದು ಮದ್ಹ್ಯಾನ್, ಅಂದರ ಇಲ್ಲೆ ಇರತೆತೋ ಇಲ್ಲೋ, ಅದೇನ್ ಬಂದ ಹೋಗ್ ಅಂದ್ರು ಇರೋ ಪೌನ್ಯಾರಾ?(ನೆಂಟರು), ನನಗ ಬಾಳ ಹೆದರ್ಕೀ ಆಗಾಕತೆತೀ, ರಾತ್ರೀ ಅದು ಮಕ್ಕೋಂಡಾಗ ಹಿಂಗ ಬಂದಾಗ ಬಂದ್ರ್ ಹೆಂಗ್? ಇರಾವ್ ಒಬ್ಬ ಗಂಡ ಮಗಾ, ಎನರಾ ಆದ್ರ ನಮ್ಮ ವಂಶಕ್ ದಿಕ್ಕ ಇಲ್ಲದಾಂಗ ಆಕ್ಕೇತೀ" ಹಿಗೇ ಮಲ್ಲಪ್ಪನಾ ಅಂತರಾಳದಾ ಮುಳ್ಳೋಂದು ಜಾರಿ ಬಿತ್ತು, ಅದಕ್ಕಣುಗುಣವಾಗಿ ಕೈಯಲ್ಲಿರೋ ಕೋಲು ಬಿತ್ತು, 
"ಅದು ನಮ್ಮಾಂಗ್, ನಾವು ಕಾಡಿನಾಗ ಹಸದ ಹುಲಿಗೊಳ ಜೊತೆ ಜೀವನಾ ಮಾಡ ಅಂದ್ರ್ ಮಾಡಾಕ್ ಆಗತೇತಾ, ಹಂಗ ಅದಕು ಮಂದ್ಯಾಗ ಬಂದ ಇರ ಅಂದ್ರ ಆಗುಲ್ಲಾ, ನಾವ ಹೆಂಗ ಅದಕ ಹೆದರ್ತೆವೋ ಅದು ಹಂಗ ನಮಗ ಹೆದರೀ ಹೋಗಿದ್ರು ಹೋಗಿರತೇತಿ, ನನಗ ಅನಿಸಿದ ಮಟ್ಟಿಗಿ, ಅದು ಇಲ್ಲೆ ಏಲ್ಲೋ ಬ್ಯಾಟಿ ಅಡಿ, ಅರಗಾಸಾಕ ಗಿಡಕ್ಕರ, ಮನಿ ತೊಲಿಗರಾ ಸುತಗೊಂಡಿರಬೆಕು, ಮನ್ಯಾಗ ತೊಲಿ ಅಷ್ಟ ಚೆಕ್ ಮಾಡುದ ಐತಿ, ಸಿಕ್ತಿ ಅಂದ್ರ್ ಹಂಗ, ಇಲ್ಲಾ ಅಂದ್ರ ನಿವೆನು ಚಿಂತಿ ಮಾಡಾಕ ಹೋಗಬ್ಯಾಡ್ರೀ, ಮತ್ತ್ ಅದೇನು ಇಲ್ಲಿ ಹೊಳ್ಳಿ ಬರಾಂಗಿಲ್ಲಾ, ಅಕಸ್ಮಾತಾಗಿ ಬಂದ್ರು, ನಮ್ಮಿಂದಾ ಅದಕ ತೊಂದರಿ ಆಕ್ಕೆತಂದ್ರ ಅಷ್ಟ ಕಡಿತೆತಿ, ಸುಮ್ ಸುಮ್ನಾ ಮಕ್ಕೊಂಡಾರನಾ ಹೊಗಿ ಕಡಿದುಲ್ಲಾ, ನಿವೇನ್ ಹೆದರಾಕ ಹೊಗಬ್ಯಾಡ್ರೀ" ಮಲ್ಲಪ್ಪನಿಗೆ ದ್ಯಾಮಪ್ಪನಾ ಮಾತು ಗ್ರೀನ್ ಸಿಗ್ನಲ್ ತೋರದಿದ್ರು ಯೆಲ್ಲೊ ಸಿಗ್ನಲ್ ಸಿಕ್ಕಾಂಗ ಆತಿ, ಮಲ್ಲಪ್ಪಾ ಹಿತ್ತಲು ಬಾಗಿಲು ತಗೆದು ಮನೆ ಒಳಗೆ ಬಂದಾ, ದ್ಯಾಮಪ್ಪನು ಅವನಾ ಹಿಂದೆನೆ ಬಂದಾ, ಮಲ್ಲಪ್ಪನಿಗೆ ಎಲ್ಲೋ ಬುಸ್ ಅನ್ನೋ ಶಬ್ದ ಕೆಳಿದ ಹಾಗಾಯಿತು, ತಲೆ ಎತ್ತಿ ಮೆಲೆ ನೋಡಿದಾ, ಹಾವು.. ನಾಗರ ಹಾವು.., ತಾಟಿನಲ್ಲಿ ಇದೆ, ಇದನ್ನಾ ನೋಡಿ ಬಾಯಿಯೇ ಬರ್ತಿಲ್ಲಾ, ದ್ಯಾಮಪ್ಪಾ ಅಂತಾ ಕೂಗಲು ಆಗ್ತಿಲ್ಲಾ, ಹಾಗೆ ಅದನ್ನೆ ನೋಡುತಾ ಕೈ ಸನ್ನೆ ಮಾಡ್ತಾ ಇದ್ದಾ.

........................................................................

ಸಾಗರದಾ ಅಪ್ಪಿಗೆಗೆ ಬಂಡೆಗಳು ಕಾದು ನಿಂತು ವರುಷಗಳಾಗಿವೆ, ಬಂಡೆಗಳಾ ಪ್ರೇಮಕೆ ಕರಗಿ ಕರಗಿ ಮರಳಾಗಿ, ಸ್ಥಬ್ದತೆಗೆ ನಾಂದಿ ಹಾಡಿವೆ, ಇ ಪ್ರೇಮ ಅಮರಾ, ಮೌನಾ ಸುಮಧುರಾ, ಅಮ್ಮಾ ನಿನ್ನ ಪ್ರೀತಿಯೆದುರು ಎಲ್ಲಾ ಬಂಡೆಗಳಾ ಪ್ರೇಮ ದೂರ ದೂರಾ, ನಿನ್ನ ಪ್ರೀತಿ ಸಿಗದೆ ಕಲ್ಲು ಬಂಡೆಗಳಾಗಿವೆ ಎನ್ನುವದು ನನ್ನ ಸಾರ.
"ಕರೆಮ್ಮಾ, ಬೇಕಾದ್ರ್ ನಿ ನನ್ನ ಕರಕೋ, ನಮ್ಮ ಅವ್ವಗ್ ಏನ್ ಮಾಡಾಕ ಹೋಗಬ್ಯಾಡಾ, ಯವ್ವಾ... ಯವ್ವಾ... ನೀ ಹೊಲಕ್ಕ ಹೋಗಬ್ಯಾಡಾ" ಎಂದು ದ್ಯಾಮಪ್ಪಾ ಅರೆರಾತ್ರಿಯಲಿ ಅರಚುತ್ತಾ ಮತ್ತೆ ಅರೆಪ್ರಜ್ಞಾವಸ್ಥೆಯಲ್ಲಿ ಬಂದಾ, ರಂಗವ್ವ ಎದ್ದು ಅವನ ಪಕ್ಕದಲ್ಲೇ ಕೂತು.
"ನೋಡ ನನ್ನ ಮಗನಾ, ನಾ ಇಲ್ಲೆ ಅದೇನೀ, ನನಗ ಏನು ಆಗಿಲ್ಲಾ, ನಿನಗು ಏನು ಆಗುಲ್ಲಾ, ನಾಳೆ ದ್ಯಾಮವ್ವನ ಹಂತೇಕ ಹೋಗಿ ಬರ್ತೇನಿ" ರಂಗವ್ವನಾ ಕಣ್ಣೀರಿನಾ ಹನಿ ಹನಿಯು ತಾಯಿ-ಮಗನ ಪ್ರೀತಿಯ ಕಹಾನಿ ಹೇಳ್ತಾ ಇತ್ತು. ತಾಯಿಯ ಸ್ಪರ್ಷದಿಂದಾ ಅವನಿಗೆ ಪ್ರಜ್ಞೆ ಬಂದ ಹಾಗಾಯಿತು, ಮುಖದಲ್ಲಿ ಏನೋ ಒಂದು ಶಾಂತಿಯ ಭಾವ, ಆದರೆ ಅದು ಬಹಳ ಹೊತ್ತು ನಿಲ್ಲಲಿಲ್ಲಾ, ಮೈ ಹಾಗೆ ಸುಡುತ್ತಾ ಇತ್ತು, ಗುಳಿಗೆ ಔಷದಕೆ ಸ್ವಲ್ಪವೂ ತಲೆ ಬಾಗದ ಇದು ಎಂತಹಾ ಜ್ವರಾ, ಮನಸ್ಸಿನಿಂದಲೇ ಮನ:ಶ್ಯಾಸ್ತ್ರ, ಇದು ಮನಸಿನಾ ಕಾಯಿಲೆಯೋ, ದೆವರಾ ಶಾಪದಾ ತೂಕವೋ, ಯಾವುದನ್ನು ಅಳೆಯಲು ರಂಗವ್ವನಿಗೆ ತಿಳಿಯಲಿಲ್ಲಾ, ಆಕೆಯಾ ಆಲೋಚನೆಯಾ ಎಲ್ಲ ದಿಕ್ಕುಗಳಲ್ಲಿಯೂ ಒಂದೊಂದು ಅಡ್ಡಗೋಡೆ ನಿಂತು ಅಣಿಗಿಸುತಿದ್ದವು(ಅಪಹಾಸ್ಯ), ಅವಳು ಉಟ ಮಾಡದೆ ಮೂರು ದಿನವಾಗಿತ್ತು, ಮಂಗಳವಾರದಾ ಬೆಳಗಿನಾ ಸೂರ್ಯನಿಗಾಗಿ ಕಾಯುತಿದ್ದಳು.
"ರಂಗವ್ವಾ, ಬಾಜು ಊರ ಮರಕುಂಬ್ಯಾಗಾ, ಬಸನಗೌಡಾ ಅನ್ನಾವ ಇದ್ದ ಅಂತಾ, ಎಂಟ ಎದಿ ಬಂಟ ಅಂತ ಅವ್, ಹಿಂಗ ದೇವ್ರ್ ಹಾವಾ ಹೊಡದ್, ಯಾವ ದೇವ್ರು ಎಂತಾ ದೇವ್ರು ಅಂತ ಅಂದಿದ್ದ ಅಂತಾ, ಕೊನೆಗೆ ಅವಂಗ ದೇವ್ರ ಶಾಪ ಹತ್ತೀ, ಹುಟ್ಟಿದ ಮಕ್ಕಳೆಲ್ಲಾ ಸಾಯಾಕ ಹತ್ತಿದು ಅಂತ, ಎಲ್ಲಾ ಡಾಕಟರ್ ಕಡೆ ಹೊಗಿ ಬಂದ ಅಂತ್, ಏನು ಉಪಯೋಗ ಆಗಲಿಲ್ಲಾ ಅಂತ, ಇದನ್ನೆಲ್ಲಾ ಜಳಿ(ಚಿಂತಿ) ಹಚಗೊಂಡ ಜ್ವರಾ ಬಂದ ಸತ್ತ ಹೋದ್ ಅಂತ್, ಅವಾ ಸತ್ತ ನಾಲ್ಕ ದಿನಕ್ಕ ಅವನ ಹೆಂಡತಿನೂ ಜಳಾ ಹಚ್ಚಗೊಂಡ ಸತ್ತಳಂತ, ಏನ್ ಕರ್ಮವಾ ನಿಂದು, ಹೆಂಗ್ ಆತಿ ನಿನ್ನ ಬಾಳೆ",
"ಇವತ್ತ ಮಂಗಳವಾರ ಬಾ, ಗುಡ್ಯಾನ ಸ್ವಾಮಿಗೊಳ್ ಕಡೆ ಹೋಗುನು, ಏನರ ಒಂದ ಉತ್ತರಾ ಹೇಳ್ತಾರ್, ಕರೆಮ್ಮಾ ಕೈ ಬಿಟ್ಟರು, ದ್ಯಾಮವ್ವಾ ಕೈ ಬಿಡಾಂಗಿಲ್ಲಾ" ಅಂತಾ ಪಕ್ಕದ ಮನೆ ಕಲ್ಲವ್ವಾ ತಾನು ಮಾಡಿದಾ ರಿಸರ್ಚ ಪೆಪರ್ ನಾ ಪಬ್ಲಿಶ್ ಮಾಡಿದಳು, ರಂಗವ್ವಾ ಮಾತು ಬಾರದಾ ಮೂಗಿಯಾಗಿದ್ದಳು, ಕಲ್ಲವ್ವನಾ ಮಾತಿಗೆ ಸಮ್ಮತಿಸಿ, ಇಬ್ಬರು ಜೊತೆಗೆ ಹೊರಟರು.
ದೇವರು ದೈವತ್ವದಾ ಮಾತುಗಳು, ವಾದಗಳು ನೂರಾರು, ಎಲ್ಲವು ಅವರವರಾ ನಂಬಿಕೆಗೆ ಬಿಟ್ಟಿದ್ದು, ರಂಗವ್ವ ಕಲ್ಲವ್ವಾ ಗುಡಿಯ ಜಗಲಿಯೆ ಮೆಲೆ ಹೋಗಿ ಕುಳಿತರು, ಇವರಂತೆ ಉಳಿದ ಜನತೆ, ತಮ್ಮ ಕಷ್ಟಗಳಾ ಪ್ರಶ್ನೆಯನ್ನಿತ್ತು, ಪರಿಹಾರ ತಗೆದುಕೊಂಡು ಹೊಗುತ್ತಿದ್ದರು, ನಾಗಪ್ಪಾ ಸ್ವಾಮಿ ಕಣ್ಣುಮುಚ್ಚಿ ದೇವಿಯಲ್ಲಿ ಪ್ರಶ್ನೆಯನ್ನಿತ್ತು, ಕವಡೆಗಳಾ ಮೂಲಕ ಪರಿಹಾರ ಹೇಳುತ್ತಿದ್ದನು, ರಂಗವ್ವನ ಪ್ರಶ್ನೆಗೆ ಕವಡೆಯನ್ನು ಹಾಕಿದನು, ಸ್ವಲ್ಪ ಹೊತ್ತು ಯೋಚಿಸಿ.
"ನಿನ್ನ ಮಗಾ ಮಹಾ ಪಾಪಾ ಮಾಡ್ಯಾನ ಬೇ, ಇದಕ್ ಉತ್ತರಾ ದ್ಯಾಮವ್ವ ಎನ್ ಹೆಳ್ಯಾಳ ಅಂದ್ರ್, 15 ದಿನಾ ಸೂರ್ಯಾ ಹುಟ್ಟಿದಾಗಿಂದಾ ಮೂಳಗುಮಟಾ ಒಂದ ಹನಿ ನೀರ ಕುಡಿಲಾರದಾ ಉಪವಾಸ ಇರಬೇಕು ಮತ್ತ ಇ 15 ದಿನಾ ಮಡಿ ಉಟ್ಟ ಬರಗಾಲಿಲೇ ಗುಡಿಗ್ ಬಂದ ದೀಪಾ ಹಚ್ಚಿ ಹೊಗಬೆಕಂತಾ, ಹಂಗ ನಾಗದೋಷ ಪರಿಹಾರ ಪೂಜೆನು ಮಾಡಸ್, ನೋಡುನು ಮುಂದಿಂದಾ ದ್ಯಾಮವ್ವ ತಾಯಿಗೇ ಬಿಡುನು" ,
"ಆತರೀ, ಆ ದ್ಯಾಮವ್ವ ನಂಬಿದಾರ್ ಕೈ ಬಿಡಾಂಗಿಲ್ಲಾ, ನನ್ನ ಮಗನ್ನ ಆಕಿ ತೊಡಿಮ್ಯಾಲ್ ಹಾಕ್ಕೆನ್ನಿ, ಆಕಿಗಿ ಹೆಂಗ ಅನಸತೆತೊ ಹಂಗ ಮಾಡಲ್ರಿ" ಎಂದು ದ್ಯಾಮವ್ವ ತಾಯಿಯಾ ಕಾಲಿಗೆ ನಮಸ್ಕಾರ ಮಾಡಿ ದೈನ್ಯತೆಯಾ ಹೆಜ್ಜೆ ಹಾಕುತ್ತಾ ರಂಗವ್ವ ಮತ್ತು ಕಲ್ಲವ್ವಾ ಮನೆ ದಾರಿಗೆ ಹೆಸರು ಇಟ್ಟರು.
ಕಾಲಜ್ಞಾನ, ವಿಜ್ಞಾನವನ್ನು ತಡೆಯುವರಿಲ್ಲಾ, ಆರಂಭದ ಅಂಕಿ ಅಂಶ ಇಲ್ಲದಿದ್ದರು, ಬೆಳೆಯುವಾ ಹಂತಾ ಅರ್ಥವಾಗುತ್ತೆ, ನಂಬಿಕೆಯಾ ಆವರಣದಲ್ಲಿ ನೋವಿನಾ ಹಂದರ  ಕಾಣುವದಿಲ್ಲಾ, ಪ್ರಿತಿಯಾ ಆರೈಕೆಯಲ್ಲಿ ಪುಟ್ಟ ಮಂದಿರಾ ಅನಾವರಣಗೊಂಡಿದೆ, ಅದನ್ನು ಕಟ್ಟಿ ಬೆಳೆಸಿದಾ ಸ್ಪರ್ಷವಿಲ್ಲಾ ಆದರೆ ಹ್ರುದಯದಾ ಅನುಭವ ಮಾತ್ರ ಭೂತ, ಭವಿಷ್ಯ, ವರ್ತಮಾನಗಳನ್ನು ಮೀರಿ ಬೆಳೆಯುತ್ತೆ, ಮಗನಾ ಪ್ರಿತಿಯ ಚಿತೆಯಲ್ಲಿ ಹರಕೆಯಾ ಮಾತಿನಂತೆ 8 ದಿನಗಳು ಕಳೆದಿದ್ದವು, ರಾತ್ರಿ ಹಗಲು ನಿದ್ದೆ ಬಾರದೆ ಮಗನಾ ಆರೈಕೆಯಲ್ಲಿಯೆ ಇರುತ್ತಿದ್ದಳು, ಮಗನಾ ಸ್ಥಿತಿ ನೋಡಿ ಅವಳಿಗೆ ಊಟವು ಸೆರದು, ದಿನದಿಂದಾ ದಿನಕ್ಕೆ ಕ್ಷಿಣಿಸುತ್ತಿದ್ದಳು, ಬಡಕಲು ಕಡ್ಡಿಯಾಗಿದ್ದಳು, ಹಸುವಿನತರಾ ತನ್ನ ಸೇವೆಯಲ್ಲಿ ಮೂಕಿಯಾಗಿ ಕರುವಿನಾ ಅಂಬಾ ಎನ್ನುವಾ ಮಾತು ಕೇಳಲು ಕಾತುರಳಾಗಿದ್ದಳು, ಅದರಾ ಕೂಗಿಗಾಗಿ ಬದುಕಿದ್ದೇನೆ ಎನ್ನುವಾ ಪರಿಯಾಯಿತು, ಅಂದು ದ್ಯಾಮಪ್ಪನಾ ದೆಹಸ್ಥಿರತೆಯಲ್ಲಿ ಸ್ವಲ್ಪಾ ಚೇತರಿಕೆ ಕಂಡು ಬಂದಿತು, ಕಣ್ಣು ತಗೆದು ಸುತ್ತಲು ನೊಡಿದಾ, ಮಾತಾಡಲಾಗಲಿಲ್ಲಾ ಮತ್ತೆ ಮಲಗಿದಾ,  ಅದನ್ನು ಕಂಡು ರಂಗವ್ವನಿಗೆ ಪರಸಿವನಾ ಕಂಡು ಪಾವನೆಯಾದ ಪಾರ್ವತಿಯ ತರಾ ಆಯಿತು, ಆದರು ಮಗನು ಇನ್ನು ಮಾತನಾಡುತ್ತಿಲ್ಲಾ ಅಂತಾ ಒಂದು ಕೊರಗು ಮನದಲ್ಲಿ, ಅವಳಿಗೆ ತನ್ನ ದೇಹ ಸ್ಥಿತೆಯ ಬಗ್ಗೆ ಅರಿವೆ ಇರಲಿಲ್ಲಾ. 
ಮಳೆ, ಬಿಸಲು, ಚಳಿ, ಕತ್ತಲು, ಹಿಗೆ ಪ್ರಕೃತಿಯ ಅವತಾರಗಳು ದಿನ ದಿನ ತಮ್ಮ ಸಾಮಥ್ರ್ಯವನ್ನು ತೋರಿಸುತ್ತಿದ್ದವು, ಹಾಗೂ ಹೀಗೂ 15 ದಿನಗಳಾ ಹರಕೆ ಮುಗಿಯಿತು.
"ಯವ್ವಾ..., ಯವ್ವಾ..., ಎಲ್ಲಿ ಅದಿ, ನನಗಾ ಗಂಜಿ ಕುಡದ ಸಾಕಾಗೇತಿ, ಬೇರೇ ಏನರಾ ಕೊಡ" ಅಂತಾ 15 ದಿನಗಳಾ ನಂತರಾ ಅರಿವು ಬಂದಿರುವ ಮೊದಲ ಮಾತು, ಅಂಬಾ ಅನ್ನುವಾ ಕರುವಿನಾ ಸದ್ದು ಮೂಡಿತು, ಆ ಕಡೆಯಿಂದಾ ಏನು ಉತ್ತರಾನೇ ಬರಲಿಲ್ಲಾ, ಹಾಗೆ ಹಾಸಿಗೆಯಾ ಮೇಲಿಂದಾ ಎದ್ದಾ, "ಯವ್ವಾ... ಎಲ್ಲಿ ಹಾಳಾಗಿ ಹೋಗಿ, ಜಲ್ದಿ ಬಾ" ಅಂತಾ ಮತ್ತೆ ಕೂಗಿದಾ.

..........................................................................

ಹೂವು ಅರಳುವಾಗ ಅದಕ್ಕೆ ಗೊತ್ತಿರುಲ್ಲಾ ಯಾಕೆ ಅರಳುತ್ತೆ ಅಂತಾ, ಯೋಗಿಗಳು ಹೇಳ್ತಾರೆ ಅದು ದೇವರಾ ಪಾದ ಸೇರೊಕೇ ಅಂತಾ, ಭೊಗಿಗಳು ಹೆಳ್ತಾರೆ ಸುವಾಸನೆ ಹಿರಿ ಸುಖಾನಂದಾ ಪಡೆಯೊಕೆ ಅಂತಾ, ಹಾಗೆ ಕೆಲವೊಮೆ ನಮಗೂ ಗೊತ್ತಿರೊಲ್ಲಾ ನಾವು ಹುಟ್ಟಿರೊದು ಯಾಕೆ ಅಂತಾ, ತಿಳಿದವರು ತಿಳಿ ತಿಳಿಯಾಗಿ ಹೆಳಿದರು ಕೆಲವೊಮ್ಮೆ ಅರ್ಥಾ ಆಗೊಲ್ಲಾ, ಅದಕೆ ಸಿಂಪಲ್ಲಾಗಿ ಬಸವಣ್ಣನವರು ಹೆಳ್ತಾರೆ ಕಾಯಕವೆ ಕೈಲಾಸ ಅಂತಾ, ದ್ಯಾಮಪ್ಪನ ಇಲ್ಲಿಯಾ ಕೆಲಸಾ ಹಾವು ಹಿಡಿಯುವುದು, ಅದು ಇಗಾ ಆರಂಬದಾ ಹಂತಕ್ಕೆ ಬಂತು, ಮಲ್ಲಪ್ಪಾ ಹಾವು ಇರುವದನ್ನು ತೋರಿಸಿದಾ,
"ನೀವ್ ಇಲ್ಲೆ ಹಿಂದಕ್ ಹೋಗಿ ನಿಲ್ಲರಿ, ನಾ ಟೆಬಲ್ ಮ್ಯಾಲ ಹತ್ತಿ, ಅದನ್ನಾ ತೆಳಗ ಕೆಡವಿ, ಹಿಡಿತಿನಿ " ಅಂತಾ ದ್ಯಾಮಪ್ಪನಾ ಮಾತಿಗೆ ಮಲ್ಲಪ್ಪಾ ಸಮ್ಮತಿಸಿದಾ, ಮಲ್ಲಪ್ಪಾ ಕಣ್ಣು ಮುಚ್ಚಿ ಕಣ್ಣು ತಗೆಯುವದರೊಳಗಾಗಿ, ದ್ಯಾಮಪ್ಪಾ ತಾಟಿನಿಂದಾ ಹಾವನ್ನಾ ಕೆಳಗೆ ನೂಕಿ, ಕಟ್ಟಿಗೆಯಾ ಸಹಾಯದಿಂದಾ, ಹೆಡೆ ಹತ್ರಾ ಅದುಮಿ, ಒಂದು ಕೈಯಿಂದಾ ಬಾಲ ಒಂದು ಕೈಯಿಂದಾ ಮುಖ ಹಿಡಿದು ತಾ ತಂದಾ ಚಿಲದಾ ಒಳಗಡೆ ಹಾಕಿದಾ, ಮಲ್ಲಪ್ಪನಿಗೆ ಈಗ ಅರಿವಾಯಿತು, ಅವನ ಕಾರ್ಯಕ್ಷಮತೆ, ಜ್ಞಾನ, ಅವನು ಆಡಿದಾ ವಿಜ್ಞಾನದಾ ಜ್ಞಾನ ಮಲ್ಲಪ್ಪನನ್ನಾ ಸಂಪೂರ್ಣ ಆವರಿಸಿ, ಮುಖದಲ್ಲಿ ವಿಜಯದಾ ಚಿಹ್ನೆ ಝೇಂಕರಿಸಿತು.
"ಆಯ್ತು ನೋಡ್ರೀ, ಇಷ್ಟರಿ ಕೆಲಸಾ, ಇನ್ನ ಮ್ಯಾಲ ಏನು ಹೆದುರುದು-ಗಿದರುದ ಮಾಡಾಕ ಹೋಗಬ್ಯಾಡ್ರಿ, ಮೊದಲ್ ಹಿತ್ತಲಕಾ ಕಾಂಪೌಂಡ ಕಟ್ಟಸರಿ, ಇದನ್ನ ಹೋಗಿ ಗುಡ್ಡಕ್ ಬಿಟ್ಟ ಬರತೇನರೀ, ಇನ್ನೊಮ್ಮೆ ಬರತೇನರಿ ಮನಿ ಕಡೆ, ನಿಮಗ ಬೆಕಂದ್ರ ಇನ್ನು ಹಾವಿನ ಬಗ್ಗೆ ಹೇಳತೇನ್ರೀ, ನಿಮಗ ಬೇಕ್ ಅಂದ್ರ ನನ್ನ ಕಡೆ ಬುಕ್ಸ ಅದಾವರೀ, ತಗೊಂಡ ಬರತೇನ್ರಿ" ಅಂತಾ ಹೆಳಿ, ಹಿಂದೆ ನೊಡದೆ, ಮಂದಹಾಸದಾ ನಗೆಯಿಂದಾ ದ್ಯಾಮಪ್ಪಾ ಹೊರಟಾ, 
ಮಾರನೆಯ ದಿನಾ ಆಫಸಿನಾ ಸಹೊದ್ಯೊಗಿ ಸುರೇಶ ಮನೆಗೆ ಬಂದಾ, "ನಿನ್ನೀ ನ್ಯಾಸರಗಿ ದ್ಯಾಮಪ್ಪ ಬಂದ ಹಾವಾ ಹಿಡಕೊಂಡ ಹೊದ ಅಂತಾ ",
"ಹೂನರಿ, ಥ್ಯಾಂಕ್ಸರೀ, ನೀವ ಪೋನ್ ಮಾಡಿ ಹೇಳಲಿಲ್ಲಾ ಅಂದ್ರಾ, ಏನ್ ಆಕ್ಕಿತ್ತೊ ಎನೋ!!, ಪಾಪ ಆ ಮೂಕ ಪ್ರಾಣಿಗೆ ಏನ್ ಮಾಡತಿದ್ದೋ ಏನೋ, ಆದ್ರ್ ನನಗ ಒಂದ್ ಮಾತ್ ತಿಳಿಲಿಲ್ಲಾ, ಅವಾ ಹೈಸ್ಕುಲ್ ನ್ಯಾಗ ಪ್ಯೂನ್ ಅದಾನಲಾ.., ಆದರಾ ಇ ಹಾವಗೊಳ್ ಬಗ್ಗೆ ಅವಂಗ ಇರೋ ಜ್ಞಾನ ನೋಡಿದರ್, ಅದರ್ ಮ್ಯಾಲ ಪಿ.ಎಚ್,ಡಿ ಮಾಡ್ಯಾನ ಅನಸತೇತಿ" ಅಂತಾ ಮಲ್ಲಪ್ಪಾ ತನ್ನ ಉಹಾಪೊಹಗಳನ್ನು ಬಿಚ್ಚಿಟ್ಟಾ.
"ಅನಸ್ತೇತೀ.., ಎನ್ರೀ, ಅದಾನ ಅವಾ, ಇಂಟರ್ನ್ಯಾಸನಲ್ ಲೆವೆಲ್ ನ್ಯಾಗ್ ಅವನು ಹಾವಗೋಳ್ ಬಗ್ಗೆ ಆರ್ಟಿಕಲ್ ಪಬ್ಲಿಶ ಆಗ್ಯಾವ ಅಂತಾ, ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಅನ್ನೋ ಹಾಗೆ, ಬಹಳ ಸಾಧಾರಣಾ ಮನುಷ್ಯಾ ಅವಾ, ತನ್ನ ಬಗ್ಗೆ ಯಾರಿಗು ಹೇಳಿಕೊಳ್ಳುಲ್ಲಾ",
"ನಿಮಗ ಇದೆಲ್ಲಾ ಹೆಂಗ್ ಗೊತ್ತಾತ್ರೀ?",
"ನನ ಫ್ರೆಂಡ ಒಬ್ಬಾವ, ಅದಾ ಊರಾನ್ನಾವ, ನಿನ್ನೆ ಸಿಕ್ಕಿದ್ದಾ ಅವಾ ಎಲ್ಲಾ ಹೆಳಿದ್ದ ನನಗ" ಅಂತಾ ಇಲ್ಲಿಯವರೆಗೆ ದ್ಯಾಮಪ್ಪನ ಬಗ್ಗೆ ನಡೆದಾ ಕಥೆಯಲ್ಲಾ ಹೆಳಿದಾ.
"ಓ: ಮಗಾ ಮಾಮ್ಲೆದಾರ ಆಗಲಿಕ್ಕು ಹೈಸ್ಕುಲ್ ನ್ಯಾಗ ಪ್ಯೂನ್ ಆಗಿದ್ದಕ್ಕ, ಹಾಲ ಸಿಗಲಿಕ್ಕು ಮಜ್ಜಗಿ ಕುಡದಾಂಗ ಆಗಿರಬೇಕ್",
"ಇಲ್ಲಾರಿ, ಆ ಮಹಾತಾಯಿ ಇಗಾ ಇಲ್ಲರೀ, ಇವಂಗ ಆರಾಮಾಗಿ ಕಣ್ಣ ತಗದಾ ಮ್ಯಾಲ ಎದ್ದ ಇವನಾ ದ್ವನಿ ಕೆಳಿ, ಅವಳು ಕಣ್ಣ ಮುಚ್ಚಿಳ್ಳ ಅಂತಾ, ಇವನಾ ಯವ್ವಾ ಅನ್ನೋ ಕೂಗಿನ ಸಮಂದ ಜಿವಾ ಹಿಡಕೋಂಡ ಕುಂತಿಳ್ಳ ಅಂತ, ಊರಾನ್ ಮಂದಿ ಅನಕೋಕತಿರ್ ಅಂತಾ, ದಿನಾ ಅಕಿ ದ್ಯಾಮವ್ವನ ಅಂತೇಕ ಹೋಗಿ, ನನ್ನ ತಗೊ ನನ್ನ ಮಗನ್ನ್ ಉಳಿಸು ಅಂತಾ, ಕೊನಿಗಿ ದ್ಯಾಮವ್ವಾ ಹಂಗ ಮಾಡಿಳ್ಳು ಅಂತಾ ಅನಕೊಕತಿರಂತ " ಅಂದು ಸುರೇಶ ಸ್ವಲ್ಪ ಮೌನವಾದ.
"ಯಪ್ಪಾ, ಶಿವನಾ ಹಿಂಗ ಮಾಡುದಾ ನಿ ನಿನ್ನ ಮಕ್ಕಳಿಗೆ, ಆಕಳಂತಾ ಮನಸ್ಯಾಳಗೆ ಹಿಂಗ ಮಾಡಬಾರದಿತ್ತ ನೀ" ಅಂದಾ ಮಲ್ಲಪ್ಪಾ.
"ಇದಾ ಚಿಂತ್ಯಾಗ್, ದ್ಯಾಮಪ್ಪಾ, ಏನು ತಪ್ಪ್ ಮಾಡದಿರೋ ನಮ್ಮ ಅವ್ವಗಾ ಹಿಂಗ್ಯಾಕ ಆತಿ ಅಂತಾ, ಇದರ ಮೂಲಾ ಕಂಡು ಹಿಡಿಬೆಕಂತಾ ಛಲಾ ತೊಟ್ಟನಂತ, ಅವತ್ತ ಇ ಹಾವಿನಾ ಬಗ್ಗೆ, ದೆವರ ಬಗ್ಗೆ ತಿಳಕೊಳ್ಳುದುಕ ಸ್ಟಾರ್ಟ ಮಾಡಿದಾ, ಇದಾ ಛಲದಿಂದಾ ಇಂಗ್ಲೀಷ ಕಲಿತಾ, ಗೊತ್ತಿರೋ ಎಲ್ಲಾ ಲೈಬ್ರರಿಗೆ ಹೋಗಿ ಪುಸ್ತಕಗಳನ್ನು ಹುಡಕಿ ಓದಿದಾ, ಅವನಾ ಜ್ಞಾನ ಬೆಳಿತಾ ಹೊತ, ಇದರಿಂಬಾಲಿ, ಎಸ್.ಎಸ್.ಎಲ್.ಸಿ ಮತ್ತ ಪಿ.ಯು.ಸಿ ಢಿಸ್ಟಿಂಕ್ಷನ್‍ನ್ಯಾಗ ಪಾಸ ಆದಾ, ಇದಕೆಲ್ಲಾ ಗೌಡ್ರ ಅವಂಗಾ ಓದಿಸಿ ಪಿ.ಯು.ಸಿ ಮುಗಿದಾ ಮ್ಯಾಲಾ ಅಲ್ಲೆ ಪ್ಯೂನ ಕೆಲಸಾ ಕೊಡಸಿದ್ರು, ಅವರವ್ವನ ಆಸೆಯಾಂಗ ಅವಂಗು ಮಾಮ್ಲೆದಾರ ಆಗಬೆಕಂತಾ ಇತ್ತು, ಅವನ ಜ್ಞಾನ ವಿಜ್ಞಾನದ ದಾಹ ಹೆಚ್ಚಿನಾ ವ್ಯಾಸಂಗಾ ಮಾಡದಿದ್ರು, ಅಲ್ಲೆ ಪ್ಯೂನ್ ಕೆಲಸಾ ಮಾಡತಾ ಎಲ್ಲಾ ತರಾ ಪುಸ್ತಕಗಳಾ ಸಹಾಯದಿಂದಾ ಓದುತಾ, ಎಲ್ಲಾ ತರಾ ಎಕ್ಷಪೆರಿಮೆಂಟನು ಮಾಡಿ ಜ್ಞಾನವನ್ನಾ ಬೆಳೆಸಿಕೊಂಡಾ" ಅಂತಾ ಸುರೇಶ ಸುಮ್ಮನಾದ.
"ಅವನ ಅವ್ವ ಅನಕೊಂಡಿರೋ ಮಾಮ್ಲೆದಾರ ಆಗಲಿಕ್ಕು, ಹಾವಿನಾ ಬಗ್ಗೆ, ದೇವರ ಬಗ್ಗೆ, ಜನರಲ್ಲಿರೊ ಅಪನಂಬಿಕೆಯನ್ನು ಹೋಗಿಸಿ, ಏನು ಅರಿಯದಾ ಮುಗ್ದ ತಾಯಿಯರಾ ಆಸರೆ ಆಗಬೆಕಂತಾ, ಇ ಹಾವು ಹಿಡಿಯುದು, ಎಲ್ಲೆಲ್ಲಿ ಎಷ್ಟೆಷ್ಟು ಆಕ್ಕೆತೊ ಅಲ್ಲಿ ಇ ಅಂದಕಾರದಾ ಕತ್ತಲನ್ನು ತನ್ನ ಜ್ಞಾನದಾ ಸಹಾಯದಿಂದಾ ಓಡಿಸುತಿದ್ದಾ, ಇ ಜ್ಞಾನ ವಿಜ್ಞಾನದಾ ಬಗ್ಗೆ ಅರಿವು ಮೂಡಿಸೋದು ಅವನಾ ಕೆಲಸಾ ಅಗೇತೀ, ಇದರ್ರ ಬಗ್ಗೆ ಸಾಕಷ್ಟು ಬುಕ್ಸ ಬರದಾನು, ನಮಗ ಅವ್ಕುರ್ ಬಗ್ಗೆ ಅರಿವಿಲ್ಲಾ ಅಷ್ಟೇ" ಇ ಮಾತುಗಳನ್ನಾ ಕೇಳಿದಾ ಮೆಲೆ ಮಲ್ಲಪ್ಪನಿಗೆ ಅವನಾ ವ್ಯಕ್ತಿತ್ವದಲ್ಲಿ ಅಪಾರ ಗೌರವಾ ಹುಟ್ಟಿತು.
"ಅಷ್ಟ ಅಲ್ಲಾ..., ಅವನು ತನ್ನ ತಾಯಿ ಹೆಸರ ಮ್ಯಾಲ, ಒಂದು ವ್ರದ್ದಾಶ್ರಮಾ ತಗದಾನು ಅದಾ ಹಳ್ಳ್ಯಾಗ, ಆಸರೆ ಇಲ್ಲದಾವರಿಗೆ ಅಲ್ಲಿ ಇಟಗೊಂಡು ಅವರನ್ನಾ ತನ್ನ ತಾಯಿಗತೇ ಸೆವೆ ಮಾಡಾಕತಾನು, ನನಗು ಇದನ್ನ ಕೇಳಿ ಕಣ್ಣಾಗ ನೀರ ಬಂತು, ಯಾಕಂದ್ರ ನಮ್ಮ ಅವ್ವಗೊಳ್ ಬದುಕಿದ್ದೂ, ಒಂದು ದಿನಾನು ಕೇಳಲಿಲ್ಲಾ, ಯವ್ವ ನಿನಗೆ ಏನ ಬೇಕ ಅಂತಾ, ಹೆಂಡತಿ ಮಾತ ಕೆಳಕೊಂಡ, ಒಮ್ಮೊಮ್ಮೆ ಏನ್ ಮುದಕಿ ಸುಮ್ಮನಾ ಕುಂದ್ರಾಕ ಆಗುಲ್ಲಾ ಅಂತಾ ಬೈಯ್ತಿನಿ, ಪಾಪ ನಮ್ಮ ಅವ್ವ ಒಂದು ಮಾತ ಆಡುದಿಲ್ಲಾ, ಬರ್ರೀ, ಇಬ್ಬರು ಹೋಗಿ, ದ್ಯಾಮಪ್ಪನ ಬೆಟ್ಟಿ ಆಗಿ, ಎಷ್ಟ ಆಕ್ಕೆತೋ ಅಷ್ಟ ವ್ರುದ್ದಾಶ್ರಮಕ್ಕ ರೊಕ್ಕಾ ಕೊಟ್ಟ ಬರುನ್ರಿ, ಹಂಗ ಬರುವಾಗ ನನ್ನ ಅವ್ವಗಾ ಒಂದು ಸಿರಿ ತಗೊಂಡ ಬರುನ್ರೀ"
ಕೆಲಸದಾ ವತ್ತಡವೋ, ಹೊಸಾ ಪ್ರೇಮದಾ ಅಂದಕಾರವೋ, ಮರೆತಿದ್ದರು ಮೊದಲ ಪ್ರೀತಿಯ ಒಲವು, ಇಬ್ಬರಲ್ಲು ಎನೋ ಒಂದು ಅಭಾವದ ಬಾವುಕತೆ ಕೊರಗುತ್ತಿತ್ತು, ಹಾಗೆ ಹೊರಗಡೆ ಹೋದರು.
ಪ್ರೀಂiÀi ಓದುಗರೇ, ಇದನ್ನಾ ಓದಿದ ಮೇಲೆ, ನಮ್ಮ ಮೊದಲ ಪ್ರೀತಿಗಾಗಿ, ನಾವು ನಮ್ಮ ತಾಯಿಯ ಒಂದು ಚಿಕ್ಕ ಆಸೆಯನ್ನು ಪೂರೈಸೊಣವೇ?..........

================== ಮುಕ್ತಾಯ ==========================




1 comment:

  1. A mother is she who can take the place of all others,but whose place no one else can take.

    M-Million things avaru namge kodatare
    O-Aratha matra adhu avrige growings old
    T- Kanniru horasuthare avaru namge
    H- Avara hrudhaya bangara Edahage
    E-Avara kannina jothe preeti belaku shining
    R-Aratha avaru sari yagi mathu sari yadha
    Dhari thurusuthare yavagalu avaru sari yagi
    Erathare Edi avarigu helaru together avaru
    Spell MOTHER anu padhagala aratha
    Prapanchane to nam kaiyalli Eruhage

    ReplyDelete