"ನಾಳಿ... ಅಗಷ್ಟ ಪಂದ್ರಾ ಐತಿ, ಎಲ್ರೂ ಸಾಲಿಗಿ, ಸ್ವಚ್ಚನ್ನೂ ಯುನಿಫಾರ್ಮ ಹಾಕೊಂಡ್, ಕಟಿಂಗ್ ಮಾಡಿಸ್ಕೊಂಡ್ ಬರಬೇಕ್, ಭಾಷಣ ಯಾರ್ಯಾರ ಮಾಡತಿರೋ ಅವ್ರು ಬರೋಬ್ಬರ್ ಬಾಯಪಾಟ ಮಾಡಕೊಂಡ್ ಬರಬೇಕ್, ತಿಳೀತೋ ಇಲ್ಲೋ" ಅಂತಾ 5ನೇ ಕ್ಲಾಸಿನ್, ಕ್ಲಾಸ್ ಟೀಚರ್ ವರಲಕ್ಷ್ಮಿ ಕೇಳಿದರು, "ಹೂನ್ರಿ ಮೆಡಮ್" ಅಂತಾ ವಿದ್ಯಾರ್ಥಿಗಳು ಹೇಳಿದರು, ಕ್ಲಾಸ್ ಬಿಟ್ಟ ಮೇಲೆ ಎಲ್ಲ ಹುಡುಗರ ನಡುವೇ ನಾಳೆಯ ತಯಾರಿಯಾ ಡಿಸ್ಕಶ್ಯನ್ ನಡೆಯಿತು, ಮೊದಲು ಬಟ್ಟಿಗಳಾ ಮೇಲೆ, ಬಟ್ಟೆ ವಾಷ್ ಮಾಡೋಂದರಿಂದಾ ಹಿಡಿದು, ಐರನ್ ಮಾಡಿ, ಬೆಳಿಗ್ಗೆ ಎದ್ದು ಹೇಗೆ ಇನಶರ್ಟ ಮಾಡಬೇಕು ಅನೋವರೆಗೂ ಆಯಿತು, ಆಮೇಲೆ ಕಟಿಂಗ್ ಮಾಡೋ ವಿಷಯ ಬಂತು,
"ನಾನು ಡಿ.ಡಿ.ಎಲ್.ಜೆ ಶಾರುಖ್ ಕಟಿಂಗ್ ಮಾಡಿಸ್ತೀನಿ" ಅಂತಾ ಒಬ್ಬಾ, ಇನ್ನೋಬ್ಬ ಸಲ್ಮಾನಖಾನ್, ಮತ್ತೋಬ್ಬ ಅನೀಲ ಕಪೂರ್, ಎಲ್ಲಾ ಹುಡುಗರು ತಮ್ಮ ಘನತೇಗೇಗೋ ಇಷ್ಟಕ್ಕೋ ದೇವರಾ ಮುಂದೀರೋ ಬೆಳ್ಳಿ ಬಂಗಾರದಾ ಆರತಿ ತಟ್ಟೆಯ ತರಾ ತಾವೇ ಹೀರೋಗಳಾಗಿ ಸ್ಟೈಲ್ ಹೊಡೆದರು, ರಂಗ ಒಂದು ವಾರದಾ ಹಿಂದೆಯೇ ಡಿ.ಡಿ.ಎಲ್.ಜೆ ನೋಡಿದ್ದಾ, ಅವನು, ಮುಂದಿನಾ ಕುರಿ ಯಾಕೇ ಬ್ಯಾ ಅಂತು ಅಂತಾ ಗೊತ್ತಿಲ್ಲದೇ ಹಿಂದಿನಾ ಕುರಿನೂ ಬ್ಯಾ ಅಂತತ್ತೇ ಅನ್ನುವಹಾಗೇ ಇವನು ಶಾರುಖ್ ಕಟಿಂಗ ಮಾಡಿಸಬೇಕೆಂದು ಮನೆಗೇ ಬಂದಾ.
..............................................
"ಎಜ್ಜಾ... ನಾ ಕಟಿಂಗ್ ಮಾಡಿಸಬೇಕ್, ನನಗ ರೊಕ್ಕಾ ಕೋಡ್"
"ಇಗ್ಯಾಕಲೇ ಕಟಿಂಗ್, ಮನ್ಯರ ಮಾಡಿಸಿಲಾ, ಹೊಲದಾಗ ಕರಕೀ(ಹೋಲದಲ್ಲಿ ಬೆಳೆಯುವಾ ಕಸ) ಬ್ಯೆಳಿಲ್ದ್, ಸುಮ್ ಸುಮ್ನ ಕಳೇ ಕಿಳ್ಳಂದೀ" ಅಂತಾ ರಂಗನಾ ಅಜ್ಜ ಶಿವಪ್ಪಾ ಹೇಳಿದಾ.
"ಹೇ, ನಿನಗ ಗೊತ್ತಿಲ್ಲಾ, ನಾಳಿ ಅಗಷ್ಟ ಪಂದ್ರಾ, ಸಾಲ್ಯಾಗ್ ಕಟಿಂಗ್ ಮಾಡಿಸ್ಕೋಂಡ್ ಬಾ ಅಂದಾರು", ಶಿವಪ್ಪಾ ಕಿಸೇ(ಜೋಬು)ಗೇ ಕೈ ಹಾ 2 ರೂಪಾಯಿ ತಗೇದು ರಂಗನಾ ಕೈಗೇ ಕೋಟ್ಟಾ.
"ಇನ್ನೂ ಯಾವ ಜಮಾನಾದಾಗ ಅದೀ ನೀ, 2 ರೂಪಾಯಿದಾಗ ಎನೂ ಆಗುಲ್ಲಾ, 5 ರೂಪಾಯಿ ಕೊಡ್",
"ಏನೋಲೇ, ಯಾವವಾ 5 ರೂಪಾಯಿ ತಗೋವಾವ, ಇನ್ನೋಂದ ರೂಪಾಯಿ ತಗೋ ಏನರಾ ಅಂದ್ರ ಬಂದ್ ಹೇಳ್ ನನಗ್" ರಂಗನಾ ಗೆಳೆಯರು ಶಾರುಖ್, ಸಲ್ಮಾನ್ ಕಟಿಂಗ್ ಗೇ 5 ರೂಪಾಯಿ ಅಂತಾ ಮಾತಾಡಿದ್ದರು, ರಂಗನಾ ಆಸೇ, ಕನಸು, ಗುರಿ ಒಂದೇ ಆಗಿತ್ತು, ಹೇಗಾದರು ಮಾಡಿ 5 ರೂಪಾಯಿ ಗಿಟ್ಟಿಸಿ ಶಾರುಖ ಕಟಿಂಗ್ ಮಾಡಿಸುವುದು, ಸ್ವಲ್ಪ ನೋವು ಮತ್ತು ಕೋಪ ಕಣ್ಣಿನಲ್ಲಿ ಮಾತನಾಡಿದವು.
"ನನಗ ಅದೇನು ಗೊತ್ತಿಲ್ಲಾ, ನನಗ 5 ರೂಪಾಯಿ ಬೇಕ್, ನಮ್ಮ ದೋಸ್ಥಗೋಳೆಲ್ಲಾ ಶಾರುಖ್ ಕಟಿಂಗ್ ಮಾಡಸಾಕತಾರು, ನಾಳಿ ನಂದು ಭಾಷಣ ಐತೀ, ನಾನು ಎಲ್ಲಾರಮುಂದ ಚೆಂದ ಕಾಣಬೇಕೋ ಬ್ಯಾಡೋ",
"ಅದ್ಯಂತಾ ಶ್ಯಾರುಖ್ ಕಟಿಂಗ್ ಲೇ, ನಾ ಎಲ್ಲೀ ಅದನ್ನಾ ಕೇಳೇ ಇಲ್ಲಾ, ಎನ್ ಹುಡುಗೋರೋ ನಿವಾ, ನಾಳಿ ಭಾಷಣದಾಗ ಏನ್ ಮಾತಾಡಾಕತೀ.
"ನಮ್ಮ್ ಸಾಲ್ಯಾಗಿನ್ ಸರ್, ಬರದ ಕೊಟ್ಟಾರೂ, ಮಹಾತ್ಮಾ ಗಾಂಧಿ ಮ್ಯಾಲ, ಅವರು ಹೆಂಗ ಸ್ವತಂತ್ರಾ ತಂದ ಕೊಟ್ಟರಂತ್, ನೀ ಗಾಂಧೀ ನಾ ನೋಡೀ? ಅವಾ ಹೆಂಗ ಒಂದು ಬಡಗಿ ಹಿಡಕೊಂಡ ಬ್ರಿಟೀಷರನ್ನಾ ಓಡಿಸಿದಾ?" ರಂಗನಾ ವಯಸ್ಸು ಚಿಕ್ಕದಾದರೂ, ಬುದ್ದಿ ಎಂಬ ಬಳ್ಳಿ ಬೆಳಿಯುವ ಹಂತದಲ್ಲಿತ್ತು, ಅವನಿಗೆ ಬೇಕಾದುದು 5 ರೂಪಾಯಿ, ತನ್ನ ಅಜ್ಜನಿಗೆ ಗಾಂಧಿ ಮೇಲೆ ಗೌರವ ಇರೋದು ಅವನಿಗೆ ತಿಳಿದಿತ್ತು, ಏನಾದರು ಮಾಡಿ 5 ರೂಪಾಯಿ ಪಡದೆ ಪಡೆಯಬೇಕೆಂಬ ಅವನ ವಿಚಾರ.
"ನಾ ಸನ್ನಾವ್ ನಿನ್ನಷ್ಟ ಇದ್ದನೀ ಕಾಂತೇತೀ, ನಮ್ಮಪ್ಪಾ ನನ್ನಾ ಹೆಗಲ್ ಮ್ಯಾಲ್ ಹೊತಗೋಂಡ್ ಬೆಳಗಾವಿಗೇ ಹೊಗಿದ್ದಾ, ಅವಾಗ ನೋಡಿನ್ನೀ, ಎಲ್ಲಾರೂ ಗಾಂಧಿ ಬಂದಾ ಬಂದಾ ಅಂತಾ ಕೈ ಮುಕ್ಕೋಂದ್ ನಿಂತ್ರು, ನಮ್ಮಪ್ಪ ನನ್ನಾ ಗಿಡದ ಮ್ಯಾಲ ಹತ್ತಿಸಿ ನೋಡ ಅಂದಾ, ಅವಾಗ್ ನೋಡಿನ್ನಿ, ಅದೂ ದೂರಿಂದಾ, ಗಾಂಧಿ ಕೈಯಾಗ ಬಡಗಿ ಹಿಡಕೊಂಡ ಹೋಗಾಕತಿದ್ದಾ, ಅವನ್ ಹಿಂದ ಸಾವಿರ್ ಮಂದಿ ದಪೋ ದಪೋ ಅಂತಾ ಹೋಗಾಕತಿದ್ರು, ಭಾರೀ ಮನಷ್ಯಾ ಬಿಡ್ ಅವಾ, ಆ ಬಡಗಿದಾಂಗ ಅವನ ಮನಸ್ಸು ಗಟ್ಟಿ ಇತ್ಯಂತ್, ಅದ ಗಟ್ಟೀ ಮನಸ್ಲೇ ಅವಾ ಬ್ರಿಟೀಷರನ್ನಾ ಒಡಿಸಿದಾ ಅಂತಾರು " ಶಿವಪ್ಪಾ ಒಬ್ಬ ರೈತಾ, ಇತಿಹಾಸ ಜ್ಞಾನ ಇಲ್ಲದಿದ್ದರೂ, ತಾನು ತಿಳಿದಾ ಕೇಳಿದಾ ಜ್ಞಾನದಿಂದಾ ಹೇಳಿದಾ.
"ಓ.. ಹಂಗಾರ್ ನನಗೂ 5 ರೂಪಾಯಿ ಕೊಡ್, ನಾನು ನಾಳೆ ಒಂದು ಬಡಗಿ ಹಿಡಕೊಂಡ ಭಾಷಣಾ ಮಾಡತೇನೀ" ಶಿವಪ್ಪಾ ಒಮ್ಮೆ ರಂಗನಾ ಮುಖ ನೋಡಿ.
"ಅದೇನ್ ಮಾಡ್ತೀ ಶಾರುಖ್ ಕಟಿಂಗ್, ನಾ ಹೇಳಿದ್ ಕಟಿಂಗ್ ಮಾಡಿಸ್ಕೋ, ಕಟಿಂಗ್ ಗಾ 3 ರೂಪಾಯಿ ತಗೋತಾರು, 2 ರೂಪಾಯಿ ನಿನ್ನ ಕರ್ಚಿಗೇ ಇಟಗೋ" ಎಂದು ಹೇಳಿದಾ. ತಕ್ಷಣ, ರಂಗನಾ ರಂಗಾದ ಮುಖದಲ್ಲಿ ಹೊಸ ಹೊಸ ಬಣ್ಣಗಳಾ ಆಸೆಗಳಾ ಚಿತ್ತಾರ ಹಾಕಿತು, 2 ರೂಪಾಯಿಯಲ್ಲಿ ಏನೇನು ಮಾಡಬಹುದು, ನಾಳೆ ತನ್ನ ಗೆಳೆಯರಲ್ಲಿ ತಾನೇ, ಬಿಲ್ಲ ಗೇಟ್ಸ ತರಾ ಭಿಗಬಹುದು, ತನಗೇ ಎನು ಬೇಕಾದ್ದ ತಿಂಡಿ ತಿನಸುಗಳನ್ನು ತಗೋಬಹುದು, ಪಾಪಡಿ, ಚಕ್ಕುಲಿ, ಕೊಬ್ಬರೀ ಮಿಟಾಯಿ, ಬಿಸ್ಕತ್ತಗಳಾ ನೆನಪಲ್ಲಿ ನಾಲಿಗೇಯಲ್ಲಿ ನೀರಿನಾ ಧಾರೇ ರಭಿಸಿತು, ಕನಸಿನಲ್ಲಿಯೇ ಅವನು ಮಗ್ನನಾದಾ.
"ಹಾ.. ಹೇಳ್, ನಾ ಹೇಳಿದ್ದ ಕಟಿಂಗ್ ಮಾಡಿಸ್ಕೋತೀ" ಈಗಾ ರಂಗನಿಗೇ ನೈಜತೇಯ ಘಂಟೆ ಮೊಳಗಿತು.
"ಹಾ... ಹಾ.... ಮಾಡಿಸ್ಕೋತೇನಿ, ಯಾವುದು ಹೇಳು" ರಂಗನ ಆಸೆ, ಕನಸು, ಗುರಿ ಬದಲಾಗಿದ್ದ ಅರಿವು ಅವನಿಗೆ ಇರಲಿಲ್ಲಾ,
"ಗಾಂಧಿ ಕರಾಫ ಮಾಡಿಸ್ಕೋ, ತಗೋ ಇ 5 ರೂಪಾಯಿ, ಉಳದ್ ರೊಕ್ಕಾ ನೀನ ಇಟ್ಟಗೋ", ರಂಗನಾ ಸಂತೋಷಕ್ಕೆ ಪಾರವೆ ಇರಲಿಲ್ಲಾ, ಅವನ ಕಿವಿಯಲ್ಲಿ ಉಳಿದದ್ದೂ ಒಂದೇ "ಗಾಂಧಿ ಕರಾಫ", ಕೈಲಿ ಇರುವುದು 5 ರೂಪಾಯಿ, ಜೊತೆಗೆ ನೂರಾರು ಕನಸುಗಳು, ಕನಸಿನಾ ಬಣ್ಣಗಳೆಲ್ಲಾ ಅವನು ಹೋಗುವ ದಾರಿಯ ತುಂಬೆಲ್ಲಾ ರಂಗವಲ್ಲಿ ಹಾಕುತಾ ಸ್ವಾಗತಿಸಿದವು.
.................................................
ಹೇರ್ ಕಟ್ಟಿಂಗ್ ಶಾಪಗೆ ರಂಗಾ ಬಂದಾ, ಇವನ್ ತರಾ 2-3 ಹುಡುಗರು, ಇಬ್ಬರು ದೊಡ್ಡವರು ತಮ್ಮ ತಮ್ಮ ಸರದಿಗಾಗಿ ಕಾಯುತ್ತಿದ್ದರು, ಇವನು ಹೋಗಿ ಅವರಲ್ಲೊಬ್ಬಾದ, ಕಾಯುವುದು ಕಣ್ಣುಗಳಿಗೋ ಮನಸ್ಸಿಗೋ ಗೊತ್ತಿಲ್ಲಾ, ಆದರೆ ಇವನ ಕಣ್ಣು ಮನಸ್ಸುಗಳಾ ತುಂಬೆಲ್ಲಾ ಕನಸುಗಳಾ ಬಣ್ಣಾ ತೂರಾಡುತಿತ್ತು, ರಂಗನ ಸರದಿ ಬಂತು, ಕುರ್ಚಿಯ ಮೇಲೆ ಕುಳಿತಾ, ಕಟಿಂಗ್ ಮಾಡೋ ಯಲ್ಲಪ್ಪನಿಗೇ ತುಂಬಾ ಶಾಖ್ ಆಯಿತು, ಇಲ್ಲಿ ಬಂದು ಹೋಗೋ ಇವನಾ ವಯಸ್ಸಿನಾ ಹುಡಗರು ಕಟಿಂಗ್ ಬೇಡಾ ಬೇಡಾ ಅಂತಾರೇ, ಅವರ ತಂದೆ ತಾಯಿಗಳು ಬಂದು ಬಲವಂತವಾಗಿ ಮುಂದೆ ನಿಂತು ಕಟಿಂಗ್ ಮಾಡಿಸ್ತಾರೆ, ಕೆಲವು ತಂದೆ ತಾಯಿಗಳು ಬಂದು ಅವನು ಆ ಸ್ಟೈಲು ಇ ಸ್ಟೈಲು ಅಂತಾ ಹೇಳಿದ್ರೆ ಕೇಳಬೇಡಿ, ಸುಮ್ನೇ ಬೇಬಿ ಕಟಿಂಗ್ ಮಾಡಿ ಅಂತಾ ಬೇಯ್ದು ಹೋಗ್ತಾರೇ, ಆವಾಗ ಹುಡಗರು ಬಾಲಾ ಸುಟ್ಟಿರೋ ಬೆಕ್ಕು ತರಾ ಮುಖಾ ಮಾಡ್ಕೋಡು ಕೂಡ್ತಾರೇ, ಆದರೇ ಇವನೂ ನಗತಾ ನಗತಾ ಕೂತಿದಾನೇ ಇವನ ಜೊತೆಗು ಮನೆಯವರು ಯಾರು ಬಂದಿಲ್ಲಾ ಅಂತಾ ಶಾಖ್ ಆಯಿತು.
"ಯಾವ ಕಟಿಂಗ್ ಮಾಡ್ಲಿ?",
"ಗಾಂಧಿ ಕರಾಫ", ಅಂತಾ ರಂಗ ಸಿಂಹಾಸನದಲ್ಲಿ ಕೂತಿರೋ ರಾಜರ ತರಾ ಹೇಳಿದಾ, ಇದನ್ನಾ ಕೇಳಿ ಯಲ್ಲಪ್ಪನಾ ಶಾಖ್‍ಗೇ ಲಾಖ ಬಿದ್ದಿತು,
"ಗಾಂಧಿ ಕರಾಫಾ", ಅಂತಾ ಯಲ್ಲಪ್ಪ ಶಾಖ್‍ನಾ ಲಾಖ್ ಆಗಿದೇಯೋ ಇಲ್ಲವೊ ಅಂತಾ ಪರಿಕ್ಷಿಸಿದಾ, ಅದಕ್ಕೆ ರಂಗ ಪ್ರೀಜ್ ಕರ ದಿಯಾ ಜಾಯೆ ಅಂತಾ ಸಮ್ಮತಿಸಿದಾ. ರಂಗನಿಗೆ ಗಾಂಧಿ ಕರಾಫ ಅಂದರೇ ಎನೋ ವಿಶೇಷ ಸ್ಟೈಲ್ ಇರಬಹುದು, ಮಹಾತ್ಮಾ ಗಾಂಧೀನೂ ಮೊದಲು ಇ ತರಾ ಸ್ಟೈಲ್ ಮಾಡ್ತಿದ್ರೂ ಅಂತಾ ಅನಿಸುತ್ತೇ ಅಂತಾ ಯಾವ ಯಾವ ವಸ್ತುಗಳನ್ನಾ ಉಪಯೋಗಿಸುತ್ತಾನೆ ಯಲ್ಲಪ್ಪಾ ಅಂತಾ ನೋಡಿದಾ, ಆದರೇ ಯಲ್ಲಪ್ಪಾ ಕೈ ಮಷಿನ್ ನಾ ತಗೊಂಡಾ, ಕೈ ಮಷಿನ್ ಏನು ಮಾಡುತ್ತೇ ಅಂತಾ ರಂಗನಿಗೆ ಗೊತ್ತಿತ್ತು, ಆದರು ಏನೋ ಸ್ಟೈಲ್ ಮಾಡಲು ಉಪಯೋಗಿಸಬಹುದು ಅಂತಾ ಸುಮ್ಮನಾದಾ, ಯಲ್ಲಪ್ಪಾ ರಂಗನಾ ಹಿಂದೆ ನಿಂತು, ತೆಲೆಯ ಹಿಂದಿನಾ ಭಾಗಕ್ಕೆ ಕೈ ಮಷಿನ್ ಗೆ ಕೆಲಸಾ ಕೊಟ್ಟ, ಕುಟ್ಟು ಕುಟ್ಟು ಅಂತಾ ಸದ್ದು ಶಾಪನಾ ತುಂಬೆಲ್ಲಾ ಹರಡಿತು, ಕಣ್ಣು ಮುಚ್ಚಿ ತೆಗೆಯುವದರೋಳಗಾಗಿ ಕೈ ಮಷಿನ್ ಹಿಂದಿನಾ ಭಾಗದಿಂದಾ ತಲೆಯಾ ಮುಂದಿನಾ ಭಾಗಕ್ಕೆ ಬಂದಿತು, ಅದನ್ನು ನೋಡಿ ರಂಗನಿಗೇ ಆಕಾಶದಲ್ಲಿ ಜುಮ್ಮನೆ ಬೆಳಗುವ ಧೂಮಖೇತು ದಪ್ಫನೆ ಭೂಮಿಗೆ ಬಂದು ಬೀಳುವಾ ಹಾಗೆ, ಕನಸುಗಳು ಅರಳುವ ಮೊದಲೇ ಅರುವಿಲ್ಲದಾ ಧೂಮಖೇತು ಬಂದು ಅಪ್ಪಳಿಸಿ ಕನಸುಗಳನ್ನಾ ನುಚ್ಚು ನೂರು ಮಾಡಿತ್ತು,
"ನಿಲ್ಲಸ್ರೀ, ಏನ್ ಮಾಡಾಕತೇರೀ ನೀವು, ಗಾಂಧಿ ಕರಾಫ ಮಾಡ್ರೀ, ಟಕಳ್ಯಾ ಮಾಡೂದ ಅಲ್ಲಾ", ಈಗ ಅರಿವಾಯಿತು ಯಲ್ಲಪ್ಪನಿಗೆ ಕರೋಡಪತಿ ಉತ್ತರ ತಪ್ಪಾಯಿತು ಅಂತಾ.
"ಗಾಂಧಿ ಕರಾಫ ಅಂದ್ರ ಇದಾ, ಪುಸ್ತಕದಾಗ ನೋಡಿ ಇಲ್ಲೋ ಗಾಂಧೀ ಪೋಟೋ, ಅವನ ತ್ಯಲ್ಯಾಗ ಎಲ್ಲಿ ಕೂದ್ಲ ಅದಾವ, ಸುಮ್ನ ಕುಂದ್ರ್, ಪೂರಾ ಮಾಡಿ ಬಿಡ್ತೇನೀ, ಇಲ್ಲಾ ಅಂದ್ರ ನಿಂದ ಅಸಯ್ಯ ಕಾಣತೇತಿ ನೋಡ" ಅಂತಾ ಯಲ್ಲಪ್ಪನ ಉತ್ತರ ಅವನ ಶಾಖ್‍ಗಳ ದ್ವಂದಗಳ ಪರದೆ ಹರಿದು ಉತ್ತರಗಳು ಗೋಚರಿಸಿದವು. ರಂಗನಾ ಕಣ್ಣ ನೀರ ಹನಿಗಳು ಅಳುಕು, ಅಂಜಿಕೆಯಿಲ್ಲದೆ ರಾಜಾರೋಷವಾಗಿ ಹೊರಗೆ ಬಂದವು.
"ಅಜ್ಜಾನ್ ಮಾಡ್ತೇನಿ ಇವತ್ತ್, ಹೋದ್ ಕೂಡ್ಲೆ ಐತೀ ಅವಂಗ್, ಗೋತ್ತಿದ್ದು ಸುಳ್ಳ ಹೇಳಿ ಕಳಿಸ್ಯಾನು" ಇ ತರಾ ಇನ್ನು ಏನೇನೋ, ಮನದಲ್ಲಿ ರಂಗನಾ ತರ್ಕಗಳು ತಾಕಲಾಡುತಿದ್ದವು, ಅವನ ಇ ತಾಕಲಾಟದಲ್ಲಿ ಒಬ್ಬ ಪುಟ್ಟ ಗಾಂಧಿ, ಆ ಪುಟ್ಟ ಅಂಗಡಿಯಲ್ಲಿ ತಯಾರಾಗಿದ್ದಾ, ಆದರೆ ಮನಸ್ಸು ಮಾತ್ರ ತದ್ವಿರುದ್ದದಲ್ಲಿ ಹೋಗುತ್ತಿತ್ತು.
...................................................
"ಗಾಂಧಿ ಅಂತ್ ಗಾಂಧಿ.. ಅವಂಗ ಯಾರು ಟಕಳ್ಯಾ ಮಾಡಿಸಿಕೋಂಡ ಅಡ್ಯಾಡ ಅಂದಿದ್ರು" ಅಂತಾ ಮನದಲ್ಲಿ ತನಗೆ ಅರಿವಿಲ್ಲದಾ ಮಾಡಿದಾ ತಪ್ಪುಗಳನ್ನಾ ಮಹಾತ್ಮಾ ಗಾಂಧೀಜಿಯವರಾ ಹೆಗಲ ಮೇಲೆ ಹೊರಸುತ್ತಾ ಮನೆಗೆ ಹೋಗುತ್ತಾ ಇದ್ದಾ, ಅಷ್ಟರಲ್ಲಿ ಅವನ ಗೆಳೆಯ ಹರೀಶ ಬೆಟ್ಟಿ ಆದಾ.
"ಏನಲೇ ರಂಗ್ಯಾ ಟಕಳ್ಯಾ ಮಾಡಿಸಿಕೊಂಡೀ, ಮುಗ್ಯಾಂಬೋ ಖುಶ್ ಹುವಾ" ಅಂತಾ ಹಿಯಾಳಿಸಿದಾ, ಆಗ ಸಿನಿಮಾ ಎಂಬ ಮಾಯೆ ಇ ಎಲ್ಲ ಪುಟ್ಟ ಹೃದಯಗಳಾ ಭೂಮಿಯಲ್ಲಿ ಆಕ್ಸಿಸನ್ ತರಾ ಆಗಿತ್ತು, ಯಾರಾದರು ತಲೆ ಬೋಳಿಸಿ ಕೊಂಡರೇ ಅವನನ್ನಾ ಮಿಸ್ಟರ್ ಇಂಡಿಯಾ ಸಿನಿಮಾದ ಮುಗ್ಯಾಂಬೂ ತರಾ ಕಾಣುತಿದ್ದರು ಯಾರು ಅವರಾ ಹತ್ತಿರಾ ಹೋಗದೇ ಹಿಯಾಳಿಸುತ್ತಿದ್ದರು, ಇದರಿಂದಾಗಿ ರಂಗನಿಗೆ ಭರಿಸಲಾರದ ದು:ಖ ಅವನ ಹೃದಯದಲ್ಲಿ ಹುದಗಿತ್ತು. ರಂಗಾ ಇನ್ನು ಕೂದಲು ಬರೋವರೆಗು ಶಾಲೆಗೇ ಹೊಗಬಾರದೆಂಬಾ ಮನದಲ್ಲಿ ಗೋಪುರ ಕಟ್ಟುತ್ತಿದ್ದಾ, ಹರೀಶ ಬಂದು ಅದಕ್ಕೆ ಕಲ್ಲು ಹೊಡೆದು ದ್ವಂಸಗೊಳಿಸಿದಾ ಯಾಕೇಂದರೆ ಗೆಳೆಯರಲ್ಲಿ ಇಂತಹ ವಿಷಯ ಮುಟ್ಟಿಸಲು ತಮಠೆ ಬೇಕಿಲ್ಲಾ ಗಾಳಿಯ ಹಾಗೆ ಬಾಯಿಂದಾ ಕಿವಿಗೆ ಅರಿವಿಲ್ಲದೆ ಹೊಗುತ್ತೇ ಎನ್ನುವುದು ರಂಗನಾ ನಂಬಿಕೆ, ಇನ್ನು ಏನು ಮಾಡುವುದು ಎಂದು ವಿಚಾರಗಳ ಮಡುವಿನಲ್ಲಿ ಹರೀಶನಿಗೆ ಏನು ಹೇಳದೆ ಓಡಿದಾ. ಅವನ ಓಟದ ಜೊತೆಜೊತೆಯಾಗಿ ದು:ಖವು ಭಾರವಾಗುತ್ತಾ ಹೋಗಿತು.
"ಏನ್ ಆತೀ ಲಾ, ಕಟಿಂಗ್ ಮಾಡಿಸ್ಕೊಂಡ್ ಹಂಗ ಒಳಗ ಬಂದೀ, ನೀರ ಮುಟ್ಟಿಸಿಕೊಂಡು ಬರಬೇಕಂತಾ ಗೊತ್ತ್ ಆಗುಲ್ಲಾ ನಿನಗ್" ಅಂತಾ ರಂಗನ ತಾಯಿ ಕೇಳಿದಳು.
"ನನಗ್ ಏನು ಬ್ಯಾಡಾ, ಅಜ್ಜಾ ಸುಳ್ಳ್.. ಗಾಂಧಿ ಕರಾಫ ಅಂತಾ ಕಳಿಸಿದಾ, ಅಲ್ಲಿ ಹಜಾಮಾ ಟಕಳ್ಯಾ ಮಾಡಿದಾ, ನಾ ನಾಳಿಂದಾ ಸಾಲಿಗಿ ಹೋಗುಲ್ಲಾ, ಹೋದನಿ ಅಂದ್ರ ಎಲ್ಲಾರು ನನ್ನ ಅಸಯ್ಯ ಮಾಡ್ತಾರು" ಅಂತಾ ರಂಗಾ ಅಳುತ್ತಾ ಹಾಸಿಗೆಯ ಮೇಲೆ ಒದ್ದಾಡುತ್ತಿದ್ದಾ, ಅಷ್ಟರಲ್ಲಿ ಅವನ ಅಜ್ಜ ಶಿವಪ್ಪಾ ಮನೆಯ ಒಳಗಡೆ ಬಂದಾ.
"ಏನಲೇ... ಏನಾತೀ... ಇಷ್ಟಕ್ಕೆಲ್ಲಾ ಅಳತಾರು.. ಹುಚ್ಚಾ",
"ಎಲ್ಲಾ ನೀನ ಮಾಡಿದೀ... ತಗೋ ನಿನ್ನ ರೊಕ್ಕಾ, ನೀನು ಬ್ಯಾಡಾ ನಿನ್ನ ರೊಕ್ಕಾನು ಬ್ಯಾಡಾ, ಹೋಗ್ ಅತ್ತ" ಅಂತಾ ರಂಗ ತನ್ನ ಕೋಪಕ್ಕೆ ರೆಕ್ಕೆ ಪುಕ್ಕಾ ಕೊಟ್ಟು ಹಾರಾಡಲು ಹೇಳಿದಾ.
"ಏನೋಲೇ, ಶಾರುಖ್ ಕಟಿಂಗ್ ಅಂತಾ, ಯಾವ್ ಶಾರುಖ್-ಗೀರುಖ್? ಏನ್ ಮಾಡ್ಯಾನ ಅವಾ ನಮ್ಮ ದೇಶಕ್ಕ, ತಗೋ ನಿನಗಾಗಿ ಒಂದ ಸನ್ನ ಬಡಗಿ ತಗೋಂಡ ಬಂದೇನ್, ನೀನೂ ಗಾಂಧಿಗತೇ ಗಟ್ಟಿ ಮನಸ್ಸ ಮಾಡಿದ್ರಲಾ ಮುಂದ ನೀನು ಗಾಂಧೀ ಗತೇ ಆಕ್ಕೀ, ನಮ್ಮ ದೇಶಕ್ಕಾಗಿ ಏನರಾ ಮಾಡ್ತಿ, ಅಸಯ್ಯ-ಗಿಸಯ್ಯ ಅಂತ ಗಾಂಧೀನೂ ನಿನಗತೇ ಮನ್ಯಾಗ ಕುಂತಿದ್ದ ಅಂದ್ರ ಏನ್ ಆಕ್ಕಿತ್ತೀ ನಮ್ಮ ಗತಿ, ಬರೇ ಭಾಷನದಾಗ ಗಾಂಧಿ ಇದ್ರ್ ಆಗುಲ್ಲಾ, ನಾವು ಮಾಡೂ ಕೆಲಸದಾಗ ಅವಾ ಇರಬೇಕ, ಅವಾಗ ನಮಗೂ ಅವಾ ಎನ ಇದ್ದಾ ಅಂತ ಗೊತ್ತ ಆಗುದು, ತಗೋ ಬಡಗಿ ಇದನ್ನಾ, ನೀನು ಅವನಗತೇ ಮನಸ್ಸ ಮಾಡುದು ಕಲಕೋ, ಏನೇ ಬಂದ್ರೂ ಎದರಿಸ್ತಿನೀ ಅನ್ನುದ್ ಕಲ್ಲೋ, ಅವಾಗ ಗಾಂಧಿ ಮ್ಯಾಲ ಭಾಷನಾ ಮಾಡುದಕ್ಕು ಒಂದು ಅರ್ಥ ಬರತೇತಿ" ಶಿಲ್ಪಗಾರ ಶಿವಪ್ಪನಾ ಕೈಚಳಕಕ್ಕೇ ರಂಗವೆಂಬ ಕಲ್ಲು ಈಗ ಉತ್ತಮ ಶಿಲೆಯಾಯ್ತು, ರಂಗನೀಗೂ ತಾನೂ ಶಿಲೆಯಾಗಿರುವಾ ಅರಿವು ಮೂಡಿ ಸಮಾಧಾನವಾಯಿತು, ತನ್ನ ತಪ್ಪಿನ ಅರಿವಿನಾ ಗೆರೆ ಮೂಡಿತು, ಅವನ ಅರಿವು ಮೂಡಿದಾ ರೀತಿ ಹೇಗಿತ್ತೆಂದರೇ, ಅವನೇ ಎದ್ದು ಅಜ್ಜನಾ ಕೈಲಿರೋ ಕೋಲು ಹಿಡಿದು, ಒಮ್ಮೇ ಅಜ್ಜನಾ ಮುಂದೆ ಅಳುಕಿಲ್ಲದೆ ತನ್ನ ಭಾಷಣವನ್ನು ಹೇಳಿದಾ, ಅಜ್ಜ ಖುಷಿಯಾಗಿ "ತಗೋ ಇ ರೊಕ್ಕಾ, ನಾಳಿ ಝೈಂಡಾ ಏರಿಸೀ, ಭಾಷನಾ ಮಾಡಿ ಬಾ, ನಿನಗ್ ಒಂದು ನೆಹರು ಟೊಪಗಿ ಕೊಡ್ತೇನಿ", ಅಂತಾ ಶಿವಪ್ಪಾ ರಂಗನ ಮುಖಕ್ಕೇ ಒಂದು ಮುತ್ತು ಕೊಟ್ಟಾ.
ರಂಗನ ಹೊಸಾ ಆಸೆಗೇ ಮತ್ತೋಂದು ಚಿಗುರು ಒಡೆಯಿತು, ಅದರಂತೆ ಅವನು ಮಾರನೇ ದಿನಾ ದ್ವಜಾರೋಹನ ಮಾಡಿ, ಭಾಷಣ ಮಾಡಿ, ಭಾಷಣದಲ್ಲಿ ಮೊದಲನೇ ಬಹುಮಾನವನ್ನು ತಗೆದುಕೊಂಡಾ, ಇದನ್ನು ಹೇಳಲು ಮನೆಗೆ ಒಡೋಡಿ ಬಂದಾ, ತನಗೇ ಆದ ಎಲ್ಲಾ ಅನುಭವಗಳನ್ನಾ ಹೇಳಿ ಬಹುಮಾನ ಕೂಡಾ ತೋರಿಸಿದಾ, ಹಾಗೇ ಅಜ್ಜನನ್ನು ಜೋರಾಗಿ ಅಪ್ಪಿಕೊಂಡಾ, ಆಗ ಅವನಿಗೆ ನೆನಪಾಯಿತು ಅಜ್ಜಾ ನಿನ್ನೆ ಹೇಳಿದಾ ನೆಹರು ಟೋಪಿ, ಅಜ್ಜನನ್ನು ನೆಹರು ಟೋಪಿ ಕೊಡು ಅಂತಾ ಕೇಳಿದಾ. ಶಿವಪ್ಪಾ ಒಳಗಡೆ ಹೋಗಿ ಹೊಸದಾಗಿರೋ ಬಿಳಿಯ ನೆಹರು ಟೋಪಿ ತಂದು ಕೊಟ್ಟಾ.
"ಉಹುಂ... ನನಗ್ ಬ್ಯಾಡ ಇದ್, ಮತ್ತ ನೀ ಸುಳ್ಳ ಹೇಳಿದಿ, ಇದ್ ನೀ ಹಾಕೋ ಟೊಪಗಿ, ನೆಹರು ಟೊಪಗಿ ಅಂತಾ ಸುಳ್ಳ ಹೇಳಿದೀ......."
Story mattu Concept Mast Aaithi...Storydag mast messaggu aithi. Namm Hudugurgi Athmaviswash, Chala,Guri aru mudasbekandra intha kathigolu bal prabhav birathavu so keep delevering more and more, all the best :-)
ReplyDeleteThanks Pramod, ella nive namage spoorthi, niva odi ashirvada madidra hintha story galu mathastu barathavu:-)
Delete